







ಬೆಂಗಳೂರು: ನವರಾತ್ರಿಯ ಮೊದಲ ದಿನದ ಶುಭ ಸಂದರ್ಭದಲ್ಲಿ, ಬೆಂಗಳೂರಿನ ಗಿರಿನಗರದಲ್ಲಿರುವ ರಾಮಚಂದ್ರಾಪುರ ಮಠದ ಶಾಖೆಯಲ್ಲಿ ಪುತ್ತೂರಿನ ಕೋರ್ಟ್ ರಸ್ತೆಯಲ್ಲಿರುವ ಶತಮಾನದ ಹೊಸ್ತಿಲಲ್ಲಿರುವ ಪ್ರತಿಷ್ಠಿತ ಡಿ. ಶಿವ ಭಟ್ ಜ್ಯುವೆಲ್ಲರ್ಸ್ ನ ನೂತನ ವೆಬ್ಸೈಟ್ ಅನ್ನು ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಅನಾವರಣಗೊಳಿಸಿದರು.


ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ಪುತ್ತೂರು ಸೇರಿದಂತೆ ಕರಾವಳಿ ಭಾಗದ ಕರಕುಶಲ ಕರ್ಮಿಗಳು ತಲೆಮಾರುಗಳಿಂದ ಬೆಳೆಸಿಕೊಂಡು ಬಂದಿರುವ ಸಾಂಪ್ರದಾಯಿಕ ಚಿನ್ನದ ವಿನ್ಯಾಸಗಳು ಹಾಗೂ ವಿಶಿಷ್ಟ ಕಲಾಪ್ರಕಾರಗಳನ್ನು ಜಗತ್ತಿನಾದ್ಯಂತ ಪರಿಚಯಿಸುವ ಉದ್ದೇಶದಿಂದ ವೆಬ್ಸೈಟ್ ರೂಪಿಸಿರುವುದು ಶ್ಲಾಘನೀಯ ಎಂದರು.



ಸ್ಥಳೀಯ ಕರಕುಶಲ ಕರ್ಮಿಗಳ ಕಲಾನೈಪುಣ್ಯ, ಪರಂಪರೆ ಹಾಗೂ ಚಿನ್ನದ ಆಭರಣಗಳ ವಿಶಿಷ್ಟ ವಿನ್ಯಾಸಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ನಿಟ್ಟಿನಲ್ಲಿ ಡಿ. ಶಿವ ಭಟ್ ಜ್ಯುವೆಲ್ಲರ್ಸ್ ನ ಈಶ್ವರ ಮುರಳಿ ಕೈಗೊಂಡಿರುವ ಪ್ರಯತ್ನ ಪ್ರಶಂಸನೀಯ ಎಂದು ತಿಳಿಸಿದರು.
ಶತಮಾನದ ಸನಿಹಕ್ಕೆ ಬಂದು ನಿಂತಿರುವ ಡಿ. ಶಿವ ಭಟ್ ಜ್ಯುವೆಲ್ಲರ್ಸ್ ಸಂಸ್ಥೆ ತನ್ನ ಸುದೀರ್ಘ ಪರಂಪರೆ ಮತ್ತು ವೈಶಿಷ್ಟ್ಯಪೂರ್ಣ ವಿನ್ಯಾಸಗಳ ಮೂಲಕ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ. ಸ್ಥಳೀಯ ಕರಕುಶಲ ಕಲೆಯನ್ನು ಜಗತ್ತಿಗೆ ಪರಿಚಯಿಸುವ ಕಾರ್ಯ ಮುಂದುವರಿಯಲಿ ಎಂದು ಶುಭ ಹಾರೈಸಿದರು.
ವೆಬ್ಸೈಟ್ ಅಭಿವೃದ್ಧಿ ಮತ್ತು ಆನ್ಲೈನ್ ಮಾರಾಟಕ್ಕೆ ಸಿದ್ಧತೆ
ಡಿ. ಶಿವ ಭಟ್ ಜ್ಯುವೆಲ್ಲರ್ಸ್ ನ ನೂತನ ವೆಬ್ಸೈಟ್ ಕಾರ್ಯ ಪ್ರಸ್ತುತ ಪ್ರಗತಿಯಲ್ಲಿದ್ದು, ಆಭರಣಗಳ ವೈವಿಧ್ಯಮಯ ವಿನ್ಯಾಸಗಳು, ಸಾಂಪ್ರದಾಯಿಕ ಚಿನ್ನದ ಕಲಾಕೃತಿಗಳು ಹಾಗೂ ಸಂಸ್ಥೆಯ ಪರಂಪರೆಯನ್ನು ಒಳಗೊಂಡ ಸಮಗ್ರ ವೆಬ್ಸೈಟ್ ಈ ತಿಂಗಳ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಮುಂದಿನ ಒಂದು ತಿಂಗಳೊಳಗೆ ವೆಬ್ಸೈಟ್ ಮೂಲಕ ಆನ್ಲೈನ್ ಮಾರಾಟ ಆರಂಭಿಸಲು ಸಂಸ್ಥೆ ಯೋಜಿಸಿದೆ. ಇದರಿಂದ ಗ್ರಾಹಕರು ಮನೆಯಲ್ಲಿಯೇ ಕುಳಿತು ಆಭರಣಗಳ ವಿನ್ಯಾಸಗಳನ್ನು ವೀಕ್ಷಿಸಿ ಆನ್ಲೈನ್ ಮೂಲಕ ಖರೀದಿಸುವ ಅವಕಾಶ ಪಡೆಯಲಿದ್ದಾರೆ.
ವೆಬ್ಸೈಟ್: www.shivabhatjewellers.com










