ಹಿರೇಬಂಡಾಡಿ ಮಂಜುಶ್ರೀ ಭಜನಾ ಮಂದಿರದಲ್ಲಿ ನವರಾತ್ರಿ ಉತ್ಸವ

0

ಹಿರೇಬಂಡಾಡಿ: ಮಂಜುಶ್ರೀ ಸೇವಾ ಟ್ರಸ್ಟ್, ಮಂಜುಶ್ರೀ ಭಜನಾ ಮಂದಿರ ಶಿವನಗರ ಹಿರೇಬಂಡಾಡಿ ಇದರ ಆಶ್ರಯದಲ್ಲಿ 14ನೇ ವರ್ಷದ ನವರಾತ್ರಿ ಉತ್ಸವ ಮತ್ತು ಭಜನಾ ಕಾರ್ಯಕ್ರಮಕ್ಕೆ ಅ.11ರಂದು ಚಾಲನೆ ನೀಡಲಾಯಿತು.

ಪುತ್ತೂರು ಶಾಸಕ ಅಶೋಕ್‌ಕುಮಾರ್ ರೈ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮಂಜುಶ್ರೀ ಭಜನಾ ಮಂದಿರದ ಜೀರ್ಣೋದ್ಧಾರ ಕೆಲಸಗಳು ಮುಂದಿನ ಮಳೆಗಾಲದ ಒಳಗೆ ಪೂರ್ಣಗೊಂಡು ಊರಿನ ಹಬ್ಬದಂತೆ ಬ್ರಹ್ಮಕಲಶೋತ್ಸವ ಅದ್ದೂರಿಯಾಗಿ ನಡೆಯಬೇಕು. ಸುಮಾರು 80 ಲಕ್ಷ ರೂ.ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳಲಿರುವ ಭಜನಾ ಮಂದಿರಕ್ಕೆ ಈಗಾಗಲೇ 5 ಲಕ್ಷ ರೂ.ಅನುದಾನ ನೀಡಿದ್ದು ಮುಂದೆ 10 ಲಕ್ಷ ರೂ.ಅನುದಾನ ನೀಡುತ್ತೇನೆ. ಸಮಿತಿಯವರು 25 ಲಕ್ಷ ರೂ.ಅನುದಾನ ಕೋರಿ ಮನವಿ ಸಲ್ಲಿಸಿರುತ್ತಾರೆ. 25 ಲಕ್ಷ ರೂ. ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಬ್ರಹ್ಮಕಲಶೋತ್ಸವಕ್ಕೆ ವೈಯಕ್ತಿಕವಾಗಿ ಅನ್ನಸಂತರ್ಪಣೆಗೆ 1 ಲಕ್ಷ ರೂ.ದೇಣಿಗೆ ನೀಡುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಭಜನಾ ಮಂದಿರದ ವತಿಯಿಂದ ಶಾಸಕರನ್ನು ಗೌರವಿಸಲಾಯಿತು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಅಜಿತ್ ಪಾಲೇರಿ, ಮಂಜುಶ್ರೀ ಭಜನಾ ಮಂದಿರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಾಧವ ಗೌಡ ಹೆನ್ನಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭಜನಾ ಮಂದಿರದ ಅಧ್ಯಕ್ಷ ಚಂದ್ರಶೇಖರ ನಾಯ್ಕ್ ಮುರದಮೇಲು ಅಧ್ಯಕ್ಷತೆ ವಹಿಸಿದ್ದರು. ಮಂಜುಶ್ರೀ ಸೇವಾ ಟ್ರಸ್ಟ್ ನ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸೋಮೇಶ್ ವಂದಿಸಿದರು. ಸುಧಾಕರ ಕಜೆ ನಿರೂಪಿಸಿದರು. ನಂತರ ಗಯಾಪದ ಕಲಾವಿದರೆ ಉಬಾರ್ ಅಭಿನಯದ ತುಳು ಹಾಸ್ಯಮಯ ನಾಟಕ ‘ ಓಲು ತತ್ತಂಡ್’ ಪ್ರದರ್ಶನಗೊಂಡಿತು.

LEAVE A REPLY

Please enter your comment!
Please enter your name here