ಮೇಲಿನ ಮುಕ್ಕೂರು ತರವಾಡು ಮನೆಯಲ್ಲಿ ನವರಾತ್ರಿ ದೊಡ್ಡಪೂಜೆ- ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡ ಭಕ್ತರು

0

ಮುಕ್ಕೂರು: ಕಾರಣಿಕ ಶಕ್ತಿಯ ಐತಿಹ್ಯ ಹೊಂದಿರುವ ಮೇಲಿನ ಮುಕ್ಕೂರು ತರವಾಡು ಮನೆಯ ದೇವಿ ಸಾನಿಧ್ಯದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಅ. 16ರಂದು ರಾತ್ರಿ ನಡೆದ ದೊಡ್ಡಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು. ಲಕ್ಷ್ಮೀಶ ಬೈಪಾಡಿತ್ತಾಯ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನೆರವೇರಿತು.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಊರಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿದರು. ನವರಾತ್ರಿ ಉತ್ಸವದ ಅಂಗವಾಗಿ ನಡೆದ ದೊಡ್ಡಪೂಜೆಯಲ್ಲಿ ಭಕ್ತರು ಭಕ್ತಿಭಾವದಿಂದ ಪಾಲ್ಗೊಂಡು ದೇವಿಯ ದರ್ಶನ ಪಡೆದರು.

ಉತ್ಸವದ ಅಂಗವಾಗಿ ಭಕ್ತರಿಗೆ ಹಸುರುವಾಣಿ ಹಾಗೂ ಬಲಿವಾಡು ಸಮರ್ಪಿಸಲು ಅವಕಾಶ ಕಲ್ಪಿಸಲಾಗಿತ್ತು. ಭಕ್ತರು ಅಕ್ಕಿ ಸೇರಿದಂತೆ ಅಗತ್ಯ ವಸ್ತುಗಳನ್ನು ಸಮರ್ಪಿಸಿ ಧಾರ್ಮಿಕ ಸೇವೆಯಲ್ಲಿ ಪಾಲ್ಗೊಂಡರು. ಪೂಜೆಯ ಬಳಿಕ ಅನ್ನದಾನ ನಡೆಯಿತು. ಊರಿನ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಎಂ.ಕೆ. ಬಾಲಚಂದ್ರ ರಾವ್ ಬೈಪಾಡಿತ್ತಾಯ, ವಸಂತ ಬೈಪಾಡಿತ್ತಾಯ, ಊರ ಪ್ರಮುಖರು ಸಹಿತ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here