ಪೆರ್ಲಂಪಾಡಿ :  ಕೊಳ್ತಿಗೆ ಪೆರ್ಲಂಪಾಡಿ ಮರಾಟಿ ಸಮಾಜ ಸೇವಾ ಸಂಘದಿಂದ  ಆಧಾರ್ ಕಾರ್ಡ್ ನೋಂದಾವಣೆ ಶಿಬಿರ,ಅಂಚೆ ಇಲಾಖೆ ಸೌಲಭ್ಯಗಳ ಮಾಹಿತಿ ಕಾರ್ಯಕ್ರಮ

0

ಪುತ್ತೂರು : ಮರಾಟಿ ಸಮಾಜ ಸೇವಾ ಸಂಘ  ಗ್ರಾಮ ಸಮಿತಿ ಕೊಳ್ತಿಗೆ-ಪೆರ್ಲಂಪಾಡಿ ಮತ್ತು ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇವುಗಳ ಜಂಟಿ ಆಶ್ರಯದಲ್ಲಿ ಮರಾಟಿ ಮಹಿಳಾ ಘಟಕ ಕೊಳ್ತಿಗೆ ಇವರ ಸಹಕಾರದೊಂದಿಗೆ ಸಾರ್ವಜನಿಕ ಆಧಾರ್ ಕಾರ್ಡ್ ನೋಂದಾವಣೆ ಮತ್ತು ತಿದ್ದುಪಡಿ ಶಿಬಿರ ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪ್ರಧಾನ ಕಚೇರಿ ಪೆರ್ಲಂಪಾಡಿ ಇದರ ಸಭಾಂಗಣದಲ್ಲಿ  ನಡೆಯಿತು.

ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಜನಾರ್ಧನ ಗೌಡ ಪೆರ್ಲಂಪಾಡಿ ಅವರು ದೀಪ ಉದ್ಘಾಟಿಸಿ ಮಾತನಾಡಿ, ಮರಾಟಿ ಸಮಾಜ ಸೇವಾ ಸಂಘ ಗ್ರಾಮ ಸಮಿತಿ ಕೊಳ್ತಿಗೆ-ಪೆರ್ಲಂಪಾಡಿಯವರು ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ. ಆಧಾರ್ ಶಿಬಿರದಿಂದ ಗ್ರಾಮದ ಸಾರ್ವಜನಿಕರಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ ಹಾಗೂ ಮುಂದೆಯೂ ಇವರಿಂದ ಸಮಾಜಮುಖಿ ಸೇವಾ ಕಾರ್ಯಕ್ರಮಗಳು ನಡೆಯಲಿ ಎಂದರು.

ಮರಾಟಿ ಸಮಾಜ ಸೇವಾ ಸಂಘ ರಿ ಕೊಂಬೆಟ್ಟು ಪುತ್ತೂರು ಇದರ ಅಧ್ಯಕ್ಷ ಮಂಜುನಾಥ ಎನ್ ಎಸ್ ಮಾತನಾಡಿ, ನಮ್ಮ ಪುತ್ತೂರು ಮರಾಟಿ ಸಂಘದ 16 ಗ್ರಾಮೀಣ ಸಮಿತಿಗಳಲ್ಲಿ ಕೊಳ್ತಿಗೆ ಗ್ರಾಮ ಸಮಿತಿ  ಹಲವಾರು ಸಮಾಜಮುಖಿ ಕೆಲಸಗಳನ್ನು ನಡೆಸುತ್ತ ಸಕ್ರಿಯವಾಗಿದೆ ಮತ್ತು ಗ್ರಾಮದ ಇತರ ಸಂಘ ಸಂಸ್ಥೆಗಳೊಂದಿಗೆ ಉತ್ತಮವಾದ ಬಾಂದವ್ಯವನ್ನು ಹೊಂದಿದೆ ಎನ್ನುವುದಕ್ಕೆ ಕಾರ್ಯಕ್ರಮದಲ್ಲಿ ಸೇರಿರುವ ವಿವಿಧ ಸಂಘ  ಸಂಸ್ಥೆಗಳ ಸದಸ್ಯರ ಇರುವಿಕೆಯೆ ತಿಳಿಸುತ್ತದೆ, ಮುಂದೆಯೂ ಗ್ರಾಮ ಸಮಿತಿಯು ಉತ್ತಮ ಕೆಲಸಗಳನ್ನು ನಡೆಸಲಿ ಎಂದರು.

ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಾಲಗಂಗಾಧರ ಕೆ. ಮಾತನಾಡಿ, ಗ್ರಾಮದಲ್ಲಿ ಹಲವಾರು ಸಂಘಟಣೆಗಳಿದ್ದು ಮರಾಟಿ ಸಂಘವು ಹಲವಾರು ಸಮಾಜಮುಖಿ ಕೆಲಸಗಳನ್ನು ನಡೆಸುತ್ತಾ ಸಕ್ರಿಯವಾಗಿದೆ, ಮುಂದಿನ ದಿನಗಳಲ್ಲಿ ಉತ್ತಮ ಕೆಲಸ ಕಾರ್ಯಗಳು ನಡೆಯಲಿ ಎಂದರು.

ಪೆರ್ಲಂಪಾಡಿ ಅಂಚೆ ಪಾಲಕ ರಾಮಕೃಷ್ಣ ರಾವ್ ಅವರು ಅಂಚೆ ಇಲಾಖೆಯ ವಿವಿಧ ಸೇವಾ ಸೌಲಭ್ಯಗಳ ಮಹಿತಿಯನ್ನು ಸಾರ್ವಜನಿಕರಿಗೆ ನೀಡಿದರು. 

ಅಧ್ಯಕ್ಷತೆ ವಹಿಸಿದ್ದ ಮರಾಟಿ ಸಮಾಜ ಸೇವಾ ಸಂಘ ಕೊಳ್ತಿಗೆ ಗ್ರಾಮ ಸಮಿತಿಯ ಉಪಾಧ್ಯಕ್ಷ ಸಂತೋಷ್ ಕೆ ಮಾತನಾಡಿ, ಸಾರ್ವಜನಿಕರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಂಡು ಇನ್ನೂ ಮುಂದೆಯೂ ಸಹಕಾರ ನೀಡುವಂತೆ ವಿನಂತಿದರು ಮತ್ತು ಅಂಚೆ ಇಲಾಖೆ ಯ ಸಹಕಾರಕ್ಕಾಗಿ ಇಲಾಖೆಯ ಎಲ್ಲಾ ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಕೊಳ್ತಿಗೆ ಮರಾಟಿ ಸಮಾಜ ಸೇವಾ ಮಹಿಳಾ ಘಟಕದ ಅಧ್ಯಕ್ಷೆ  ನಾಗವೇಣಿ ಕೆ ಅವರು  ಶುಭ ಹಾರೈಸಿದರು. 

ಕುಮಾರಿ ತನ್ವಿ ಎಸ್.ಪಿ  ಕೆಮ್ಮತಕಾನ ಪ್ರಾರ್ಥಿಸಿದರು. ಮರಾಟಿ ಸಮಾಜ ಸೇವಾ ಸಂಘ ಗ್ರಾಮ ಸಮಿತಿ ಕೊಳ್ತಿಗೆ-ಪೆರ್ಲಂಪಾಡಿ ಇದರ ಕಾರ್ಯದರ್ಶಿ ಜಗನ್ನಾಥ ಎಂ ಸ್ವಾಗತಿಸಿದರು, ಗೌರವಾಧ್ಯಕ್ಷರಾದ ವೆಂಕಪ್ಪ ನಾಯ್ಕ ಕಣ್ಣಕಜೆ  ವಂದಿಸಿದರು.ಮರಾಟಿ ಸಮಾಜ ಸೇವಾ ಸಂಘ ಕೊಳ್ತಿಗೆ ಗ್ರಾಮ ಸಮಿತಿಯ ಅಧ್ಯಕ್ಷ ಸುಬ್ಬಯ್ಯ ಕೆಮ್ಮತಕಾನ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here