







ಬ್ರಹ್ಮಾವರ ಸಿತಾರ ಬೋಟ್ ಹೌಸ್ನಲ್ಲಿ ಗುರು-ಶಿಷ್ಯರ ಸಮ್ಮಿಲನ


ಪುತ್ತೂರು: ಸರ್ವೆ ಎಸ್ಜಿಎಂ ಪ್ರೌಢ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಶ್ರೀನಿವಾಸ್ ಎಚ್.ಬಿ ಅವರ 66ನೇ ಹುಟ್ಟು ಹಬ್ಬದ ಪ್ರಯುಕ್ತ ಹಿರಿಯ ವಿದ್ಯಾರ್ಥಿ ದಿನಾಚರಣೆ ಮತ್ತು ಸಾಧಕ ಹಿರಿಯ ವಿದ್ಯಾರ್ಥಿಗಳಿಗೆ ಗೌರವ ಪುರಸ್ಕಾರ ಗುರು ಶಿಷ್ಯರ ಸಮ್ಮಿಲನ’ ಅ.18ರಂದು ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಲಮ ಶ್ರೀ ಗುರು ರಾಘವೇಂದ್ರ ಮಠದ ವ್ಯವಸ್ಥಾಪಕರಾದ ಸೀತಾರಾಮ ಭಟ್ ಕಲ್ಲಮ ವಹಿಸಲಿದ್ದು ಹಿರಿಯ ವಿದ್ಯಾರ್ಥಿಗಳಾದ ಸುಧೀರ್ ನೋಂಡ ಹಾಗೂ ಜೀವನ್ ಎಸ್.ಡಿ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಪ್ರವಾಸದ ಆತಿಥ್ಯವನ್ನು ನಿವೃತ್ತ ಸೈನಿಕ ಜಯಕುಮಾರ್ ಹಾಗೂ ಚಲನಚಿತ್ರ ನಟ ರವಿಸ್ನೇಹಿತ್ ವಹಿಸಲಿದ್ದಾರೆ. ಹಿರಿಯ ವಿದ್ಯಾರ್ಥಿಗಳನ್ನು ಅಪಾರವಾಗಿ ಪ್ರೀತಿಸುವ, ಗೌರವಿಸುವ ಶ್ರೀನಿವಾಸ್ ಎಚ್.ಬಿ ಅವರು ಶಿಕ್ಷಕ ವೃತ್ತಿ ಸಂದರ್ಭದಲ್ಲೇ ಜನ ಮೆಚ್ಚಿದ’ ಶಿಕ್ಷಕ ಎನ್ನುವ ಖ್ಯಾತಿಯನ್ನು ಗಳಿಸಿದ್ದಲ್ಲದೇ ಮಾದರಿ ಶಿಕ್ಷಕರಾಗಿ ಗುರುತಿಸಿಕೊಂಡು ಅಪಾರ ಜನಮನ್ನಣೆ ಗಳಿಸಿದ್ದರು. ತಮ್ಮ ನೆಚ್ಚಿನ ಶಿಕ್ಷಕನ ಹುಟ್ಟುಹಬ್ಬವನ್ನು ಹಿರಿಯ ವಿದ್ಯಾರ್ಥಿಗಳು ಸೇರಿಕೊಂಡು ಪ್ರತೀ ವರ್ಷ ಬೇರೆ ಬೇರೆ ಕಡೆಗಳಲ್ಲಿ ಆಚರಿಸುತ್ತಾ ಬರುತ್ತಿದ್ದಾರೆ. ಶಿಕ್ಷಕ ವೃತ್ತಿಯಿಂದ ನಿವೃತ್ತರಾದ ಬಳಿಕ ತಮ್ಮ 61ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಮೊದಲ ಬಾರಿ `ಹಿರಿಯ ವಿದ್ಯಾರ್ಥಿಗಳ ಗೌರವ ದಿನ’ ಎನ್ನುವ ಹೆಸರಿನಲ್ಲಿ 2021ರಲ್ಲಿ ಬಿಸಿಲೆ ಘಾಟ್ಗೆ ಪ್ರವಾಸ ಆಯೋಜಿಸಲಾಗಿತ್ತು. 2022ರಲ್ಲಿ ಮಡಿಕೇರಿಯಲ್ಲಿ ಗುರು ಶಿಷ್ಯ ಸಮ್ಮಿಲನ ಹಮ್ಮಿಕೊಳ್ಳಲಾಗಿತ್ತು. 2023ರಲ್ಲಿ ಮಂಗಳೂರಿನಲ್ಲಿ ಮತ್ತು 2024ರಲ್ಲಿ ಮಡಿಕೇರಿ ಕ್ಯಾಪಿಟಲ್ ವಿಲೇಜ್ ರೆಸಾರ್ಟ್ನಲ್ಲಿ, 2025ರಲ್ಲಿ ಕುಶಾಲನಗರ ಪರಂಪರಾ ರೆಸಾರ್ಟ್ ನಲ್ಲಿ ನಡೆದಿತ್ತು. ಈ ಬಾರಿಯ 6ನೇ ವರ್ಷದ ಗುರು ಶಿಷ್ಯ ಸಮ್ಮಿಲನ ಬ್ರಹ್ಮಾವರ ಸಿತಾರ ಬೋಟ್ ಹೌಸ್ನಲ್ಲಿ ನಡೆಯಲಿದೆ.













