ಪುತ್ತೂರಿನ ಮೈತ್ರಿ ಎಲೆಕ್ಟ್ರಿಕ್‌ನಲ್ಲಿ ಹೆವೆಲ್ಸ್ ಎಕ್ಸ್‌ಪೀರಿಯನ್ಸ್ ಸೆಂಟರ್ ಶುಭಾರಂಭ

0

ಪುತ್ತೂರು: ಹೆವೆಲ್ಸ್ ಕಂಪನಿಯ ಪುತ್ತೂರಿನ ಏಕೈಕ ಅಧಿಕೃತ ಡೀಲರ್ ಆಗಿರುವ ಮೈತ್ರಿ ಎಲೆಕ್ಟ್ರಿಕ್ ಕಂ.ನಲ್ಲಿ ನೂತನ ಹೆವೆಲ್ಸ್ ಎಕ್ಸ್‌ಪೀರಿಯನ್ಸ್ ಸೆಂಟರ್ ಅಕ್ಟೋಬರ್ 15ರಂದು ಶುಭಾರಂಭಗೊಂಡಿತು.

ಪುತ್ತೂರಿನ ಮುಖ್ಯ ರಸ್ತೆಯ ಮೊಳಹಳ್ಳಿ ಶಿವರಾಯ ರಸ್ತೆಯಲ್ಲಿರುವ ಸುಶಾ ಚೇಂಬರ್ಸ್ ಕಟ್ಟಡದಲ್ಲಿ ಈ ನೂತನ ಸೆಂಟರ್ ಆರಂಭಗೊಂಡಿದೆ. ಉದ್ಘಾಟಿಸಿದ ಮಾಸ್ಟರ್ ಪ್ಲಾನರಿಯ ಪಾಲುದಾರರಾದ ಅರ್ಜುನ್ ಮಾತನಾಡಿ, ಸಣ್ಣ ಅಂಗಡಿ ಪ್ರಾರಂಭಿಸಿ ಗುಣಮಟ್ಟದ ಉತ್ಪನ್ನಗಳನ್ನು ನೀಡಿದ ಪರಿಣಾಮ ಮಾಲಕ ರವಿ ಅವರು ಇದೀಗ ದೊಡ್ಡ ಮಟ್ಟದಲ್ಲಿ ಬೆಳೆದಿದ್ದಾರೆ. ಇವರ ಉದ್ಯಮ ಇನ್ನಷ್ಟು ಬೆಳೆಯಲಿ ಎಂದು ಶುಭಹಾರೈಸಿದರು.

ಮತ್ತೋರ್ವ ಪಾಲುದಾರ ಆಕಾಶ್ ಮಾತನಾಡಿ, ರವಿ ಅವರಿಗೆ ನಮ್ಮ ಪೂರ್ಣ ಬೆಂಬಲ ಇದೆ ಎಂದು ಹೇಳಿ ಶುಭಹಾರೈಸಿದರು.

ಹೆವೆಲ್ಸ್ ಇಂಡಿಯಾ ಲಿ. ಕಂಪನಿಯ ಕರ್ನಾಟಕ‌ದ ಬ್ರ್ಯಾಂಚ್ ಹೆಡ್ ನವೀನ್ ಚಂದ್ರನ್ ಮಾತನಾಡಿ, ಮೈತ್ರಿ‌ಕಂಪನಿ ಪುತ್ತೂರಿನ‌ ಏಕೈಕ ಹೆವೆಲ್ಸ್ ಕಂಪನಿಯ ಡೀಲರ್ ಆಗಿದ್ದಾರೆ. ಗ್ರಾಹಕರು ಹೆವೆಲ್ಸ್ ಕಂಪನಿಯ ಉತ್ಪನ್ನಗಳನ್ನು ಮೈತ್ರಿ ಇಲೆಕ್ಟ್ರಿಕ್ ನಲ್ಲೂ ಖರೀದಿಸಬಹುದಾಗಿದೆ. ರವಿ ಅವರಂತೆ ಹೆವೆಲ್ಸ್ ಕಂಪನಿ ಕೂಡ 10ಸಾವಿರದಿಂದ ಪ್ರಾರಂಭವಾಗಿ ಇದೀಗ 25ಸಾವಿರ ಕೋಟಿಯ ಉದ್ಯಮವಾಗಿ ಬೆಳೆದಿದೆ. ಎಸಿ, ಫ್ಯಾನ್ಸ್, ಸ್ವಿಚ್, ಮೈನ್ ಸ್ವಿಚ್, ಲೈಟ್ಸ್, ಮಿಕ್ಸಿ ಇತ್ಯಾದಿಗಳು ಇಲ್ಲಿ ಲಭ್ಯವಿದ್ದು, ಮುಖ್ಯವಾಗಿ ಹೆವೆಲ್ಸ್ ಕಂಪನಿಯ ಇವಿ ಚಾರ್ಜರ್ಸ್ ಕೂಡ ಇಲ್ಲಿ ಲಭ್ಯವಿದೆ ಎಂದರು.


ಹೆವೆಲ್ಸ್ ಕಂಪನಿಯ ವಯರ್ ಡಿವಿಝನರ್ ಆರ್.ಎಸ್.ಎಂ. ವಿವೇಕಾನಂದ್ ಭಟ್ ಮಾತನಾಡಿ, ಗ್ರಾಹಕರನ್ನು ತಲುಪಲು ಮೈತ್ರಿ ಕಂಪನಿಯು ಒಂದಲ್ಲಾ ಒಂದು ವಿಚಾರದಲ್ಲಿ ತೊಡಗಿಸಿಕೊಳ್ಳುತ್ತಿದೆ. ಇದೀಗ ಹೆವೆಲ್ಸ್ ಕಂಪನಿಯೊಂದಿಗೆ ಡೀಲರ್ ಶಿಪ್ ಹೊಂದಿ ಉದ್ಯಮವನ್ನು ಇನ್ನಷ್ಟು ಹೆಚ್ಚಿಸಿದೆ‌ ಎಂದರು.

ಮೈತ್ರಿ ಇಲೆಕ್ಟ್ರಿಕ್ ಕಂ. ಮಾಲಕ ರವಿ ನಾರಾಯಣ ಮಾತನಾಡಿ, ಸಣ್ಣ ಅಂಗಡಿ ಹಾಕಿದಾಗ ಅನೇಕರು ನನ್ನ ಕೈಹಿಡಿದು ಬೆಳೆಸಿದ್ದಾರೆ. ಅದರಲ್ಲೂ ಮಾಸ್ಟರ್ ಪ್ಲಾನರಿಯವರ ಪ್ರೋತ್ಸಾಹವೂ ನನ್ನ ಈ ಬೆಳವಣಿಗೆಗೆ ಕಾರಣವಾಗಿದೆ. ಹೆವೆಲ್ಸ್ ಕಂಪನಿಯ ಉತ್ಪನ್ನಗಳು ಗ್ರಾಹಕರಿಗೆ ತಲುಪಬೇಕೆಂಬ ಉದ್ದೇಶದಿಂದ ಆ ಕಂಪನಿಯ‌ ಡೀಲರ್ ಶಿಪ್ ಪಡೆದು ಇದೀಗ ಅದರ ಮಳಿಗೆಯನ್ನೂ ಪ್ರಾರಂಭಿಸಿದ್ದೇವೆ ಎಂದು ಹೇಳಿ ಗ್ರಾಹಕರ ಪ್ರೋತ್ಸಾಹ ಕೋರಿದರು.

ಇಂಜಿನಿಯರ್ ಕಮ್ಮಾಜೆ ಕೇಶವ್ ಭಟ್, ಹೆವೆಲ್ಸ್ ಕಂಪನಿಯ ಕರ್ನಾಟಕ ಕೋಸ್ಟಲ್ ಟೆರಿಟರ್ ಫ್ಯಾನ್ ಮತ್ತು ಲೈಟ್ಸ್ ಮ್ಯಾನೇಜರ್ ರುದ್ರಯ್ಯ (ಮುತ್ತು), ಮಾರ್ಕಂ ಮ್ಯಾನೇಜರ್ ಆನಂದ್, ಬ್ರ್ಯಾಂಡ್ ಸ್ಟೋರ್ ಮ್ಯಾನೇಜರ್ ಕಿಶೋರ್ ಮತ್ತು ಕರಾವಳಿ ಭಾಗದ ಎಲ್ಲಾ ಉತ್ಪನ್ನಗಳ ಮ್ಯಾನೇಜರ್ಸ್ ಉಪಸ್ಥಿತರಿದ್ದರು. ಮೈತ್ರಿ ಕಂಪನಿಯ ಉರ್ಬನ್ ಮತ್ತು ಸಿಬ್ಬಂದಿಗಳು ಸಹಕರಿಸಿದರು. ಕು.ಶೌರಿ ಪ್ರಾರ್ಥಿಸಿದರು. ಮೈತ್ರಿ ಕಂಪನಿಯ ಮಾಲಕರ ಪುತ್ರ ಪ್ರಮಥ ಸ್ವಾಗತಿಸಿ, ಶಿವ ಸುಬ್ರಹ್ಮಣ್ಯ ಪಲ್ಲತ್ತಡ್ಕ ಅವರು ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here