







ಪುತ್ತೂರು: ಬೆಂಗಳೂರಿನ ಸನ್ಸ್ಕಾರ್ ಸಮೂಹ ಸಂಸ್ಥೆಗಳಿಂದ ನೂತನ ಮಳಿಗೆ “ಯುಪಿಎಸ್ ಫೋರ್ ಮಿ” ಅ.14ರಂದು ಪುತ್ತೂರು ಜೇನು ವ್ಯವಸಾಯಗಾರರ ಸಹಕಾರ ಸಂಘದ ಕಟ್ಟಡದಲ್ಲಿ ಶುಭಾರಂಭಗೊಳ್ಳಲಿದೆ.


UPS4ME ಶೋರೂಮ್ನಲ್ಲಿ ವಿದ್ಯುತ್ ಸಮಸ್ಯೆಗೆ ಪರಿಹಾರವಾಗಿ ಯುಪಿಎಸ್ ಹಾಗೂ ಪವರ್ ಬ್ಯಾಕಪ್ಗಾಗಿ ಉತ್ತಮ ಆಯ್ಕೆಗಳು ಗ್ರಾಹಕರಿಗೆ ಲಭ್ಯವಿದೆ. ಹೆಚ್ಚು ದಕ್ಷತೆ, ದೀರ್ಘ ಬಾಳಿಕೆ ಮತ್ತು ಸ್ಮಾರ್ಟ್ ಪವರ್ ಬ್ಯಾಕಪ್ ದೊರೆಯಲಿದೆ. ಮನೆ, ಕಛೇರಿ, ಅಂಗಡಿ, ಕೈಗಾರಿಕೆಗಳಿಗೆ ಸೋಲಾರ್ ವ್ಯವಸ್ಥೆ ಟೆಲಿಕಾಂ ಉಪಯೋಗಗಳಿಗೆ ಸೂಕ್ತವಾಗಿದ್ದು, ಅತ್ಯುನ್ನತ ವಿಶ್ವಾಸಾರ್ಹತೆಯೊಂದಿಗೆ, ನವೀನ ತಂತ್ರಜ್ಞಾನ, ಸುರಕ್ಷಿತ ಮತ್ತು ಸ್ಥಿರವಾದ ಅತ್ಯುತ್ತಮ ಆಯ್ಕೆಯಾಗಿದೆ.



ಉದ್ಘಾಟನೆ:
ಅ.14ರಂದು ಬೆಳಿಗ್ಗೆ 11 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರವಿಕೃಷ್ಣ ಕಲ್ಲಾಜೆ, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ, ವಿವೇಕಾನಂದ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ವಿಜಯ ನಾರಾಯಣ, ದ.ಕ.ಜೇನು ವ್ಯವಸಾಯಗಾರರ ಸಹಕಾರ ಸಂಘದ ಪುತ್ತೂರು ಅಧ್ಯಕ್ಷ ಚಂದ್ರ ಕೋಲ್ಚಾರ್, ಪುತ್ತೂರು ವರ್ತಕರ ಸಂಘದ ನಿರ್ದೇಶಕ ಮಹದೇವ ಶಾಸ್ತ್ರಿ ಮಣಿಲ ಭಾಗವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಕರ್ಜೆ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಕಿರಣ್ ಶೆಟ್ಟಿ, ಗೌರವ ಉಪಸ್ಥಿತಿಯಾಗಿ ಕೃಷಿಕ ಉದಯ ಕುಮಾರ್ ಭಟ್ ಭಾಗವಹಿಸಲಿದ್ದಾರೆ ಎಂದು ಮಾಲಕರು ತಿಳಿಸಿದ್ದಾರೆ.










