ಪುತ್ತೂರು: ಖಾಲಿ ಮನೆಗೆ ನುಗ್ಗಿ ವಸ್ತು ಕಳವು ಮಾಡಿ ಬೆಂಕಿ, 10 ಲಕ್ಷ ನಷ್ಟ ಆರೋಪ- ಪ್ರಕರಣ ದಾಖಲು

0

ಪುತ್ತೂರು: ನಗರದ ಕಸಬಾ ಗ್ರಾಮದ ಮುಖ್ಯರಸ್ತೆಯಲ್ಲಿರುವ ಖಾಲಿ ಮನೆಗೆ ಕಳ್ಳರು ನುಗ್ಗಿ ವಸ್ತುಗಳನ್ನು ಕಳವು ಮಾಡಿ ಬೆಂಕಿ ಹಚ್ಚಿದ್ದಾರೆ ಎಂದು ಪ್ರಕರಣ ದಾಖಲಾದ ಘಟನೆ ನಡೆದಿದೆ.

ದೂರುದಾರರಾದ ರಶ್ಮಿ ಬಿ.ಭಟ್ ಅವರ ದೂರಿನಲ್ಲಿ ನಾನು ಮೂಲತಃ ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಮುಖ್ಯರಸ್ತೆಯ ನಿವಾಸಿ. ಪ್ರಸ್ತುತ ಕಾಸರಗೋಡಿನಲ್ಲಿ ವಾಸವಾಗಿದ್ದೇನೆ. ಪುತ್ತೂರಿನ ಮನೆಯಲ್ಲಿ ಯಾರೂ ವಾಸ್ತವ್ಯ ಇರುವುದಿಲ್ಲ. ನಾನು ತಿಂಗಳಿಗೊಮ್ಮೆ ಅಥವಾ ಎರಡು ಬಾರಿ ಪುತ್ತೂರಿನ ಮನೆಗೆ ಬಂದು ಹೋಗುತ್ತಿರುತ್ತೇನೆ. ನಾನು ಸೆ.15 ರಂದು ಬಂದು ಹೋಗಿದ್ದೇನೆ ಆ ಬಳಿಕ ಅ.11 ರ ಬೆಳಿಗ್ಗೆ 7 ಗಂಟೆಗೆ ಸಂಬಂಧಿ ಎನ್.ಟಿ. ಕಿಶೋರ್ ಅವರು ಮನೆಗೆ ಬೆಂಕಿ ಬಿದ್ದಿರುವುದಾಗಿ ತಿಳಿಸಿದಾಗ ಸ್ಥಳಕ್ಕೆ ಬಂದು ನೋಡಿದಾಗ ಹಿಂಬದಿಯ 2 ಬೆಡ್ ರೂಂ, 2 ಬಾತ್ ರೂಂ ಮತ್ತು ತೆರೆದ ಹಾಲ್ ಸುಟ್ಟು ಕರಕಲಾಗಿತ್ತು. ಕಿಚನ್ ಬಾಗಿಲಿನ ಹಲಗೆ ತೆಗೆದು ಒಳನುಗ್ಗಿರುವುದು, ಸ್ವಿಚ್ ಬೋರ್ಡ್ ಗಳ ವಯರ್, 5 ಸೀಲಿಂಗ್ ಫ್ಯಾನ್, 2 ದೊಡ್ಡ ದೀಪ, ಆರತಿ ಸಾಮಾಗ್ರಿ, 2 ಹಿತ್ತಾಳೆ ತಟ್ಟೆ ಕಳವಾಗಿರುವುದು ಕಂಡುಬಂದಿದೆ.ಸೆ.15 ಸಂಜೆ 4 ಗಂಟೆಯಿಂದ ಅ.11 ಬೆಳಗಿನ 2.45ರ ನಡುವೆ ಕೃತ್ಯ ನಡೆದಿದೆ. ಕಳವಾದ ವಸ್ತುಗಳ ಮೌಲ್ಯ 30 ಸಾವಿರ ರೂ. ಹಾಗೂ ಬೆಂಕಿಯಿಂದ 10 ಲಕ್ಷ ರೂ. ನಷ್ಟವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here