ಮೈಸೂರು ದಸರಾ ಮಹೋತ್ಸವ: ಚಾಮುಂಡಿ ಬೆಟ್ಟದಲ್ಲಿ ಬೃಂದಾವನ ನಾಟ್ಯಾಲಯದ ‘ನಾಟ್ಯಯಾನ’ ಭರತನಾಟ್ಯ ಪ್ರದರ್ಶನ

0

ಅರಿಯಡ್ಕ:ಕರ್ನಾಟಕ ಸರ್ಕಾರ ಹಾಗೂ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆಯೋಜಿಸಲಾಗಿದ್ದ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ನವರಾತ್ರಿ ಉತ್ಸವದ ಅಂಗವಾಗಿ, ಶ್ರೀ ಕ್ಷೇತ್ರ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ವಿದುಷಿ ರಶ್ಮಿ ದಿಲೀಪ್ ರೈ ಶಿಷ್ಯ ವೃಂದದ ಬೃಂದಾವನ ನಾಟ್ಯಾಲಯದ ಕುಂಬ್ರ ಮತ್ತು ಪುತ್ತೂರಿನ ವಿದ್ಯಾರ್ಥಿಗಳ ‘ನಾಟ್ಯಯಾನ’ ಭರತನಾಟ್ಯ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಅ.13ರಂದು ಚಾಮುಂಡಿ ಬೆಟ್ಟದ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ‘ಬೃಂದಾವನ ನಾಟ್ಯಾಲಯ’ದ ಕಲಾವಿದರು ಪ್ರಸ್ತುತಪಡಿಸಿದ ನೃತ್ಯ ಪ್ರದರ್ಶನವು ಪ್ರೇಕ್ಷಕರ ಮನಸೂರೆಗೊಂಡಿತು.
ಕಾರ್ಯಕ್ರಮದಲ್ಲಿ ಆಯೋಜಕರು ಹಾಗೂ ಗಣ್ಯರು ವಿದುಷಿ ರಶ್ಮಿ ದಿಲೀಪ್ ರೈ ಹಾಗೂ ಅವರ ಶಿಷ್ಯ ವೃಂದದವರಿಗೆ ದೇವರ ಪ್ರಸಾದ ಹಾಗೂ ಅಭಿನಂದನಾ ಪತ್ರ ನೀಡಿ ಗೌರವಿಸಿದರು.

LEAVE A REPLY

Please enter your comment!
Please enter your name here