







ವಿಟ್ಲ: ಅಳಕೆಮಜಲು ಅಶೋಕನಗರ ಶ್ರೀ ಶಾರದಾಂಭ ಭಜನಾಮಂದಿರದಲ್ಲಿ 44ನೇ ವರ್ಷದ ನವರಾತ್ರಿ ಮತ್ತು ಶಾರದೋತ್ಸವದ ಉದ್ಘಾಟನೆ ಅ17ರಂದು ಬೆಳಗ್ಗೆ ನಡೆಯಿತು.ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾಸಮಿತಿ ಅಧ್ಯಕ್ಷರಾದ ಪ್ರಕಾಶ್ ಕೆ.ಎಸ್. ಉರಿಮಜಲು ಧ್ವಜಾರೋಹಣ ನೆರವೇರಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಭಜನಾಮಂಡಳಿಯ ಗೌರವ ಸಲಹೆಗಾರರಾದ ರಾಜಾರಾಮ ಶೆಟ್ಟಿ ಕೊಲ್ಪೆಗುತ್ತು. ಅಧ್ಯಕ್ಷರಾದ ಕೃಷ್ಣ ಕಿಶೋರ್ ಭಟ್ ಪೆಲತ್ತಿಂಜ, ಶ್ರೀಶಾರದಾಂಭ ಮಹಿಳಾ ಸಮಿತಿ ಕೋಶಾಧಿಕಾರಿ ರೂಪ ಪುಂಡಿಕಾಯಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪ್ರಕೃತಿ ಪ್ರಾರ್ಥಿಸಿದರು.ಭವ್ಯ ಪೆಲತ್ತಿಂಜ ಸ್ವಾಗತಿಸಿದರು. ವನಿತಾ ಅಳಕೆಮಜಲು ವಂದಿಸಿದರು.ಸುಗಂದಿನಿ ಕಾರ್ಯಕ್ರಮ ನಿರೂಪಿಸಿದರು.


ವೈದ್ಧಿಕ ಕಾರ್ಯಕ್ರಮ: ಬೆಳಗ್ಗೆ ಗಣಪತಿ ಹವನ ನಡೆದು, ವೇ. ಮೂ. ಶ್ರೀಧರ ಭಟ್ ಕಬಕ ರವರ ಪೌರೋಹಿತ್ಯದಲ್ಲಿ ಮೂರ್ತಿ ಪ್ರತಿಷ್ಠೆ ನಡೆಯಿತು. ಬಳಿಕ ಪೂಜಾ ಸೇವೆಗಳು ಆರಂಭಗೊಂಡು ತೆನೆವಿತರಣೆ, ಮಕ್ಕಳಿಗೆ ಅಕ್ಷರಾಭ್ಯಾಸ ನಡೆದು ಭಜನೆ ನಡೆಯಿತು. ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನ ಸಂತರ್ಪಣೆ ನಡೆಯಿತು.













