







ಪುತ್ತೂರು: ಓಕೊನುಲಾ ಮಾರ್ನಮಿಯೇ ಓಕೊನುಲ ಗೇನೊ ಗಗ್ಗರದ ದನಿ ಸೂಕೆ ಗೋಕೊನುಲ ಮಾನೊ ಮಚ್ಚಿಲ್ ದ ಮಾನೆಚ್ಚಿಲ್ ಗೋಕುನುಲ ಇದು ಕರ್ಣಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ತುಳುಕವಿ ಶಿಕ್ಷಕ ರಮೇಶ್ ಉಳಯ ಇವರು ಉಡುಪಿ ಉಚ್ಚಿಲ ದಸರಾ ಕವಿಗೋಷ್ಠಿಯಲ್ಲಿ ಓದಿದ ತುಳು ಕವನದ ಸಾಲುಗಳು.ಕರಾವಳಿ ಜಿಲ್ಲೆಗಳ ಎರಡು ಪ್ರಸಿದ್ಧ ದಸರಾ ಕಾರ್ಯಕ್ರಮ ಮಂಗಳೂರು ದಸರಾ ಮತ್ತು ಉಡುಪಿ ಉಚ್ಚಿಲ ದಸರಾ. ಈ ಎರಡು ದಸರಾಗಳು ಇತ್ತೀಚೆಗೆ ವಿಶಿಷ್ಟವಾದ ದಸರಾ ಕವಿಗೋಷ್ಠಿಯನ್ನು ಮಾಡುತ್ತಿದ್ದು ಉಡುಪಿ ಉಚ್ಚಿಲ ದಸರಾ ಕಾರ್ಯಕ್ರಮದ ಈ ವರ್ಷದ ದಸರಾ ಕವಿಗೋಷ್ಠಿಯು ಉಚ್ಚಿಲ ಪ್ರಸಿದ್ಧ ಮೊಗವೀರ ಸಭಾಭವನದ ಶಾಲಿನಿ ನಾಡೋಜ ಜಿ ಶಂಕರ್ ವೇದಿಕೆಯಲ್ಲಿ ಅರ್ಥಪೂರ್ಣವಾಗಿ ನಡೆಯಿತು.
ಉಡುಪಿ ಉಚ್ಚಿಲ ದಸರಾ ಸಮಿತಿ ಉಚ್ಚಿಲ, ಮೊಗವೀರ ವ್ಯವಸ್ಥಾಪನ ಮಂಡಳಿ ಮುಂಬೈ, ದಕ್ಷಿಣ ಕನ್ನಡ ಮೊಗವೀರ ಸಮಾಜ ಸಂಘ ಉಚ್ಚಿಲ ಇವುಗಳ ಸಂಯುಕ್ತ ಆಶ್ರಯದಲ್ಲಿ ಮೊಗವೀರ ಕನ್ನಡ ಮಾಸಿಕದ 87ನೇ ಸಂವತ್ಸರದ ಅಂಗವಾಗಿ ನಡೆದ ನಡೆದ ಈ ಕವಿಗೋಷ್ಠಿಯನ್ನು ದಕ್ಷಿಣ ಕನ್ನಡ ಮೊಗವೀರ ಸಮಾಜ ಸಂಘ ಉಚ್ಚಿಲ ದ ಅಧ್ಯಕ್ಷರಾದ ಜಯ.ಸಿ ಕೋಟ್ಯಾನ್ ರವರು ಉದ್ಘಾಟಿಸಿದರು.
ಹಿರಿಯ ಪತ್ರಕರ್ತರು ರಂಗ ನಿರ್ದೇಶಕರು ಹಾಗೂ ಹಾಗೂ ಸಾಹಿತಿಗಳು ಆದ ಯಶವಂತ ಬೋಳೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕವಿಗೋಷ್ಠಿಯಲ್ಲಿ ರವಿ ಕೊಟ್ಟಾರಗಸ್ತಿ ಬೆಳಗಾವಿ, ಗುರುಪ್ರಸಾದ್ ಪಡುಬಿದ್ರಿ, ದೀಪಕ್ ಎನ್ ದುರ್ಗಾ ಕಾರ್ಕಳ, ಚಂದ್ರಹಾಸ ಕಣಂತೂರು ಉಳ್ಳಾಲ, ಪ್ರಸಾದ್ ಕುಮಾರ್ ಮೊಗೆಬೆಟ್ಟು, ವಸಂತಿ ಅಂಬಲಪಾಡಿ, ವಿಂದ್ಯಾ ಎಸ್ ರೈ ಬಂಟ್ವಾಳ, ಸತೀಶ್ ಅಮೀನ್ ಪಡುಕೆರೆ, ಐಕಳ ಕೃಷ್ಣಾನಂದ ಶೆಟ್ಟಿ ಕಿನ್ನಿಗೋಳಿ, ಪ್ರೇಮ ಆರ್ ಶೆಟ್ಟಿ ಮುಲ್ಕಿ, ಶುಭಲಕ್ಷ್ಮಿ ನಾಯಕ್ ಪಲಿಮಾರು, ಶಂಕರ್ ಷಡಂಗೆ ಮುಲ್ಕಿ, ಅಶೋಕ್ ತೆಕ್ಕಟ್ಟೆ, ಮುಂತಾದ ಸಾಹಿತಿಗಳು ಕನ್ನಡ ತುಳು ಕವನವನ್ನು ವಾಚಿಸಿದರು. ರಮೇಶ್ ಉಳಯ ಇವರು ಪುತ್ತೂರಿನ ಪ್ರತಿನಿಧಿಯಾಗಿ ಮಾರ್ನಮಿದ ಗಗ್ಗರ ತುಳು ಕವನವನ್ನು ವಾಚಿಸಿದರು.
ಮೊಗವೀರ ಪತ್ರಿಕೆಯ ಹಿರಿಯ ಸಂಪಾದಕರಾದ ಅಶೋಕ್ ಸುವರ್ಣ ಸ್ವಾಗತಿಸಿದರು. ಹಾಗೂ ಹಿರಿಯ ಸಂಶೋಧಕ ಡಾ ವಿಕೆ ಯಾದವ್ ಕವಿಗೋಷ್ಠಿಯನ್ನು ನಿರ್ವಹಿಸಿದರು.















