







7 ನೇ ದಿನ ಸಂಭ್ರಮ, ಭಜನೆ, ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ


ಪುತ್ತೂರು: ಭಗವಾನ್ ಶ್ರೀರಾಮಚಂದ್ರ ದೇವರು ಸಪರಿವಾರ ಸಹಿತ ಭಕ್ತರಿಗೆ ದರ್ಶನ ನೀಡುತ್ತಿರುವ ಕೆದಂಬಾಡಿ ಗ್ರಾಮದ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ 7 ನೇ ದಿನವಾದ ಅ.17 ರಂದು ರಾತ್ರಿ ನಾೖಲ ಕೃಷ್ಣ ರೈ ಮುಂಡಾಳಗುತ್ತುರವರ ಭಜನಾ ಸೇವೆ, ಕಡಬ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು.




ಸಾಂಸ್ಕೃತಿಕ ಕಾರ್ಯಕ್ರಮವನ್ನು ಸುಳ್ಯ ದೇವಚಳ್ಳ ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ ಉದ್ಘಾಟಿಸಿದರು. ವಿದುಷಿ ಅಭಿಜ್ಞಾ ಮತ್ತು ಶಿಷ್ಯವೃಂದ ನಾಟ್ಯಾಭಿಯೋಗಿ ನೃತ್ಯಶಾಲೆ ತಿಂಗಳಾಡಿ ಇವರಿಂದ ನೃತ್ಯಾರ್ಪಣಂ ಮನರಂಜಿಸಿತು. ರಾತ್ರಿ ಅನ್ನಸಂತರ್ಪಣೆ ನಡೆಯಿತು. ಊರಪರವೂರ ನೂರಾರು ಭಕ್ತಾಧಿಗಳು ಆಗಮಿಸಿ ದೇವರ ಗಂಧ ಪ್ರಸಾದ, ಅನ್ನಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶ್ರೀರಾಮ ಮಂದಿರದ ಆಡಳಿತ ಸಮಿತಿ ಅಧ್ಯಕ್ಷರುಗಳು, ಭಜನಾ ಸಮಿತಿ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ 129 ಮನೆಯ ಭಜನಾ ಸೇವಾರ್ಥಿಗಳು, ಭಕ್ತಾಧಿಗಳು ಉಪಸ್ಥಿತರಿದ್ದರು.
ಇಂದು ಶ್ರೀ ದುರ್ಗಾನಮಸ್ಕಾರ ಪೂಜೆ, ಸಾಮೂಹಿಕ ಆಯುಧ ಪೂಜೆ
ಅ.18 ರಂದು ಸಂಜೆ ವೇದಮೂತಿ ಕೃಷ್ಣಕುಮಾರ ಉಪಾಧ್ಯಾಯ ಪಟ್ಲಮೂಲೆ ಇವರ ನೇತೃತ್ವದಲ್ಲಿ ಶ್ರೀ ದುರ್ಗಾನಸ್ಕಾರ ಪೂಜೆ, ಉಷಾ ಗಂಗಾಧರ ರೈ ಕೆರೆಮೂಲೆಯವರಿಂದ ಭಜನಾ ಸೇವೆ, ಶ್ರೀರಾಮ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಹಾಗೂ ಸಾಮೂಹಿಕ ಆಯುಧ ಪೂಜಾ ಕಾರ್ಯಕ್ರಮ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಂದಿರದ ಪ್ರಕಟಣೆ ತಿಳಿಸಿದೆ.










