ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಯುಧ ಪೂಜೆ, ಷಷ್ಠಿ ಪೂಜೆ – ನವರಾತ್ರಿ ವೇಷ ಕುಣಿತ 

0

ಪುತ್ತೂರು: ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲಿಸಲ್ಪಡುವ ಏಕೈಕ ಕ್ಷೇತ್ರ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅ.16ರಂದು ಆಯುಧ ಪೂಜೆ, ಷಷ್ಠಿ ಪೂಜೆ ನಡೆಯಿತು.ದೇವಸ್ಥಾನದ ಅರ್ಚಕ ಪ್ರವೀಣ್ ಶಂಕರ್ ಅವರ ಪೌರೋಹಿತ್ಯದಲ್ಲಿ ಬೆಳಿಗ್ಗೆ ಆಯುಧ ಪೂಜೆ, ಮಧ್ಯಾಹ್ನ  ಷಷ್ಠಿ ಪೂಜೆ, ಬಳಿಕ ಪ್ರಸಾದ ವಿತರಣೆ ನಡೆಯಿತು.

ಬಳಿಕ ನವರಾತ್ರಿ ವಿಶೇಷ ವೇಷಧಾರಿಗಳ ಕುಣಿತ ನಡೆಯಿತು. ನಂತರ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಷಷ್ಟಿ ಪೂಜೆಯ ಸೇವಾಕರ್ತರಾದ ಸಂತೋಷ್ ಕುಮಾರ್ ರೈ ಇಳಂತಾಜೆ ,ವಿಲಾಸ್ ರೈ ಪಾಲ್ತಾಡು ಅವರಿಗೆ ಪ್ರಸಾದ ನೀಡಿ ಗೌರವಿಸಲಾಯಿತು. ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.ದೇವಸ್ಥಾನದ ಆಡಳಿತ ಮೊಕ್ತೇಸರ  ಸಂತೋಷ್ ಕುಮಾರ್ ರೈ ನಳೀಲು ಹಾಗೂ ಮೊಕ್ತೇಸರರು, ಉತ್ಸವ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಡಿ.14 ರಂದು ಪಂಚಮಿ ಉತ್ಸವ, ಡಿ.15 : ಚಂಪಾ ಷಷ್ಠಿ ಮಹೋತ್ಸವ ಜಾತ್ರೋತ್ಸವ 

ದೇವಸ್ಥಾನದಲ್ಲಿ ಪ್ರತೀ ತಿಂಗಳು ಶುದ್ಧ ಷಷ್ಠಿಯಂದು ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯುತ್ತದೆ. ನವರಾತ್ರಿ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಸಾಂಪ್ರದಾಯಿಕ ವೇಷಗಳನ್ನು ಪ್ರೋತ್ಸಾ ಹಿಸುವ ನಿಟ್ಟಿನಲ್ಲಿ ದೇವಸ್ಥಾನದಲ್ಲಿ  ನವರಾತ್ರಿ ವೇಷದ ಕುಣಿತವನ್ನು ನಡೆಸಲಾಯಿತು. ಡಿ.14 ರಂದು ಪಂಚಮಿ ಉತ್ಸವ, ಡಿ.15 : ಚಂಪಾ ಷಷ್ಠಿ ಮಹೋತ್ಸವ ವರ್ಷಾವಧಿ ಜಾತ್ರೋತ್ಸವ ನಡೆಯಲಿದೆ. ಸಂತೋಷ್ ಕುಮಾರ್ ರೈ ನಳೀಲು, ಆಡಳಿತ ಮೊಕ್ತೇಸರರು ಶ್ರೀ ಕ್ಷೇತ್ರ ನಳೀಲು

LEAVE A REPLY

Please enter your comment!
Please enter your name here