ಬನ್ನೂರಿನಲ್ಲಿ ಶಾಂಭವಿ ವಿಲಾಸ’ ಯಕ್ಷಗಾನ ತಾಳಮದ್ದಲೆ

0

ಪುತ್ತೂರು: ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ, ಬೊಳುವಾರು ಪುತ್ತೂರು ಇದರ ವತಿಯಿಂದ ಬನ್ನೂರಿನ ಶ್ರೀ ಬಲಮುರಿ ವಿದ್ಯಾ ಗಣಪತಿ ದೇವಸ್ಥಾನದಲ್ಲಿ ಅ. 20ರಂದು ತಿಂಗಳ ಸರಣಿ ತಾಳಮದ್ದಲೆ ಕಾರ್ಯಕ್ರಮ ನಡೆಯಿತು. ಅಗರಿ ಶ್ರೀನಿವಾಸ ಭಾಗವತ ವಿರಚಿತ ಶಾಂಭವಿ ವಿಲಾಸ’ ಆಖ್ಯಾನವು ಯಕ್ಷಗಾನಾಸಕ್ತರ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಹಿಮ್ಮೇಳದ ಭಾಗವತರಾಗಿ ಲಕ್ಷ್ಮೀನಾರಾಯಣ ಭಟ್ ಬಟ್ಯಮೂಲೆ ಹಾಗೂ ಶಿವಪ್ರಸಾದ್ ನಾಕೂರು ಸಹಕರಿಸಿದರು. ಚೆಂಡೆ-ಮದ್ದಲೆಗಳಲ್ಲಿ ಪಿ.ಟಿ. ಜಯರಾಮ ಭಟ್ ಮತ್ತು ಅನೀಶ್ ಕೃಷ್ಣ ಪುಣಚ ಸಾಥ್ ನೀಡಿದರು. ಮುಮ್ಮೇಳದಲ್ಲಿ ಶ್ರೀದೇವಿಯಾಗಿ ಮನೋರಮಾ ಜಿ. ಭಟ್ ಮತ್ತು ಹರಿಣಾಕ್ಷಿ ಜೆ. ಶೆಟ್ಟಿ, ದೇವೇಂದ್ರನಾಗಿ ದುಗ್ಗಪ್ಪ ನಡುಗಲ್ಲು, ಶುಂಭನಾಗಿ ಗುಡ್ಡಪ್ಪ ಬಲ್ಯ ಮತ್ತು ವೇಣುಗೋಪಾಲ ಭಟ್ ಮಾಂಬಾಡಿ, ರಕ್ತಬೀಜನಾಗಿ ಭಾಸ್ಕರ ಬಾರ್ಯ ಮತ್ತು ಕಿಶೋರಿ ದುಗ್ಗಪ್ಪ ನಡುಗಲ್ಲು ಹಾಗೂ ಸುಗ್ರೀವನಾಗಿ ಬಡೆಕ್ಕಿಲ ಚಂದ್ರಶೇಖರ ಭಟ್ ಪಾತ್ರ ನಿರ್ವಹಿಸಿದರು. ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ಬಡೆಕ್ಕಿಲ ಚಂದ್ರಶೇಖರ ಭಟ್ ಕಾರ್ಯಕ್ರಮವನ್ನು ಪ್ರಾಯೋಜಿಸಿದರು.

LEAVE A REPLY

Please enter your comment!
Please enter your name here