ಕುತ್ಯಾಡಿ ದಿವ್ಯಶ್ರೀ ಎಸ್ ರವರಿಗೆ ಪ್ರಥಮ ರ‍್ಯಾಂಕ್ ಜೊತೆಗೆ ಚಿನ್ನದ ಪದಕ

0

ಅರಿಯಡ್ಕ: ಅರಿಯಡ್ಕ ಗ್ರಾಮದ ಕುತ್ಯಾಡಿ ದಿವ್ಯಶ್ರೀ ಎಸ್ ರವರಿಗೆ ಮಂಗಳೂರಿನ ಪ್ರತಿಷ್ಠಿತ ಶ್ರೀನಿವಾಸ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ 2024-2026ನೇ ಬ್ಯಾಚ್ ನ ಮಾಸ್ಟರ್ ಆಫ್ ಸೋಶಿಯಲ್ ವರ್ಕ್ (MSW) ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ‍್ಯಾಂಕ್ ಜೊತೆಗೆ ಚಿನ್ನದ ಪದಕ ಪಡೆದಿದ್ದಾರೆ.ಅ15 ನಡೆದ ಘಟಿಕೋತ್ಸವದಲ್ಲಿ ಇವರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು.

ಇವರು ತಮ್ಮ ಪ್ರಾಥಮಿಕ, ಪ್ರೌಢ, ಪದವಿಪೂರ್ವ ಮತ್ತು ಪದವಿ ಶಿಕ್ಷಣವನ್ನು ಪುತ್ತೂರಿನ ಹೆಸರಾಂತ ವಿದ್ಯಾಸಂಸ್ಥೆಯಾದ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ನಡೆಸಿದ್ದಾರೆ.ಇವರು ಕುತ್ಯಾಡಿಯ ನಿವೃತ್ತ ಎ.ಎಸ್.ಐ. ಶ್ರೀಧರ ಮಣಿಯಾಣಿ ಮತ್ತು ವೇದಾವತಿ ದಂಪತಿಗಳ ಪುತ್ರಿಯಾಗಿದ್ದಾರೆ.

LEAVE A REPLY

Please enter your comment!
Please enter your name here