







ಪುತ್ತೂರು: ಕಳೆದ 12 ವರ್ಷಗಳಿಂದ ಪುತ್ತೂರಿನ ಮುರ ಜಂಕ್ಷನ್ ಸಮೀಪ ಕಾರ್ಯನಿರ್ವಹಿಸುತ್ತಿದ್ದ ಹರೀಶ್ ಕೆ.ಎಸ್ ಮಾಲೀಕತ್ವದ ಶ್ರೀ ವಿನಾಯಕ ಇಂಡಸ್ಟ್ರೀಸ್ ಸಂಸ್ಥೆಯು ಮುರ ಗೌಡ ಸಮುದಾಯ ಭವನ ಬಳಿಯ ತನ್ನ ಸ್ವಂತ ಕಟ್ಟಡ ‘ಶ್ರೀ ವಿನಾಯಕ ಸದನ’ಕ್ಕೆ ಅ.20 ರ ಬೆಳಗ್ಗೆ ಸ್ಥಳಾಂತರಗೊಂಡು ಶುಭಾರಂಭಗೊಳ್ಳಲಿದೆ.


ವೆಲ್ಡಿಂಗ್ ವರ್ಕ್ಸ್, ಗೇಟ್ ವರ್ಕ್ಸ್, ಗ್ರಿಲ್ ವರ್ಕ್ಸ್, ರೋಲಿಂಗ್ ಶಟರ್ ಹಾಗೂ ರೈಲಿಂಗ್ ಸೇರಿದಂತೆ ವಿವಿಧ ರೀತಿಯ ಸೇವೆಗಳನ್ನು ಒದಗಿಸುತ್ತಿರುವ ಈ ಸಂಸ್ಥೆಯು ನೂತನ ಕಟ್ಟಡದಲ್ಲಿ ಕಾರ್ಯಾರಂಭ ಮಾಡಲಿದೆ.



ನೂತನ ಕಟ್ಟಡದಲ್ಲಿ ಸಂಸ್ಥೆಯ ಶುಭಾರಂಭದ ಅಂಗವಾಗಿ ಆಯುಧಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಂಸ್ಥೆಯ ಮಾಲೀಕ ಹರೀಶ್ ತಿಳಿಸಿದ್ದಾರೆ.
ಕಳೆದ 12 ವರ್ಷಗಳಿಂದ ಸಂಸ್ಥೆಗೆ ಸಹಕಾರ ನೀಡುತ್ತಾ ಬಂದಿರುವ ಗ್ರಾಹಕ ಬಂಧುಗಳು ಮುಂದೆಯೂ ಇದೇ ರೀತಿಯ ಪ್ರೀತಿ, ವಿಶ್ವಾಸ ಹಾಗೂ ಸಹಕಾರವನ್ನು ನೀಡುವಂತೆ ಅವರು ವಿನಂತಿಸಿದ್ದಾರೆ.










