ಮೈಸೂರು ದಸರಾದಲ್ಲಿ ಪುತ್ತೂರಿನ ಸೊಬಗು: ಬೇತಾಳನ ಬಳಿಕ ಈಗ ಕಂಬಳ

0

ವರದಿ : ಪಿ. ಜಿ. ಚಂದ್ರಶೇಖರ್ ರಾವ್

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಪ್ರಮುಖ ಆಕರ್ಷಣೆ ಬೇತಾಳನನ್ನು ಪುತ್ತೂರಿಗರು ಕಂಡಿದ್ದಾರೆ. ಕೆಲ ದಶಕಗಳ ಹಿಂದೆ ಮೈಸೂರು ದಸರಾದ ಅದ್ದೂರಿ ಜಂಬೂ ಸವಾರಿಯಲ್ಲಿ ಇಲ್ಲಿನ ಬೇತಾಳ ಪಾಲ್ಗೊಂಡಿದ್ದು ಪುತ್ತೂರಿನ ಹಿರಿಯರಿಗೆ ನೆನಪಿದೆ.

ಈ ಬಾರಿಯ ಮೈಸೂರು ದಸರಾದಲ್ಲಿ ಕಂಬಳವನ್ನು ಅಳವಡಿಸಲಾಗಿದ್ದು ವಿಶೇಷತೆ ಮೂಡಿಸಿದೆ. ಅಂದಿನ ಬೇತಾಳವೂ ನಿನ್ನೆ(ಅ.17) ನಡೆದ ಕಂಬಳದ ಕೋಣಗಳ ಮೆರವಣಿಗೆಯೂ ಪುತ್ತೂರು ಮಹಾಲಿಂಗೇಶ್ವರನ ಸನ್ನಿಧಿಯಿಂದಲೇ ಹೊರಟಿರುವುದು ಮೈಸೂರು ದಸರಾದಲ್ಲಿ ಪುತ್ತೂರಿನ ವಿಶೇಷ ಸಂಬಂಧವನ್ನು ಮತ್ತೆ ನೆನಪಿಸಿದೆ.

LEAVE A REPLY

Please enter your comment!
Please enter your name here