ಪಾಣಾಜೆ ಗ್ರಾಮ ಪಂಚಾಯತ್ ನ ಪಿಡಿಒ ಆಗಿ ಆಗಮಿಸಿದ ಜಯಪ್ರಕಾಶ್ .ಎಂ ಇವರಿಗೆ ಪುತ್ತಿಲ ಪರಿವಾರ ವತಿಯಿಂದ ಸ್ವಾಗತ

0

ನಿಡ್ಪಳ್ಳಿ: ಪಾಣಾಜೆ ಗ್ರಾಮ ಪಂಚಾಯತ್ ಗೆ ನೂತನವಾಗಿ ನಿಯೋಜಿತ ಪಿಡಿಒ ಆಗಿ ಆಗಮಿಸಿದ ಜಯಪ್ರಕಾಶ್.ಎಂ  ಅವರನ್ನು ಪಾಣಾಜೆ ಪುತ್ತಿಲ ಪರಿವಾರ  ಸೇವಾ ಟ್ರಸ್ಟ್ ವತಿಯಿಂದ ಅ.15 ರಂದು  ಸ್ವಾಗತಿಸಲಾಯಿತು. ಜಯಪ್ರಕಾಶ್ ಎಂ ಅವರು ನಿಡ್ಪಳ್ಳಿ ಗ್ರಾಮ ಪಂಚಾಯತ್ ನ ಖಾಯಂ ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಪಾಣಾಜೆ ಗ್ರಾಮ ಪಂಚಾಯತ್ ನಲ್ಲಿ ಪಿಡಿಒ ತೆರವಾದ ಸ್ಥಾನಕ್ಕೆ ಇವರನ್ನು ನಿಯೋಜನೆ ಗೊಳಿಸಲಾಗಿದೆ.

ಟ್ರಸ್ಟ್ ನಿರ್ದೇಶಕರಾದ ಪ್ರೇಮ್ ರಾಜ್ ಆರ್ಲಪದವು ಮತ್ತು ಪ್ರದೀಪ್ ಪಾಣಾಜೆ ಮತ್ತು ಗ್ರಾಮ ಸಮಿತಿಯ ಪ್ರಮುಖರಾದ ಹರೀಶ್ ಕಡಮಾಜೆ, ಸಂದೀಪ್ ವಾಣಿಯನ್, ರವಿಚಂದ್ರ ಬಿ. ಜಿ ಭರಣ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here