







ಪುತ್ತೂರು:ಮುಂಬೈ ಪೊಲೀಸ್ ಮತ್ತು ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್)ದ ಅಧಿಕಾರಿಗಳೆಂದು ಹೇಳಿ ವಾಟ್ಸಪ್ ವೀಡಿಯೋ ಕಾಲ್, ಚಾಟ್ ಮಾಡಿ,ಮರಣ ದಂಡನೆ, ಜೀವಾವಧಿ ಹಾಗೂ ಆಜೀವ ಕಾರವಾಸ ಶಿಕ್ಷೆಯಿರುವ ದೇಶದ್ರೋಹ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸುವುದಾಗಿ ಬೆದರಿಸಿ ಹಿರಿಯ ನಾಗರಿಕ ಕೃಷಿಕರೊಬ್ಬರಿಗೆ 1.31 ಕೋಟಿ ರೂ.ವಂಚಿಸಿರುವ ಕುರಿತು ಪ್ರಕರಣ ದಾಖಲಾಗಿರುವುದು ವರದಿಯಾಗಿದೆ.


ಬಡಗನ್ನೂರು ಗ್ರಾಮದ ನೆಕ್ಕರೆ ನಿವಾಸಿ ರಾಮಮೋಹನ್ ಪಿ.ಎಸ್.(62ವ.)ವಂಚನೆಗೊಳಗಾಗಿ ದೂರು ನೀಡಿದವರು.ಅಪರಿಚಿತರು ವಾಟ್ಸ್ಆಪ್ ವಿಡಿಯೋ ಕರೆ ಮೂಲಕ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಬೆದರಿಸಿ, ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು ರೂ.1,31,50,೦೦೦ ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.



ಪೆಹಲ್ಗಾಮ್ ಹತ್ಯಾಕಾಂಡದ ಆರೋಪಿಗಳೊಂದಿಗೆ ನಂಟಿನ ಸುಳ್ಳು ಆರೋಪ:
2026ರ ಆ.27ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಮನೆಯಲ್ಲಿರುವಾಗ ತನ್ನ ಮೊಬೈಲ್ಗೆ ಅಪರಿಚಿತ ಸಂಖ್ಯೆ +919150920379ಯಿಂದ ಕರೆ ಬಂದಿತ್ತು.ಕರೆ ಮಾಡಿದವರು ಹಿಂದಿ ಮತ್ತು ಇಂಗ್ಲೀಷ್ನಲ್ಲಿ “ನಾವು ಮುಂಬೈ ಪೊಲೀಸರು ಮಾತನಾಡುತ್ತಿರುವುದು.ನೀವು ಕಾಶ್ಮೀರದ ಪೆಹಲ್ಗಾಮ್ ಹತ್ಯಾಕಾಂಡದ ಆರೋಪಿಗಳಿಗೆ ಹಣ ವರ್ಗಾವಣೆ ಮಾಡಿದ ಬಗ್ಗೆ ಪುರಾವೆಗಳಿದ್ದು ನಿಮ್ಮ ಮೇಲೆ ಮುಂಬೈ ಹೈಕೋರ್ಟ್ನಿಂದ ಅರೆಸ್ಟ್ ವಾರಂಟ್ ಆಗಿರುತ್ತದೆ.ನೀವು ಮರಣದಂಡನೆ, ಮತ್ತು ಜೀವಾವಧಿ ಶಿಕ್ಷೆ ಹಾಗೂ ಅಜೀವ ಕಾರವಾಸ ಶಿಕ್ಷೆ ಇರುವ ದೇಶದ್ರೋಹದ ಕೆಲಸ ಮಾಡಿರುವುದಾಗಿ,ಈ ಬಗ್ಗೆ ತನಿಖೆ ಮಾಡಲುATS Department ಮುಂಬೈ ನಿಮಗೆ ಈಗ +918763024625 ನೇ ನಂಬ್ರದಿಂದ whatsapp Video Call ಬರುತ್ತದೆ.ಸ್ವೀಕರಿಸಿ ಮಾತನಾಡಬೇಕೆಂದು ತಿಳಿಸಿದರು.ಕೂಡಲೇ ಸದ್ರಿ ಫೋನ್ ನಂಬ್ರದಿಂದ ವಿಡಿಯೋ ಕಾಲ್ ಬಂದಿದ್ದು,ಸ್ವೀಕರಿಸಿದಾಗ ಅವರು ಇಂಗ್ಲೀಷ್ನಲ್ಲಿ “ನಾವುATS Department ನಿಂದ 1.೦ ಮಾತನಾಡುತ್ತಿದ್ದು ಇದು Top Secret ವಿಚಾರವಾದ್ದರಿಂದ ನಿಮ್ಮನ್ನು Interrogation ಮಾಡಲಿದ್ದು, ನೀವು ಮುಚ್ಚಿದ ಕೋಣೆಯಲ್ಲಿ ಕುಳಿತು ಮನೆಯ ಯಾರೊಬ್ಬರಿಗೂ ಕೇಳದಂತೆ ಇರಬೇಕು ಎಂದು ತಿಳಿಸಿದ್ದರು.ಅದರಂತೆ ತಾನು ಮನೆಯ ಕೋಣೆಗೆ ಹೋಗಿದ್ದು,ನನ್ನ ಮೇಲಿರುವ ಆರೋಪಗಳೆಂದು ಅವರು ವ್ಯಾಟ್ಯಾಪ್ಸ್ನಲ್ಲಿ ನೋಟಿಸ್ ಕಳುಹಿಸಿ, ನಿಮ್ಮನ್ನು ಕಾನೂನು ರೀತಿಯ 48 ಗಂಟೆ ಮುಂಚೆ ಮುಂಬೈ ATS ಕಛೇರಿಗೆ ಬಂದು ಶರಣಾಗುವಂತೆ ತಿಳಿಸಿದ್ದರು.ಭಯಗೊಂಡು, ನಾನು ಯಾವುದೇ ಕೃತ್ಯಗಳಲ್ಲಿ ಭಾಗವಹಿಸಿಲ್ಲ ಎಂದು ಅವರಲ್ಲಿ ಕೇಳಿಕೊಂಡಿದ್ದ ಸಂದರ್ಭ,ನನ್ನಲ್ಲಿರುವ ಬ್ಯಾಂಕ್ ಖಾತೆಗಳು ಮತ್ತು ಕೆಲವೊಂದು ನಿರ್ದಿಷ್ಟ ದಿನಾಂಕದಂದು ಮಾಡಿದ ಹಣ ವರ್ಗಾವಣೆ ವ್ಯವಹಾರದ ಕುರಿತು ಅಪರಿಚಿತರು ತಿಳಿಸಿ, ಈ ಬಗ್ಗೆ ಯಾರಿಂದ ಯಾಕಾಗಿ ಪಡೆದಿರುತ್ತೀರಿ ಎಂದು ಪ್ರಶ್ನಿಸಿದರು.ತನ್ನ ಬ್ಯಾಂಕ್ ಖಾತೆಗಳ ವಿವರಗಳನ್ನು ಕರಾರುವಕ್ಕಾಗಿ ತಿಳಿಸಿದ್ದರಿಂದ ಅವರು ಸರಕಾರಿ ಅಧಿಕಾರಿಗಳಾಗಿರಬಹುದೆಂದು ನಂಬಿ ಹೆದರಿಕೆಯಿಂದ ಅವರು ಹೇಳಿದಂತೆ ನಡೆದುಕೊಂಡೆ.ಸುಮಾರು ಒಂದೂವರೆ ಗಂಟೆಗಳ ಕಾಲ ವೀಡಿಯೋ ಕಾಲ್ನಲ್ಲಿ ತನ್ನ ಹಣ, ಆಸ್ತಿ, ಒಡವೆಗಳ ಬಗ್ಗೆ ವಿಚಾರಿಸಿ, ಈ ವಿಚಾರವನ್ನು ನೀವು ನಿಮ್ಮ ಕುಟುಂಬ ಸದ್ಯಸರೊಂದಿಗಾಗಲಿ, ಸ್ನೇಹಿತರೊಂದಿಗಾಗಲಿ ಹಂಚಿಕೊಂಡರೆ ಕಾನೂನು ರೀತಿಯ ಅಪರಾಧವಾಗುವುದು ಎಂದು ಬೆದರಿಸಿ, ನೀವು ಪ್ರತಿ ಗಂಟೆಗೊಮ್ಮೆ ನಿಮ್ಮ ಇರುವಿಕೆಯ ಬಗ್ಗೆ “Case Code RS 7457 I am safe and Secure ” ಎಂದು ಇದೇ ನಂಬರ್ಗೆ ವ್ಯಾಟ್ಸಾಪ್ ಮೇಸೇಜ್ ಕಳುಹಿಸಬೇಕೆಂದು ತಿಳಿಸಿದ್ದಂತೆ ಪ್ರತಿ ಗಂಟೆಗೊಮ್ಮೆ ಮೆಸೇಜ್ ಹಾಕುತ್ತಿದ್ದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆ.29ರಂದು ಮದ್ಯಾಹ್ನ ಸುಮಾರು 12.25 ಗಂಟೆಗೆ ಮೇಲೆ ಅದೇ ನಂಬರ್ನಿಂದ ವಾಟ್ಸ್ಆಪ್ ವಿಡಿಯೋ ಕರೆ ಬಂದಿದ್ದು,ತಾನು ಸೀದಾ ರೂಮಿಗೆ ಹೋಗಿ ರಿಸೀವ್ ಮಾಡಿ ನೋಡಲಾಗಿ ಅದರಲ್ಲಿ ಪೊಲೀಸ್ ಯುನಿಫಾರ್ಮ್ ಹಾಕಿದ್ದ ಓರ್ವ ವ್ಯಕ್ತಿ ಮಾತನಾಡಿ, High Court of Bombay ಯ Arrest and Freezing Control Orders ನ್ನು ವ್ಯಾಟ್ಸ್ಆಪ್ ಮೂಲಕ ಕಳುಹಿಸಿ ಅದನ್ನು ಓದಿ.ಓದಿದ ನಂತರ ನಿಮ್ಮನ್ನು ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಿ ದಸ್ತಗಿರಿ ಮಾಡಿ ಮುಂಬೈಗೆ ಕರೆದುಕೊಂಡು ತರಲಾಗುವುದು ಎಂದು ಬೆದರಿಸಿದ್ದ್ದು .ಹೆದರಿದ ನಾನು, ನನ್ನನ್ನು ಏನಾದರೂ ಮಾಡಿ ಬಚಾವ್ ಮಾಡಬೇಕೆಂದು ಅವರಲ್ಲಿ ಬೇಡಿಕೊಂಡಾಗ ಅವರು, ನಮ್ಮಿಂದ ಹಿರಿಯ IPS ರಣಬೀರ್ ಸಿಂಗ್ ಎನ್ನುವ ಅಧಿಕಾರಿಗೆ ನಿಮ್ಮ ಕೇಸನ್ನು ಹಸ್ತಾಂತರಿಸುವುದಾಗಿ ಮತ್ತು ಸದ್ರಿ IPS ಅಧಿಕಾರಿ ದಯಾಳುವಾಗಿದ್ದು ನಿಮ್ಮಮೇಲೆ ಕರುಣೆ ತೋರಿ ಬಚಾವ್ ಮಾಡಬಹುದೆಂದು ತಿಳಿಸಿದರು.ಅದರಂತೆ ಅವರು ಕಳುಹಿಸಿದ ಪೋನ್ ನಂಬರ್ +918280987978 ನೇದಕ್ಕೆ ಮೇಸೆಜ್ ಮಾಡಿದ ನಂತರ ಸಂಜೆ +918280987978 ನಂಬ್ರದಿಂದ ವಾಟ್ಸ್ಆಪ್ ವಿಡಿಯೋ ಕರೆ ಬಂದಿತ್ತು.ಆ ಕಡೆಯಿಂದ ಇಂಗ್ಲೀಷಲ್ಲಿ ಮಾತನಾಡುತ್ತಾ, ನೀನು ಮುಗ್ಧನಂತೆ ತೋರುತ್ತೀಯಾ, ನಾನು ಹೇಳಿದಂತೆ ನಡೆದುಕೊಂಡರೆ ನಿನ್ನನ್ನು ರಕ್ಷಿಸುವುದಾಗಿ ಹೇಳಿದರು.ಅದಕ್ಕೆ ಅರೆಸ್ಟ್ ಆಗುವ ಭಯದಿಂದ,ನೀವು ಹೇಳಿದ ಹಾಗೆ ನಡೆದುಕೊಳ್ಳುವುದಾಗಿ ತಿಳಿಸಿ ಗಂಟೆ ಗಂಟೆಗೆ ಅದೇ ನಂಬರ್ಗೆ ಅವರ ಇರುವಿಕೆಯ ಬಗ್ಗೆ “Case Code RS 7457 I am safe and Secure” ಎಂದು ಮೆಸೇಜ್ ಮಾಡಿಕೊಂಡಿದ್ದೆ.
ಆ.3ರಂದು ಸಂಜೆ +918280987978 ನಂಬ್ರದಿಂದ ಮತ್ತೆ ವಾಟ್ಸ್ಆಪ್ ವಿಡಿಯೋ ಕಾಲ್ ಬಂದಿದ್ದು,ತಾನು ಮತ್ತು ತಾಯಿಯ ಬ್ಯಾಂಕ್ ಖಾತೆಗಳಲ್ಲಿ ಹೊಂದಿರುವ ನಿರಖು ಠೇವಣೆಗಳನ್ನು ಬರೆದು ತಿಳಿಸುವಂತೆ ಹೇಳಿದ್ದು ಅದರಂತೆ ವಿವರಗಳನ್ನು ಅದೇ ನಂಬರ್ಗೆ ವಾಟ್ಸ್ಆಪ್ ಮಾಡಿದ್ದೆ.ಎಲ್ಲಾ ಠೇವಣಿಗಳನ್ನು ಕೆನರಾ ಬ್ಯಾಂಕ್ ತಿಂಗಳಾಡಿಯಲ್ಲಿರುವ ತನ್ನ ಬ್ಯಾಂಕ್ ಖಾತೆಗೆ ವರ್ಗಾಯಿಸಿ-ತಯಾರಿಡುವಂತೆ ಹೇಳಿದ್ದರಿಂದ ಹಣವನ್ನು ವರ್ಗಾಯಿಸಿ ತಯಾರು ಮಾಡಿದ್ದೆ.ನಂತರ ಸೆ.2ರಂದು ಬೆಳಿಗ್ಗೆ 9.30 ಗಂಟೆಗೆ ಅದೇ ಮೇಲಿನ ನಂಬರ್ನಿಂದ ವಾಟ್ಸ್ಆಪ್ ವಿಡಿಯೋ ಕಾಲ್ ಬಂದಿದ್ದು, ನಾವು ನಿಮ್ಮ ಹಣವನ್ನು ರಿಸರ್ವ್ ಬ್ಯಾಂಕ್ನ ಅಕೌಂಟಿಗೆ ವರ್ಗಾಯಿಸಿ Money Verification ಮಾಡಲಿದ್ದು, ಅದರಂತೆ ನಿಮ್ಮ ವೈಯಕ್ತಿಕ ವಿವರ ದುರುಪಯೋಗ ಪಡಿಸಿದ ವ್ಯಕ್ತಿಯ ಪತ್ತೆಯಾಗುವ ಸಾಧ್ಯತೆ ಇದ್ದು ಅದು ನಿಮ್ಮ ಆರೋಪ ಮುಕ್ತಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿ, ನೀವು ವರ್ಗಾವಣೆ ಮಾಡಿ ತಯಾರು ಇಟ್ಟುಕೊಂಡ ಹಣವನ್ನು ಈ ಕೂಡಲೇ ಬ್ಯಾಂಕ್ಗೆ ತೆರಳಿ ನಾವು ನೀಡುವ ಬ್ಯಾಂಕ್ ಖಾತೆಗೆ RTGS -ಮುಖಾಂತರ ವರ್ಗಾಯಿಸುವಂತೆ ಹಾಗೂ ಬ್ಯಾಂಕ್ನಲ್ಲಿ ಯಾಕೆ ಇಷ್ಟು ಮೊತ್ತವನ್ನು RTGS ಮಾಡುತ್ತೀರಿ ಎಂದು ಕೇಳಿದರೆ ಬೆಂಗಳೂರಿನಲ್ಲಿ ವಾಸ್ತವ್ಯವಿರುವ ಮಗಳಿಗೆ ಮನೆ ಖರೀದಿಗೆ ಕಳುಹಿಸಿಕೊಡುವುದಾಗಿ ತಿಳಿಸಬೇಕೆಂದು ಹೇಳಿದ್ದರು.ಅದರಂತೆ ಸೆ.2ರಂದು ಮಧ್ಯಾಹ್ನ ಕೆನರಾ ಬ್ಯಾಂಕ್ ತಿಂಗಳಾಡಿ ಶಾಖೆಯಿಂದ ತಮ್ಮ ಬ್ಯಾಂಕ್ ಖಾತೆಯಿಂದ, ಅಪರಿಚಿತರು ವಾಟ್ಸ್ಅಪ್ ಮುಖೇನ ಕಳುಹಿಸಿದ ಖಾತೆಗೆ ರೂ.35,೦೦೦,೦೦ ಆರ್ಟಿಜಿಎಸ್ ಮುಖೇನ ವರ್ಗಾವಣೆ ಮಾಡಿದ್ದೆ.ವರ್ಗಾವಣೆ ಮಾಡಿದ ನಂತರ RTGS ರಶೀದಿ ಮತ್ತು ಬ್ಯಾಂಕ್ ಮೇಸೆಜ್ ಅದೇ ನಂಬರ್ಗೆ ವ್ಯಾಟ್ಯಾಪ್ ಕಳುಹಿಸಿದ್ದರು.ಆ ನಂತರ ಅದೇ ದಿನ ಸಂಜೆ 3.20 ಗಂಟೆಗೆ ಅದೇ ನಂಬರ್ನಿಂದ ವಾಟ್ಸ್ಆಪ್ ವಿಡಿಯೋ ಕರೆ ಮಾಡಿ,ಇದೇ ರೀತಿ ಸಹಕಾರ ನೀಡಿದಲ್ಲಿ ನೀವು ಅದಷ್ಟು ಬೇಗ ಆರೋಪ ಮುಕ್ತನಾಗಬಹುದೆಂದು ತಿಳಿಸಿದ್ದರು.ಸೆ.03ರಂದು ಪುನ: ಅದೇ ನಂಬರ್ನಿಂದ ವಾಟ್ಸ್ಆಪ್ -ವಿಡಿಯೋ ಕಾಲ್ ಮಾಡಿ, ತಾವು ಬ್ಯಾಂಕ್ ಲಾಕರ್ನಲ್ಲಿ ಹೊಂದಿರುವ ಚಿನ್ನದ ಬಗ್ಗೆ ವಿಚಾರಿಸಿ ಅದನ್ನು ಅಡವಿಟ್ಟು ಬಂದ ಹಣವನ್ನು ತಾವು ಕಳುಹಿಸುವ -ಖಾತೆಗೆ ವರ್ಗಾಯಿಸುವಂತೆ ತಿಳಿಸಿದ್ದರು.ಅದರಂತೆ ಚಿನ್ನವನ್ನು ಅಡವಿಟ್ಟು ರೂ.22,50,೦೦೦ ಸಾಲವನ್ನು ಪಡೆದುಕೊಂಡಿದ್ದು ಸೆ.05ರಂದು ಅಪರಿಚಿತರು ವೀಡಿಯೋ ಕರೆ ಮಾಡಿ ಆ ಹಣವನ್ನು ತಾವು ಹೇಳಿದ ಖಾತೆಗೆ ಆರ್ಟಿಜಿಎಸ್ ಮಾಡುವಂತೆ ಹೇಳಿದ್ದು. ಆ ಹಣವು ವರ್ಗಾವಣೆಯಾಗದೇ ವಾಪಸ್ಸು ತಮ್ಮ ಖಾತೆಗೆ ಜಮೆ ಆಗಿತ್ತು.ಈ ಬಗ್ಗೆ ಅಪರಿಚಿತರಿಗೆ ತಿಳಿಸಿದಾಗ, ಇವತ್ತು ಬೇಡ ಸೋಮವಾರ ಸೆ.07ರಂದು ಆರ್ಟಿಜಿಎಸ್ ಮಾಡುವಂತೆ ತಿಳಿಸಿದ್ದರು.ಸೆ.07ರಂದು ಅವರು ಹೇಳಿದಂತೆ ರೂ.22,50,೦೦೦ವನ್ನು ಆರ್ಟಿಜಿಎಸ್ ಮುಖೇನ ವರ್ಗಾವಣೆ ಮಾಡಿದ್ದು ಈ ಎಲ್ಲ RTGS ವ್ಯವಹಾರಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಹೆಸರಿನ ರಶೀದಿಯನ್ನು ಕಳುಹಿಸಿದ್ದರು.ನಂತರ ಅದೇ ದಿನ ಅದೇ ನಂಬರ್ನಿಂದ ಸಂಜೆ 5.45 ಗಂಟೆಗೆ ವಾಟ್ಸ್ಆಪ್ ವಿಡಿಯೋ ಕರೆ ಮಾಡಿ ನನ್ನ ಹೆಸರಲ್ಲಿರುವ ಇತರ ಬ್ಯಾಂಕ್ ಖಾತೆಗಳ ಪರಿಶೀಲನೆಗೆ ಹಣದ ಅಗತ್ಯವಿದ್ದು,ಸಾಧ್ಯವಾದಷ್ಟು ಹೆಚ್ಚು ಹಣವನ್ನು ಹೊಂದಿಸಬೇಕೆಂದು ತಿಳಿಸಿ,ನನ್ನ ವಾಣಿಜ್ಯ ಕಟ್ಟಡವನ್ನು ಅಡಮಾನವಾಗಿಟ್ಟು ಹಣ ಹೊಂದಿಸಬೇಕೆಂದು ತಿಳಿಸಿದ್ದರಲ್ಲದೆ,ತಪ್ಪಿದಲ್ಲಿ ನಿಮ್ಮ ಕಟ್ಟಡವನ್ನು ಕೇಸ್ ಮುಗಿಯುವವರೆಗೆ ನಮ್ಮ ಸುಪರ್ದಿಗೆ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದರು.ಅದರಂತೆ ವಾಣಿಜ್ಯ ಕಟ್ಟಡವನ್ನು ಅಡಮಾನವಿಟ್ಟು ಬಂದ ರೂ.74 ಲಕ್ಷವನ್ನು ಅ.06ರಂದು ಬೆಳಿಗ್ಗೆ, ವ್ಯಾಟ್ಸ್ಆಪ್ ವಿಡಿಯೋ ಕರೆ ಮಾಡಿ ತಿಳಿಸಿದ್ದ ಖಾತೆಗೆ ಆರ್ಟಿಜಿಎಸ್ ಮೂಲಕ ಕಳುಹಿಸಲಾಗಿತ್ತು.ವರ್ಗಾವಣೆ ಮಾಡಿದ ನಂತರ RTGS ರಶೀದಿ ಮತ್ತು ಬ್ಯಾಂಕ್ ಮೆಸೇಜ್ ಅದೇ ನಂಬರ್ಗೆ ವ್ಯಾಟ್ಯಾಪೈ ಕಳುಸಿರುತ್ತಾರೆ.ಅದೇ ದಿನ ಮಧ್ಯಾಹ್ನ 1.20 ಗಂಟೆಗೆ ಅದೇ ನಂಬರ್ನಿಂದ ವ್ಯಾಟ್ಸ್ ಆಪ್ ವಿಡಿಯೋ ಕರೆ ಮಾಡಿ ಇನ್ನು ಯಾವ ಬ್ಯಾಂಕ್ ಪರಿಶೀಲನೆಗೆ ಬಾಕಿ ಇದೆ ಎಂದು ತಿಳಿಸಲು ಹೇಳಿದ್ದರು.
ಮಗಳ ಕರೆಯಿಂದಾಗಿ ಪೊಲೀಸರಿಗೆ ದೂರು:
ಅ.08ರಂದು ಬೆಂಗಳೂರಿನಲ್ಲಿರುವ ಮಗಳು ಅವಳ ಸಹದ್ಯೋಗಿಯ ಮೊಬೈಲ್ಗೆ ಬಂದ ಮಾಹಿತಿಯಂತೆ, ಮಂಗಳೂರು ನಗರದಲ್ಲಿ ಸುಮಾರು 70 ವರ್ಷದ ವೃದ್ದೆ ಡಿಜಿಟಲ್ ಅರೆಸ್ಟ್ ಮುಖಾಂತರ ಇದೇ ರೀತಿ ಸೈಬರ್ ವಂಚನೆಯಾಗಿ ಸುಮಾರು 2 ಕೋಟಿ ವಂಚನೆಯಾದ ಬಗ್ಗೆ ತಿಳಿಸಿದ್ದಳು.ಆ ಸಮಯ,ತಮಗೂ ಕೂಡ ಇದೇ ರೀತಿ ಮೋಸವಾದ ಬಗ್ಗೆ ಅರಿವಿಗೆ ಬಂದಿದ್ದು, ಆ ನಂತರ ಮಗಳಲ್ಲಿ ವಿಚಾರಿಸಿ ಸೈಬರ್ ಪೋರ್ಟಲ್ 1930ಕ್ಕೆ ಕರೆ ಮಾಡಿ ಠಾಣೆಗೆ ಬಂದು ದೂರು ನೀಡಿರುವುದಾಗಿದೆ ಎಂದು ರಾಮ್ ಮೋಹನ್ ಅವರು ದೂರಿನಲ್ಲಿ ಅವರು ತಿಳಿಸಿದ್ದಾರೆ.










