ಫೇಸ್‌ಬುಕ್‌ನಲ್ಲಿ ಲಾಟರಿ ಜಾಹೀರಾತು ನೋಡಿ ಟಿಕೆಟ್ ಖರೀದಿ : 8 ಲಕ್ಷ ಬಹುಮಾನದ ಆಮಿಷ ಒಡ್ಡಿ -2.34 ಲಕ್ಷ ರೂ. ವಂಚನೆ -ಕಡೇಶ್ವಾಲ್ಯದ ಹಿರಿಯ ನಾಗರಿಕನಿಂದ ದೂರು

0

ಪುತ್ತೂರು: ಕೇರಳದ ಆನ್‌ಲೈನ್ ಲಾಟರಿ ಟಿಕೆಟ್ ಎಂದು ಫೇಸ್‌ಬುಕ್‌ನಲ್ಲಿ ಜಾಹೀರಾತು ನೀಡಿ, ನಂತರ ಬಹುಮಾನ ಬಂದಿರುವುದಾಗಿ ನಂಬಿಸಿ ಲಾಟರಿ ಇಲಾಖೆಯ ನೌಕರನಂತೆ ಬಿಂಬಿಸಿ, ವಿವಿಧ ಚಾರ್ಜ್‌ಸ್‌ಗಳಿಗೆಂದು ಲಕ್ಷಾಂತರ ರೂ.ಪಡೆದು ಹಿರಿಯ ನಾಗರಿಕರೋರ್ವರಿಗೆ ವಂಚಿಸಿರುವ ಪ್ರಕರಣದ ಕುರಿತು ಡಿಕೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಡೇಶ್ವಾಲ್ಯದ ಸೀತಾರಾಮ ಭಟ್(65ವ.)ವಂಚನೆಗೊಳಗಾಗಿ ದೂರು ನೀಡಿದವರು.


‘ಸೆ.21ರಂದು ಮೊಬೈಲ್‌ನಲ್ಲಿ, ಫೇಸ್ಟುಕ್‌ನಲ್ಲಿ ಬರುವ ರೀಲ್ಸ್‌ಗಳನ್ನು ನೋಡಿಕೊಂಡಿರುವ ಸಮಯ Kerala Mega Jackpot Tickets ಎಂಬ ಆನ್ಲೈನ್ ಕೇರಳ ಲಾಟರಿ ಟಿಕೆಟ್ ಕುರಿತ ಜಾಹಿರಾತಿನ ರೀಲ್ಸ್ ಬಂದಿದ್ದು,ಸದ್ರಿ ಜಾಹೀರಾತನ್ನು ನೋಡಿ ಟಿಕೆಟ್ ಖರೀದಿಸಲು ಸದ್ರಿ ಜಾಹಿರಾತಿನಲ್ಲಿ ನಮೂದಿಸಿದ್ದ ಲಿಂಕ್ ಒಂದನ್ನು ಸೆಲೆಕ್ಟ್ ಮಾಡಿದಾಗ(ಪ್ರಸ್ತುತ ಸದ್ರಿ ಲಿಂಕ್ ಇರುವುದಿಲ್ಲ)ಟಿಕೆಟ್‌ಗಳನ್ನು ಆಯ್ಕೆ ಮಾಡಲು ವೆಬ್‌ಸೈಟ್ ಒಂದು ತೆರೆದುಕೊಂಡಿದ್ದು,ಅದರಲ್ಲಿ ಮೂರು ಟಿಕೆಟ್‌ಗಳನ್ನು ಸೆಲೆಕ್ಟ್ ಮಾಡಿದಾಗ,ತಾನು ಸೆಲೆಕ್ಟ್ ಮಾಡಿದ ಟಿಕೆಟ್‌ಗಳ ನಂಬರ್‌ನೊಂದಿಗೆ ವಾಟ್ಸ್‌ಆಪ್ ಮುಖಾಂತರ ಹಣ ಪಾವತಿ ಮಾಡಲು ಅಪರಿಚಿತ ನಂಬರ್ +91 9279733506 Shrinivasan ಎಂಬ ಹೆಸರಿನ ವಾಟ್ಸ್‌ಆಪ್ ತೆರೆದುಕೊಂಡಿದ್ದು,ತಾನು ಆಯ್ಕೆ ಮಾಡಿದ 3 ನಂಬರುಗಳಿಗೆ 120 ರೂಪಾಯಿಗಳನ್ನು ಪಾವತಿಸಲು ಗೋಗಲ್ ಪೇ ಸ್ಕ್ಯಾನರ್ ಒಂದನ್ನು ಕಳುಹಿಸಿದ್ದರು.ಅದಕ್ಕೆ ರೂ.120 ರೂಗಳನ್ನು ತನ್ನ ಮೊಬೈಲ್‌ನ ಸೂಪರ್ ಮನಿ ಪೇ ಆಪ್ ಮುಖಾಂತರ ಕಳುಹಿಸಿದ್ದು ನಂತರ ಟಿಕೆಟ್ ಬುಕ್ ಆಗಿರುವ ಬಗ್ಗೆ ವಾಟ್ಸ್‌ಆಪ್ ಮುಖಾಂತರ “Your Government Ticket has been successfully confirmed!” ಎಂಬುದಾಗಿ ಮೆಸೇಜ್ ಹಾಗೂ ಅದೇ ದಿನ ಅಪರಾಹ್ನ 1.೦೦ ಗಂಟೆಗೆ ಲಾಟರಿ ಡ್ರಾ ಆಗುವುದಾಗಿ ಸಂದೇಶ ಚೆಕ್ ಮಾಡಲು ಲಿಂಕ್ ಬಂದಿತ್ತು.ನಂತರ 01.07 ಗಂಟೆ ಸಮಯಕ್ಕೆ ಲಾಟರಿ ಡ್ರಾ ಆಗಿದ್ದhttps://drive.google.com/file/d/1hGbaGlYBIhEvOxmJb1CunF_PUDznZO17/view?usp=drive_link ಲಿಂಕ್ ಓಪನ್ ಮಾಡಿದಾಗ KERALA STATE LOTTERIES-RESULT ಎಂಬ ಮಾಹಿತಿ ತೆರೆದುಕೊಂಡಿದ್ದು,ಅದರಲ್ಲಿ ಅಕ್ಷರಗಳು ಚಿಕ್ಕದಿದ್ದ ಕಾರಣ ನೋಡಿರುವುದಿಲ್ಲ. ನಂತರ ವಾಟ್ಸ್‌ಆಪ್‌ನಲ್ಲಿ +919279733506 ನಂಬರಿನಿಂದ, ತನಗೆ 3ನೇ ಬಹುಮಾನವಾಗಿ ರೂ. 8,೦೦,೦೦೦ ಬಂದಿರುವುದಾಗಿಯೂ,ಹಣ ಪಾವತಿ ಮಾಡಲು ತನ್ನ ಬ್ಯಾಂಕ್ ಖಾತೆಯ ವಿವರ ಕಳುಹಿಸಲು ತಿಳಿಸಿದ್ದರು.ಅದರಂತೆ ತನ್ನ ಬ್ಯಾಂಕ್ ಖಾತೆಯ ಪಾಸ್ ಪುಸ್ತಕದ ಫೋಟೋ ಕಳುಹಿಸಿದ ನಂತರ ತನ್ನ ಖಾತೆಗೆ ರೂ.8,೦೦,೦೦೦ ಜಮೆಯಾಗಿರುವಂತಹ ಸಂದೇಶವೊಂದನ್ನು ವಾಟ್ಸ್‌ಆಪ್ ಮುಖಾಂತರ ಕಳುಹಿಸಿದ್ದು, ಈ ಕುರಿತು ಖಿಚಿx ರೂ, ೪,೯೯೯/- ನ್ನು ಪಾವತಿಸಲು ಸ್ಕ್ಯಾನರ್ ಒಂದನ್ನು ಕಳುಹಿಸಿ ಪಾವತಿಸಲು ತಿಳಿಸಿದ್ದರು.ಆ ಸ್ನಾನರ್‌ಗೆ ಹಣವನ್ನು ಪಾವತಿಸಿ ಅದರ Screen Shot ಕಳುಹಿಸಿದ್ದು, ನಂತರ SBI ONLINE ವೆಬೈಟ್ ನಂತರ ತೋರುವScreen Shot ಒಂದನ್ನು ಕಳುಹಿಸಿದ್ದು, ಅದರಲ್ಲಿ CST Charge ರೂ. 12,6೦೦/- ಪಾವತಿಸಲು ಬಾಕಿ ಇರುವುದಾಗಿ, ಸದ್ರಿ ಹಣವನ್ನು ಪಾವತಿಸಲು ಪುನಃ ಸ್ಕ್ಯಾನರ್ ಒಂದನ್ನು ಕಳುಹಿಸಿರುತ್ತಾರೆ.ಈ ಬಗ್ಗೆ ಸಂಶಯಗೊಂಡು,ಇದನ್ನು ನಂಬುವುದು ಹೇಗೆಂದು ಕೇಳಿದಾಗGovernment of Kerala Lotteries Department ಎಂಬುದಾಗಿ ಕೇರಳ ಸರ್ಕಾರದ ಲಾಂಛನ ಹೊಂದಿರುವ PEN: 973152 SRINIVASAN OFFICE ACCOUNTANT ಎಂಬ ಐಡೆಂಟಿಟಿ ಕಾರ್ಡ್ ಒಂದರ ಫೋಟೋವನ್ನು ಕಳುಹಿಸಿರುತ್ತಾರೆ.ನಂತರ ತಾನು ಹಣ ಪಾವತಿ ಮಾಡಿ ಅದರ ಸ್ಕ್ರೀನ್‌ಶಾಟ್ ಕಳುಹಿಸಿದ್ದೆ.ನಂತರ Goods and Services Tax Council ಎಂಬ ಪತ್ರದ ಫೊಟೋ ಕಳುಹಿಸಿದ್ದು, ಅದರಲ್ಲಿ GST ರೂ.23,999.99 ಪಾವತಿಸಲು ಬಾಕಿ ಇರುವುದಾಗಿ ಸ್ಕ್ಯಾನರ್ ಒಂದನ್ನು ಪುನಃ ಕಳುಹಿಸಿ ಪಾವತಿಸಲು ತಿಳಿಸಿರುತ್ತಾರೆ.ಅದರಂತೆ ತಾನು ರೂ.23,999 ಹಣವನ್ನು ಪಾವತಿಸಿದ್ದೆ.ಸದ್ರಿ ಹಣವು ಪಾವತಿಯಾಗಿರುವುದಿಲ್ಲ ಪುನಃ29,999.99 ಹಣವನ್ನು ಪಾವತಿಸುವಂತೆ ತಿಳಿಸಿದ್ದು,ಅವರು ತಿಳಿಸಿದಂತೆ ಪುನಃ ರೂ.23,999.99 ಹಣವನ್ನು ಪಾವತಿಸಿರುತ್ತಾರೆ.ನಂತರReserve Bank of India ಎಂಬ ಪತ್ರದ ಫೋಟೋ ಕಳುಹಿಸಿದ್ದು, ಅದರಲ್ಲಿ Pending RBI Charges/Processing Fee ರೂ.15,555 ಪಾವತಿಸಲು ಬಾಕಿ ಇರುವುದಾಗಿ ತಿಳಿಸಿದ್ದು, PayTM ಸ್ಕ್ಯಾನರ್ ಒಂದನ್ನು ಕಳುಹಿಸಿ ಹಣ ಪಾವತಿಸಲು ತಿಳಿಸಿದ್ದರು.

ಸದ್ರಿ ಹಣವನ್ನು ರೂ.10,೦೦೦ ಮತ್ತು ರೂ.5,555ರಂತೆ ಎರಡು ವಹಿವಾಟುಗಳಲ್ಲಿ ಕಳುಹಿಸಿದ್ದೆ.ನಂತರ ಸೆ.22ರಂದು ಮೇಲ್ಕಂಡ ವಾಟ್ಸ್‌ಆಪ್ ನಂಬರಿನಿಂದ BOB ಬ್ಯಾಂಕ್ ಆಫ್ ಬರೋಡಾ TDS Remittance Advance ಎಂಬ ಪತ್ರದ ಫೋಟೋವನ್ನು ಕಳುಹಿಸಿ ಅದರಲ್ಲಿ Pending TDS Amount ರೂ, 39,999.99 ಪಾವತಿಸಲು ಬಾಕಿ ಇರುವುದಾಗಿ ಪಾವತಿಸಲು ಸ್ಕ್ಯಾನರ್ ಒಂದನ್ನು ಕಳುಹಿಸಿರುತ್ತಾರೆ.ಸದ್ರಿ ಹಣವನ್ನು ಪಾವತಿಸಲು ಪ್ರಯತ್ನಿಸಿದಾಗ ಸಾಧ್ಯವಾಗದೇ ಇದ್ದು, ಅವರು ರೂ.10,೦೦೦ದಂತೆ ಪ್ರತ್ಯೇಕವಾಗಿ ಕಳುಹಿಸಲು ತಿಳಿಸಿದ್ದರು.ಸದ್ರಿ ಸ್ಕ್ಯಾನರ್ಗೆ ರೂ.10,೦೦೦ದಂತೆ 2 ಬಾರಿ ಹಣವನ್ನು ಪಾವತಿ ಮಾಡಿದ್ದು ನಂತರ Shrinivasan ಎಂಬ ಹೆಸರಿನ ಅಪರಿಚಿತ ವಾಟ್ಸ್‌ಆಪ್ ಸಂಖ್ಯೆ: +639305466914 ನೇದರಿಂದ ಹಣ ಪಾವತಿಯಾದ ಬಗ್ಗೆ ಸ್ಟೀನ್ ಶಾಟ್‌ಗಳನ್ನು ಕಳುಹಿಸುವಂತೆ ತಿಳಿಸಿದ್ದು,ಮೊದಲಿನವರೇ ಇರಬಹುದು ಎಂದು ಹಣ ಪಾವತಿಯ ಸ್ಕ್ರೀನ್‌ಶಾಟ್‌ಗಳನ್ನು ಕಳುಹಿಸಿದ್ದೆ.ನಂತರ ಅವರು ತಿಳಿಸಿದಂತೆ ಸೆ.24ರಿಂದ 30ರವರೆಗೆ ವಿವಿಧ ಚಾರ್ಜಸ್‌ಗಳಿಗಾಗಿ ರೂ.1,33,೦೦೦ ಹಣವನ್ನು ಪಾವತಿ ಮಾಡಿದ್ದು ನಂತರ ಸಂಶಯಗೊಂಡು ಅಪರಿಚಿತರಲ್ಲಿ ವಿಚಾರಿಸಿದಾಗ ಹಣವು ಖಂಡಿತವಾಗಿಯೂ ನಿಮ್ಮ ಖಾತೆಗೆ ಬರುತ್ತದೆ ಎಂಬುದಾಗಿ ತಿಳಿಸಿದ್ದರು. ನಂತರ ಅ.03ರಂದು ಅಪರಿಚಿತ ಮೊಬೈಲ್ ಸಂಖ್ಯೆ +919135473862 ನೇದರಿಂದ ಮರಳಿ ಆನ್ಲೈನ್ ಕೇರಳ ಲಾಟರಿ ಖರೀದಿ ಬಗ್ಗೆ ಸ್ಕ್ಯಾನರ್ ಒಂದನ್ನು ಕಳುಹಿಸಿದ್ದು,ಈಗಾಗಲೇ ಮೋಸಹೋಗಿರುವುದಾಗಿ ತಾನು ತಿಳಿಸಿದಾಗ ಆತ,ನಾನು ಕೇರಳ ಸರ್ಕಾರದ ಲಾಟರಿ ವತಿಯಿಂದ ಮಾತನಾಡುತ್ತಿರುವುದು.

ಯಾವುದೇ ಮೋಸವಿಲ್ಲ ಎಂದು ತಿಳಿಸಿದ್ದು,ಈ ಹಿಂದೆ ತಾನು ಕಳುಹಿಸಿದ್ದ ಹಣದ ಪಾವತಿಯ ಎಲ್ಲಾ ಸ್ಕ್ರೀನ್ ಶಾಟ್‌ಗಳನ್ನು ಹಾಗೂ ಐಡೆಂಟಿಟಿ ಕಾರ್ಡಿನ ಫೊಟೋವನ್ನು ಕಳುಹಿಸಿ ಅದರ ಬಗ್ಗೆ ವಿಚಾರಿಸಿದಾಗ, ಆತನು ಹಣವನ್ನು ನಿಮ್ಮ ಖಾತೆಗೆ ಪಾವತಿಯಾಗುವಂತೆ ಮಾಡುತ್ತೇನೆ. ಅದಕ್ಕಾಗಿ ಒಂದು ಸ್ಕ್ಯಾನರ್ ಕಳುಹಿಸಿ ರೂ.20,೦೦೦ ಪಾವತಿಸುವಂತೆ ತಿಳಿಸಿದ್ದ.ಸದ್ರಿ ಸ್ಕ್ಯಾನರ್ಗೆ ಹಣ ಪಾವತಿಸಿ ಸ್ಟೀನ್ ಶಾಟ್ ಕಳುಹಿಸಿದ್ದು, ನಂತರವೂ ಹಣ ಫಿರ್ಯಾದಿದಾರರ ಖಾತೆಗೆ ಬಂದಿರುವುದಿಲ್ಲ. ನಂತರ ಅ.05ರಂದು ಅಪರಿಚಿತ ಮೊಬೈಲ್ ಸಂಖ್ಯೆ: : +917046022790ನೇದರಿಂದ ವಾಟ್ಸ್‌ಆಪ್ ಸಂದೇಶ ಬಂದಿದ್ದು, ಅದರಲ್ಲಿBank of Baroda Online Transfer & Banking Services Department wow & Refund Amount da, 2,50,000/- ಪಾವತಿಸಲು Refundable Charge/Fee 12,000/- ಪಾವತಿಸುವಂತೆ ಸಂದೇಶವನ್ನು ಕಳುಹಿಸಿದ್ದು,ಅದಕ್ಕೆ ಸ್ಪಂದನೆಯನ್ನು ನೀಡದ್ದಕ್ಕೆ, ನಿಮಗೆ ಹಣ ಬೇಕಾದಲ್ಲಿ ರೂ. 12,೦೦೦ ಪಾವತಿಸಿ ಇಲ್ಲವಾದಲ್ಲಿ ಬೇಡ ಎಂಬ ಗಿoiಛಿe ಒessಚಿge ಕಳುಹಿಸಿರುತ್ತಾರೆ.ಈ ರೀತಿಯಾಗಿ ಒಟ್ಟು ರೂ.2,34,272.99 ಹಣವನ್ನು ಕಳುಹಿಸಿದ್ದು, ನಂತರ ಮೋಸಗೊಂಡಿರುವ ಬಗ್ಗೆ ಅರಿವಾಗಿ ಈ ಬಗ್ಗೆ 1930ರವರಿಗೆ ಕರೆ ಮಾಡಿ ದೂರು ದಾಖಲಿಸಿರುವುದಾಗಿ ಸೀತಾರಾಮ ಭಟ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here