ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಪದಾಧಿಕಾರಿಗಳ ಪದಗ್ರಹಣ

0

ಸುಳ್ಯ: ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ (ರಿ.) ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಯುವಜನ ಸಂಯುಕ್ತ ಮಂಡಳಿ ಸಭಾಭವನದಲ್ಲಿ ಜರುಗಿತು.

ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಉಪಾಧ್ಯಕ್ಷ ಎಸ್. ಸಂಶುದ್ದೀನ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಸಂಯೋಜಕ ಎನ್. ಜಯಪ್ರಕಾಶ್ ರೈ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ಮುಸ್ತಫಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

ನಿಕಟಪೂರ್ವ ಅಧ್ಯಕ್ಷ ದೊಡ್ಡಣ್ಣ ಬರೆಮೇಲು ನೂತನ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿ ಪದಗ್ರಹಣ ನಡೆಸಿಕೊಟ್ಟರು.

ವೇದಿಕೆಯಲ್ಲಿ ನೂತನ ಅಧ್ಯಕ್ಷ ಜಯಪ್ರಕಾಶ್ ಕುಡೆಕಲ್ಲು, ಪ್ರಧಾನ ಕಾರ್ಯದರ್ಶಿ ಸುದರ್ಶನ್, ಖಜಾಂಚಿ ಅಬ್ದುಲ್ ರಜಾಕ್ (ರಜ್ಜು ಭಯ್ಯ) ಉಪಸ್ಥಿತರಿದ್ದರು. ಶಶಿಧರ್ ಎಂ.ಜೆ. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ತಾಲೂಕು ವಾಲಿಬಾಲ್ ಅಸೋಸಿಯೇಷನ್ (ರಿ.), ಸುಳ್ಯ ನೂತನ ಪದಾಧಿಕಾರಿಗಳ ಪಟ್ಟಿ

ಗೌರವ ಅಧ್ಯಕ್ಷರಾಗಿ ದೊಡ್ಡಣ್ಣ ಬರೆಮೇಲು ,ಅಧ್ಯಕ್ಷರಾಗಿ ಜಯಪ್ರಕಾಶ್ ಕುಡೆಕಲ್ಲು, ಪ್ರಧಾನ ಕಾರ್ಯದರ್ಶಿಯಾಗಿ ಸುದರ್ಶ ಕೆ.ಎಸ್.,ಖಜಾಂಚಿಯಾಗಿ ಅಬ್ದುಲ್ ರಜಾಕ್ (ರಜ್ಜು ಭಯ್ಯ),ಉಪಾಧ್ಯಕ್ಷರಾಗಿ ಶರತ್ ಅಡ್ಕಾರ್, ಶಾಫಿ ಕುತ್ತಮೊಟ್ಟೆ, ಹರಿಪ್ರಕಾಶ್ ಅಡ್ಕಾರ್, ಕೆ.ಬಿ. ಇಬ್ರಾಹಿಂ,ಕಾರ್ಯದರ್ಶಿಗಳಾಗಿ ಕನ್ನದಾಸ್, ಶಹಿದ್ ಪಾರೆ,ಸಂಘಟನಾ ಕಾರ್ಯದರ್ಶಿಯಾಗಿ ಇರ್ಫಾನ್ ಜನತಾ, ರೆಫ್ರಿ ಬೋರ್ಡ್ ಸಂಚಾಲಕರಾಗಿ ಅನಿಲ್ ನಾಲ್ಕೂರು ತಾಂತ್ರಿಕ ಮಂಡಳಿಯಾಗಿ ಮನೋಜ್ ಉಬರಡ್ಕ (NIS),ನಿರ್ದೇಶಕರಾಗಿ ಬಾಲಗೋಪಾಲ್ ಎಂ., ಸತೀಶ್ ಕುಮಾರ್ ಕೆ.ಆರ್., ಮೂಸಾ ಕುಂಞಿ ಪೈಂಬೆಚಾಲ್, ರಿಯಾಝ್ ಕಟ್ಟೇಕಾರ್, ಚಂದ್ರ ಕೊಲ್ಚಾರ್, ಪ್ರಭಾಕರ್ ನಾಯರ್, ರಾಜು ಪಂಡಿತ್, ಉಮೇಶ್ ಪಿ., ಕೊರಗಪ್ಪ ಬೆಳ್ಳಾರೆ, ಬಶೀರ್ ಸಪ್ನ, ರವಿರಾಜ್ ಎನ್., ತೀಥವರ್ಣ ಬಳ್ಳಡ್ಕ, ಅಶ್ರಫ್ ಗುಂಡಿ, ನಿತೀನ್ ಗೂನಡ್ಕ, ರಂಜಿತ್ ಎನ್.ಆರ್., ರಿಜ್ವಾನ್ ಜನತಾ, ರಾಜೀವಿ ರೈ, ಗೋಪಾಲಕೃಷ್ಣ R, ಮಂಜುನಾಥ್, ಗೌರವ ಸಲಹೆಗಾರರಾಗಿ ಎನ್. ಜಯಪ್ರಕಾಶ್ ರೈ, ಎಸ್. ಸಂಶುದ್ದೀನ್, ಇಬ್ರಾಹಿಂ ಗೂನಡ್ಕ, ಗೋಕುಲದಾಸ್, ಕೆ.ಎಂ. ಮುಸ್ತಫಾ, ಹರೀಶ್ ರೈ ಉಬರಡ್ಕ ಆಯ್ಕೆಯಾದರು.

LEAVE A REPLY

Please enter your comment!
Please enter your name here