







ಪುತ್ತೂರು: ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಅಧೀಕ್ಷಕ, ಪುತ್ತೂರು ನಿವಾಸಿ ಶಿವಪ್ರಸಾದ್ ಜಿ.ಎಸ್. ರವರು ಹೃದಯಾಘಾತದಿಂದ ನಿಧನರಾಗಿರುವ ಘಟನೆ ವರದಿಯಾಗಿದೆ. ಅವರಿಗೆ 54 ವರ್ಷ ವಯಸ್ಸಾಗಿತ್ತು.


ಜ್ವರದಿಂದ ಬಳಲುತ್ತಿದ್ದ ಅವರು ಅ.14ರಂದು ಕೆಲಸಕ್ಕೆ ಬಂದಿರಲಿಲ್ಲ. ಮನೆಯಲ್ಲಿ ವಿಶ್ರಾಂತಿಯಲ್ಲಿದ್ದರು. ಮುಂಜಾನೆ 2ರ ಸುಮಾರಿಗೆ ಅವರಿಗೆ ಎದೆನೋವು ಕಾಣಿಸಿತೆಂದು, ಮನೆಯವರು ಪುತ್ತೂರಿನ ಆಸ್ಪತ್ರೆಗೆ ಕರೆದುಕೊಂಡು ಬಂದರಾದರೂ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.



ಸುಳ್ಯ ತಾಲೂಕು ಪಂಚಾಯತ್ ನಲ್ಲಿ ಅಕ್ಷರದಾಸೋಹ ಪ್ರಥಮದರ್ಜೆ ಸಹಾಯಕರಾಗಿ ಸೇವೆಗೆ ಸೇರಿದ್ದ ಅವರು, ಎರಡು ವರ್ಷಗಳ ಹಿಂದೆ ಪದೋನ್ನತಿ ಗೊಂಡು ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಬಂದಿದ್ದರು.
ಸುಳ್ಯ ಉಬರಡ್ಕ ಹುಳಿಯಡ್ಕ ನಿವಾಸಿಯಾಗಿರುವ ಶಿವರಾಮ ನಾಯಕರವರ ಪುತ್ರ ಶಿವ ಪ್ರಸಾದ್ ರವರು ಪ್ರಸ್ತುತ ಪುತ್ತೂರಿನ ನೆಹರೂನಗರ ಸಮೀಪ ನೆಲೆಸಿದ್ದಾರೆ. ಮೃತರು ಪತ್ನಿ ದುರ್ಗಾ ಹರ್ಬಲ್ ಬ್ಯೂಟಿಪಾರ್ಲರ್ ಮಾಲಕಿ ಅಮಿತಾ ನಾಯಕ್ ಮತ್ತು ಪುತ್ರಿಯರಾದ ಅಂಶಿಕ ಮತ್ತು ಆತ್ಮಿಕರವನ್ನು ಅಗಲಿದ್ದಾರೆ.










