ಶ್ರೀ ಕ್ಷೇತ್ರ ಗೆಜ್ಜೆಗಿರಿ  ಅಭಿವೃದ್ಧಿ ಸಮಿತಿಯ ಸಭೆ

0

ಬಡಗನ್ನೂರು :   ಶ್ರೀ ಕ್ಷೇತ್ರ ಗೆಜ್ಜೆ ಗಿರಿಯ ಅಭಿವೃದ್ಧಿ ಸಮಿತಿಯ ಸಭೆಯು ಸಂಜೀವ ಪೂಜಾರಿ ಬಿರುವ ಇವರ ಅಧ್ಯಕ್ಷತೆಯಲ್ಲಿ ಮಂಗಳೂರಿನ ಕಂಕರಾಡಿ ಗರಡಿಯಲ್ಲಿ ಅ. 18 ರಂದು ನಡೆಯಿತು.

ದೇಯಿ ಬೈದೇತಿ ಆರೋಗ್ಯ ಕೇಂದ್ರದ ಕಟ್ಟಡದ ಕಾಮಗಾರಿಯ ಅಭಿವೃದ್ಧಿ ಬಗ್ಗೆ ಪೂರಕ ಚರ್ಚೆ ನಡೆದು, ಕ್ಷೇತ್ರದ ಯಕ್ಷಗಾನದ ಬಗ್ಗೆ ಮುಖ್ಯ ಸಂಚಾಲಕ  ನಿತ್ಯಾನಂದ ನಾವರ ಸಭೆಗೆ ಮಾಹಿತಿಯನ್ನು ನೀಡಿದರು.

 ಸಭೆಯಲ್ಲಿ ಕಂಕನಾಡಿ ಗರಡಿ ಕ್ಷೇತ್ರದ ಅಧ್ಯಕ್ಷ  ಕೆ ಚಿತ್ತರಂಜನ್, ಗೌರವಾಧ್ಯಕ್ಷ  ಪೀತಾಂಬರ ಹೇರಾಜೆ, ಕ್ಷೇತ್ರ ಆಡಳಿತ ಸಮಿತಿ ಅಧ್ಯಕ್ಷ  ರವಿ ಪೂಜಾರಿ ಚಿಲಿಂಬಿ, ಡಾ. ರಾಜಾರಾಮ್ ಕೆಬಿ ಉಪಾಧ್ಯಕ್ಷ  ಶೈಲೇಂದ್ರ ಸುವರ್ಣ, ಕೋಶಾಧಿಕಾರಿ  ಹರೀಶ್ ಸಾಲಿಯಾನ್ ಬಜಗೋಳಿ,  ಹರೀಶ್ ಪೂಜಾರಿ ಬೈಲಾಬರಿ ನಾರಾಯಣ ಮಚ್ಚಿನ, ಜಯ ವಿಕ್ರಂ ಕಲ್ಲಾಪು,  ಜಯರಾಮ ಪೂಜಾರಿ ಬಿಳುವಾಯಿ ಹಾಗೂ ಮತ್ತಿತರ ಗಣ್ಯರು ಹಾಜರಿದ್ದರು. ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ  ಉಲ್ಲಾಸ್ ಕೋಟ್ಯಾನ್ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here