ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ನವರಾತ್ರಿ ಉತ್ಸವ ಸಂಪನ್ನ

0

ಬೊಳುವಾರಿನಿಂದ ಶ್ರೀ ದೇವಿಯ ವೈಭವದ ಮೆರವಣಿಗೆ


ಪುತ್ತೂರು:
ಪುತ್ತೂರಿನ ಬೊಳುವಾರಿನಲ್ಲಿರುವ ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ 87ನೇ ವರ್ಷದ ನವರಾತ್ರಿ ಉತ್ಸವ ಉತ್ಸವವು ಅ.19ರಂದು ಶ್ರೀ ದೇವಿಯ ವೈಭವದ ಮೆರವಣಿಗೆಯೊಂದಿಗೆ ಸಂಪನ್ನಗೊಂಡಿತು.

ಸಂಜೆ ಸುಬ್ರಹ್ಮಣ್ಯ ನಗರದಲ್ಲಿ ಹುಲಿ ವೇಷ ಕುಣಿತ ಮತ್ತು ತಾಲೀಮು ಪ್ರದರ್ಶನ ನಡೆಯಿತು.



ರಾತ್ರಿ ಸಂಪ್ರದಾಯದಂತೆ ಉರ್ಲಾಂಡಿ ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಮತ್ತು ಶ್ರೀ ಸರಸ್ವತೀ ಭಜನಾ ಮಂಡಳಿಯವರ ನೆರವಿನೊಂದಿಗೆ ಆಂಜನೇಯ ಮಂತ್ರಾಲಯಕ್ಕೆ ಭಜನೆಯ ಮೂಲಕ ಉಲ್ಪೆಯನ್ನು ತಂದ ಬಳಿಕ ರಾತ್ರಿ ಮಂತ್ರಾಲಯದಿಂದ ವೈಭವದ ಶ್ರೀ ದೇವಿಯ ಮೆರವಣಿಗೆ ನಡೆಯಿತು. ಮೆರವಣಿಗೆಯು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ವೆಂಕಟ್ರಮಣ ದೇವಸ್ಥಾನ, ಮಾರ್ಕೆಟ್ ರಸ್ತೆಯಾಗಿ ಪುನಃ ಮಂತ್ರಾಲಯಕ್ಕೆ ಬಂದು ಶ್ರೀ ಮಹಾಶಕ್ತಿ ಪೂಜೆಯೊಂದಿಗೆ ನವರಾತ್ರಿ ಉತ್ಸವ ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here