ಪುತ್ತೂರು ತಾಲ್ಲೂಕು ಮೊಗೇರ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ

0

ಪುತ್ತೂರು: ಪುತ್ತೂರು ತಾಲ್ಲೂಕು ಮೊಗೇರ ಸಂಘದ ವತಿಯಿಂದ 2026ನೇ ಸಾಲಿನಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಸನ್ಮಾನ ವಿದ್ಯಾರ್ಥಿ ಪುರಸ್ಕಾರ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಪುತ್ತೂರಿನ ಪುರಭವನದಲ್ಲಿ ಅ.18ರಂದು ನಡೆಯಿತು.

ಸಮಾರಂಭದ ಉದ್ಘಾಟನೆಯನ್ನು ಹಂಪಿ ವಿಶ್ವವಿದ್ಯಾನಿಲಯ ದ ಕನ್ನಡ ವಿಭಾಗ ದ ಪ್ರಾದ್ಯಪಕರಾದ ಡಾ, ಮಾಧವ ಪೆರಾಜೆ ನೆರವೇರಿಸಿ ಮಾತನಾಡಿ,ಕಾರ್ಯಕ್ರಮ ಕ್ಕೆ ಶುಭ ಹಾರೈಸಿದರು.
ಮುಖ್ಯ ಅತಿಥಿ ಗಳಾಗಿ ಭಾಗವಹಿಸಿ ದ ಪುತ್ತೂರಿನ ಮಾಜಿ ಶಾಸಕರಾದ ಶ್ರೀ ಸಂಜೀವ ಮಠoದೂರು ಮಾತನಾಡಿ ಸಂವಿಧಾನ ಶಿಲ್ಪಿ ಡಾ, ಬಿ, ಆರ್ ಅಂಬೇಡ್ಕರ್ ರವರು ರಚಿಸಿದ ಸಂವಿಧಾನ ಯಾವುದೇ ಒಂದು ಸಮುದಾಯದ ಏಳಿಗೆಯನ್ನು ಗುರಿಯಾಗಿಸಿ ರಚಿಸಿಲ್ಲ ಅವರು ಭಾರತದ ಪ್ರತಿಯೊರ್ವ ನಾಗರಿಕ ನ ಏಳಿಗೆಯನ್ನು ಬಯಸಿದ್ದರು. ವಿಶ್ವ ದಲ್ಲೇ ಶ್ರೇಷ್ಠ ಸಂವಿಧಾನ ಇದ್ದರೆ ಅದು ಭಾರತ ದಲ್ಲಿ ಮಾತ್ರ. ಮೊಗೇರ ಜನಾಂಗ ಸಂವಿಧಾನ ದಡಿಯಲ್ಲಿ ಏಳಿಗೆಯಾಗಿ ಇಂದು ಸಮಾಜದಲ್ಲಿ ಸಂಘಟನೆಗೊಂಡು ಇತರ ಸಮುದಾಯಗಳಿಗೂ ಮಾದರಿ ಯಾಗುತ್ತಿದೆ ಎಂದರು.

ಸಮಾರಂಭ ದಲ್ಲಿ ಸಂಪನ್ಮೂಲ ವ್ಯಕ್ತಿ ಯಾಗಿದ್ದ ಪುತ್ತೂರಿನ ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗೇಶ್ ರೈ ಮಾತನಾಡಿ ಇಂದಿನ ತಂತ್ರಜ್ಞಾನ ಯುಗದಲ್ಲಿ ಉದ್ಯೋಗಕ್ಕೆ ಪೂರಕ ವಾದ ಶಿಕ್ಷಣ ಪಡೆದುಕೊಂಡು ಉದ್ಯೋಗ ಗಿಟ್ಟಿಸಿಕೊಳ್ಳುವತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಂಪ್ಯೂಟರ್ ಗಳು ಕೆಲಸ ಕ್ಕೆ ಬಂದಾಗ ಜನರಿಗೆ ಕೆಲಸ ಕ್ಕೆ ತೊಂದರೆಯಾಗಬಹುದು ಎಂಬ ವದಂತಿಗಳು ಹಬ್ಬಿತ್ತು. ಈಗ ಎ. ಐ. ತಂತ್ರ ಜ್ಞಾನ ಗಳು ಕಾರ್ಯ ನಿರ್ವಹಣೆ ಮಾಡಲು ಶುರು ಮಾಡಿರುವುದರಿಂದ ಈಗ ಅದೇ ವದಂತಿಗಳು ಹಬ್ಬುತಿದೆ ಇದರಿಂದ ವಿಚಲಿತ ರಾಗದಂತೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಪುತ್ತೂರು ತಾಲ್ಲೂಕು ಮೊಗೇರ ಸಂಘದ ಅಧ್ಯಕ್ಷ ರಾದ ಶ್ರೀ ಸುಂದರ ಕೇಪುಳ್ ಅಧ್ಯಕ್ಷತೆ ವಹಿಸಿದ್ದರು.ವೇದಿಕೆ ಯಲ್ಲಿ ಅತಿಥಿಗಳಾಗಿ ಕರ್ನಾಟಕ ರಾಜ್ಯ ಮೊಗೇರ ಸಂಘದ ಅಧ್ಯಕ್ಷ ಶ್ರೀ ನಂದರಾಜ್ ಸಂಕೇಶ್, ಮೊಗೇರ ಯುವ ವೇದಿಕೆ ಯ ಅಧ್ಯಕ್ಷ ಶ್ರೀ ಶರತ್ ಕೆ. ವಿ. ಮಹಿಳಾ ಸಂಘದ ಅಧ್ಯಕ್ಷೆ ಶ್ರೀಮತಿ ಲಲಿತ ನೆಕ್ಕರೆ ಸುಳ್ಯ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಶ್ರೀ ಪರಮೇಶ್ವರ್, ಮೆಸ್ಕಾಂ ನ ಕಿರಿಯ ಇಂಜಿನಿಯರ್ ಶ್ರೀ ಜೆ. ಪುತ್ತು, ಮಂಗಳೂರು ಫಾಧರ್ ಮುಲ್ಲರ್ ಮೆಡಿಕಲ್ ಕಾಲೇಜಿನ ದೈಹಿಕ ಶಿಕ್ಷಕ ಶ್ರೀ ಚಂದ್ರಶೇಖರ, ಗ್ರಾಫಿಕ್ ಡಿಸೈನರ್ ಶ್ರೀ ವಿವೇಕ್. ಕೆ. ಎಂ, ನ್ಯಾಯವಾದಿ ಸುಶಾಂತ್ ಭಕ್ತ ಕೋಡಿ, ಕುಮಾರಿ ಕೌಶಲ್ಯ ಕೆಯ್ಯುರು, ಪ್ರಗತಿ ಪರ ಕೃಷಿಕರಾದ ಶ್ರೀಮತಿ ಸುಂದರಿ ನಿಡ್ಯ ಕುಕ್ಕೆ ಸುಬ್ರಮಣ್ಯ ದೇವಸ್ಥಾನ ದ ವ್ಯವಸ್ಥಾಪನ ಸಮಿತಿ ಸದಸ್ಯ ರಾದ ಡಾ. ರಘು ಬೆಳ್ಳಿಪ್ಪಾಡಿ, ಉಳ್ಳಾಲ ತಾಲ್ಲೂಕು ಪಂಚಾಯತ್ ನಿರ್ದೇಶಕ, ಶ್ರೀ ವೆಂಕಟೇಶ್ ಪುಚ್ಚೆ ಗುತ್ತು, ಶ್ರೀ ಸೀತಾರಾಮ ಕೊಂಚಾಡಿ ದಕ್ಷಿಣ ಕನ್ನಡ ಜಿಲ್ಲಾ ಮೊಗೇರ ಸಂಘದ ಉಪಾಧ್ಯಕ್ಷೆ ರೋಹಿಣಿ ಚಿತ್ತಾರಂಜನ್ ದಾಸ್ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಸಾಧಕರಿಗೆ ಸನ್ಮಾನ
ಬಹುಮುಖ ಸಾಧನೆ ಗಾಗಿ. ಡಾ. ರಘು ಬೆಳ್ಳಿಪ್ಪಾಡಿ. ಶಿಕ್ಷಣ ಕ್ಷೇತ್ರದ ಸಾಧನೆ ಗಾಗಿ ಡಾ. ವಾಣಿಶ್ರೀ. ಎಂ. ಎ. ಪಿ ಹೆಚ್. ಡಿ. , ಡಾ. ನಿಶ್ಮಿತಾ. ಬಿ. ಡಿ. ಎಸ್. ಎಂ. ಡಿ, ಎಸ್, ಚೈತ್ರಾ, ಬಿ. ಡಿ. ಎಸ್, ಎಂ, ಡಿ, ಎಸ್,ಜಾನಪದ ಕ್ಷೇತ್ರದ ಸಾಧನೆ ಗಾಗಿ ಐತೆ ಬಲೆರಾವು,ಧಾರ್ಮಿಕ ಕ್ಷೇತ್ರದ ಸಾಧನೆಗಾಗಿ ಮಾಧವ ಕಜೆ ಕೋಡಿoಬಾಡಿ, ಸಾಮಾಜಿಕ ಕ್ಷೇತ್ರ ದಲ್ಲಿ ವಿಜಯ ಲಕ್ಷ್ಮಿ ಕೂರ್ನಡ್ಕ,ಕಲಾ ಕ್ಷೇತದಲ್ಲಿ ಸುಂದರ ಗೋಳಿಪದವು, ಕ್ರೀಡಾ ಕ್ಷೇತ್ರದಲ್ಲಿ ಮಣಿ ಬಪ್ಪಳಿಗೆ,ನಾಟಿವೈದ್ಯ ಕ್ಷೇತ್ರದಲ್ಲಿ ಕಮಲ ಪಟ್ಟೆ, ಕೃಷಿ ಕ್ಷೇತ್ರದಲ್ಲಿ ಪೂವಪ್ಪ ಬೀರಿಗ, ಉದ್ಯಮ ಕ್ಷೇತ್ರದಲ್ಲಿ ಸೀತಾರಾಮ ಕುಂಬ್ರುಗ,ಸಾಹಿತ್ಯ ಕ್ಷೇತ್ರದಲ್ಲಿ
ನಾರಾಯಣ ಕುಂಬ್ರ,ಇವರುಗಳು ಮಾಡಿದ ಸಾಧನೆ ಯನ್ನು ಗುರುತಿಸಿ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ಅದೇ ರೀತಿ 2026ನೇ ಸಾಲಿನಲ್ಲಿ ಹತ್ತನೇ ತರಗತಿ, ಪಿ. ಯು, ಸಿ, ಪದವಿ, ಡಿಪ್ಲೋಮ, ಶಿಕ್ಷಣ ದಲ್ಲಿ ಪಾಸಾದ ಮತ್ತು ವಿಶೇಷ ಸಾಧನೆ ಗೈದ ನೂರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.


ಎನ್ ಸಿ ಸಿ ಯಲ್ಲಿ ಕರ್ನಾಟಕವನ್ನು ದೆಹಲಿಯಲ್ಲಿ ಪ್ರತಿನಿಧಿಸಿ ಸಾಧನೆ ಗೈದ ವಿದ್ಯಾರ್ಥಿ ನಿ ಕುಮಾರಿ. ಅಕ್ಷತಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿನಿ ಕುಮಾರಿ ಶಿಲ್ಪಾ ರವನ್ನು ಗೌರವಿಸಲಾಯಿತು.

ಕಾರ್ಯಕ್ರಮ ದಲ್ಲಿ ದಲಿತ ಸಂಘಟನೆ ಯ ಮುಖಂಡರುಗಳಾದ ಸೇಸಪ್ಪ ನೆಕ್ಕಿಲ್, ರಾಜು ಹೊಸ್ಮಠ ಮೊಗೇರ ಸಂಘದ ಗೌರವಧ್ಯಕ್ಷ ಸದಾನಂದ ತೆಂಕಿಲ, ಸಂಘಟನೆ ಯ ಪದಾಧಿಕಾರಿಗಳಾದ ಲೋಕೇಶ್ ಎಂ.ಎಚ್ ಹಿರೇಬಂಡಾಡಿ, ಚಂದ್ರ ಬೀರಿಗ, ಸುಂದರ ಸಾರ್ಯ, ಐತಪ್ಪ ಆನಡ್ಕ, ದಿನೇಶ್ ಕಜೆ, ಸುಂದರ ಮಾಸ್ಟರ್ ಕಜೆ, ರಾಘವ ಖಂಡಿಗ, ಲೋಹಿತ್ ತೆಂಕಿಲ, ನವೀನ್ ಬೆಳ್ಳಿಪ್ಪಾಡಿ, ಧನಂಜಯ ಭಕ್ತ ಕೋಡಿ,ಚೋಮ ಭಕ್ತ ಕೋಡಿ, ಧನಂಜಯ ಕಬಕ, ಸುಂದರಿ ಸಾರ್ಯ, ಉಷಾ ಮುಖೇಶ್, ಶ್ರೀಮತಿ ಶ್ವೇತಾ ನಾಗೇಶ್, ಕುಸುಮ ಕುಕ್ಕಾಡಿ, ಪೂರ್ಣಿಮಾ ಖಂಡಿಗ, ಪೂರ್ಣಿಮಾ ಬೆದ್ರಾಳ, ಆಶಾಕಿರಣ,ಮಮತ ಜಿ ಬನ್ನೂರು, ಮೀನಾಕ್ಷಿ ಕುಕ್ಕಾಡಿ, ಪುಷ್ಪ ಮುಕ್ವೆ,ಕು, ಸುನಿತಾ.ರಕ್ಷಿತ್ ಗೋಳಿಪದವು, ಶೈಲಜಾ ಕೇಪುಳ್, ಮಾಯಿಲಪ್ಪ ಕೇಪುಳ್ ಗೋಪಾಲ ಬೀರಿಗ ಸೇರಿದಂತೆ ಹಲವು ಮುಖಂಡರು ಮತ್ತು ವಿದ್ಯಾರ್ಥಿ ಗಳ ಪೋಷಕರು ಉಪಸ್ಥಿತರಿದ್ದರು.

ಸುಂದರ ಗೋಳಿಪದವು ಪ್ರಾರ್ಥಿಸಿದರು, ಮುಖೇಶ್ ಕೇಮ್ಮಿಂಜೆ ಸ್ವಾಗತಿಸಿ ಪ್ರಾಸ್ತವಿಕ ಬಾಷಣ ಮಾಡಿದರು. ವಿಜಯ ಲಕ್ಷ್ಮಿ ಸಂವಿಧಾನದ ಪೀಠಿಕೆ ಯನ್ನು ಸಭೆಯಲ್ಲಿ ಬೋಧಿಸಿದರು.ಸವಿತ ಮುಂಡಾಜೆ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು. ಕಾರ್ಯಕ್ರಮಕ್ಕೆ ಮಿತ ದರದಲ್ಲಿ ಉಪಹಾರ ಮತ್ತು ಭೋಜನವನ್ನು ಕೆಮ್ಮಾಯಿ ಅಶ್ವಥ ಕ್ಯಾಂಟೀನ್ ಮಾಲಕ ಉಮೇಶ್ ಗೌಡ ಒದಗಿಸಿದ್ದರು.

LEAVE A REPLY

Please enter your comment!
Please enter your name here