







ನೂತನ ಭೋಜನಾಲಯ ಉದ್ಘಾಟನೆ, 35ನೇ ವಾರ್ಷಿಕ ಪ್ರತಿಷ್ಠಾ ಮಂಗಳೋತ್ಸವ : ಆಮಂತ್ರಣ ಪತ್ರಿಕೆ ಬಿಡುಗಡೆ


ಪುತ್ತೂರು: ಭಗವಾನ್ ಶ್ರೀರಾಮಚಂದ್ರ ದೇವರು ಸಪರಿವಾರ ಸಹಿತ ಭಕ್ತರಿಗೆ ದರ್ಶನ ನೀಡುತ್ತಿರುವ ಅತ್ಯಂತ ಕಾರಣಿಕತೆಯ, ಭಕ್ತರ ಇಷ್ಠಾರ್ಥ ಸಿದ್ಧಿದಾಯಕ ಕ್ಷೇತ್ರ ಕೆದಂಬಾಡಿ ಗ್ರಾಮದ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ ಶ್ರೀರಾಮ ಮಂದಿರದಲ್ಲಿ ಶ್ರೀರಾಮ ಭಜನಾ ಮಂಡಳಿಯ 75ನೇ ವರ್ಷದ ವಜ್ರ ಮಹೋತ್ಸವದ ಅಂಗವಾಗಿ ನ.02 ರಿಂದ ದ.19ರವರೆಗೆ ನಡೆಯುವ 48 ದಿನಗಳ(1 ಮಂಡಲ) ಸಂಧ್ಯಾ ಭಜನ ಸಂಕೀರ್ತನೆ ಮತ್ತು ಅನ್ನದಾನ ಸೇವೆ, ದ.20ರಂದು ನಡೆಯುವ ಸದ್ಗುರು ಡಾ| ಎಸ್.ಆರ್.ಗೋಪಾಲನ್ ನಾಯರ್ರವರ 125ನೇ ವರ್ಷದ ಪಾದಾಧಿಕ ಶತಮಾನ ಜಯಂತಿ', ಕೆದಂಬಾಡಿ ಬೀಡು ಅಬ್ಬಯ್ಯ ಬಲ್ಲಾಳ್ರವರ ಸಂಸ್ಮರಣೆ’, ನೂತನ ಭೋಜನಾಲಯ ಉದ್ಘಾಟನೆ ಹಾಗೂ ದ.20 ರಿಂದ 26 ರವರೆಗೆ ನಡೆಯುವ 35ನೇ ವಾರ್ಷಿಕ ಪ್ರತಿಷ್ಠಾ ಮಂಗಳೋತ್ಸವ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯನ್ನು ಅ.19ರಂದು ನಡೆದ ನವರಾತ್ರಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು.



ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರ ಶುಭ ಆಶೀರ್ವಾದ ಹಾಗೇ ಪರಮಪೂಜ್ಯ ಶ್ರೀ ಮೋಹನದಾಸ ಸ್ವಾಮೀಜಿ ಶ್ರೀಧಾಮ ಮಾಣಿಲ ಇವರ ಮಾರ್ಗದರ್ಶನದಲ್ಲಿ ಈ ಎಲ್ಲ ಕಾರ್ಯಕ್ರಮಗಳು ನಡೆಯಲಿದೆ. ನ೦೨ ರಿಂದ ೧೯ ರವರೆಗೆ ರಾತ್ರಿ ೭.೩೦ ರಿಂದ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಹಾಗೂ ೪೮ ಭಜನಾ ಸೇವಾರ್ಥಿಗಳಿಂದ ಭಜನಾ ಸೇವೆ ನಡೆಯಲಿದೆ. ದ.೨೦ ರಂದು ಸಮಾರೋಪ ಸಮಾರಂಭ ನಡೆಯಲಿದ್ದು ಈ ಸಂದರ್ಭದಲ್ಲಿ ಸದ್ಗುರು ಡಾ|ಎಸ್.ಆರ್.ಗೋಪಾಲನ್ ನಾಯರ್ರವರ 125ನೇ ಜನ್ಮ ದಿನಾಚರಣೆ, ಶ್ರೀರಾಮ ಭಜನಾ ಮಂಡಳಿಯ ಸ್ಥಾಪಕರಾದ ಕೆದಂಬಾಡಿ ಬೀಡು ಅಬ್ಬಯ್ಯ ಬಲ್ಲಾಳ್ರವರ ಸಂಸ್ಮರಣೆ ಹಾಗೇ ರೂ.೪೦ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಸುಸಜ್ಜಿತ ಭೋಜನಾಲಯದ ಉದ್ಘಾಟನೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸ್ವಾಮೀಜಿಗಳ ಸಹಿತ ಸಮಾಜದ ವಿವಿಧ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮವು ವಿಶೇಷವಾಗಿ ಕುಣಿತ ಭಜನೆಯೊಂದಿಗೆ ನಡೆಯಲಿದೆ. ಇದಲ್ಲದೆ ದ.೨೦ ರಿಂದ ೨೬ ರವರೇಗೆ ಶ್ರೀರಾಮ ಮಂದಿರದ ೩೫ ನೇ ವಾರ್ಷಿಕ ಪ್ರತಿಷ್ಠಾ ಮಂಗಳೋತ್ಸವ ಜರಗಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶ್ರೀರಾಮ ಮಂದಿರದ ಆಡಳಿತ ಸಮಿತಿ, ಭಜನಾ ಸಮಿತಿ ಅಧ್ಯಕ್ಷರುಗಳು, ಸಂಚಾಲಕರು, ಪದಾಧಿಕಾರಿಗಳು, ಸದಸ್ಯರುಗಳು ಹಾಗೂ ೧೨೯ ಮನೆಯ ಭಜನಾ ಸೇವಾರ್ಥಿಗಳ ಪ್ರಕಟಣೆ ತಿಳಿಸಿದೆ.
ಆಮಂತ್ರಣ ಪತ್ರಿಕೆ ಬಿಡುಗಡೆ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಹನುಮಗಿರಿಯ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ, ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸುರಕ್ಷಾ ಅಧಿಕಾರಿ ವಿದ್ಯಾ ಲಿಂಗಪ್ಪ, ಶ್ರೀರಾಮ ಮಂದಿರದ ಆಡಳಿತ ಮಂಡಳಿ ಅಧ್ಯಕ್ಷ ರಾಘವ ಗೌಡ ಕೆರೆಮೂಲೆ, ಪ್ರಧಾನ ಕಾರ್ಯದರ್ಶಿ ಅಗರಿ ಯಶೋಧರ ಚೌಟ ಪಟ್ಟೆತ್ತಡ್ಕ, ಕೋಶಾಧಿಕಾರಿ ಮುಂಡಾಳಗುತ್ತು ಮೋಹನ ಆಳ್ವ, ಭಜನಾ ಮಂಡಳಿ ಅಧ್ಯಕ್ಷ ವಿನೋದ್ ಪೂಜಾರಿ ಕೋಡಿಯಡ್ಕ, ಕಾರ್ಯದರ್ಶಿ ನಿತೇಶ್ ರೈ ಕೋರಂಗ, ಶ್ರೀರಾಮ ಮಂದಿರ ಆಡಳಿತ ಸಮಿತಿ ಉಪಾಧ್ಯಕ್ಷ ಲಿಖಿತ್ ಗೌಡ ಇದ್ಯಪೆ, ಕೊಡುಗೈ ದಾನಿ, ಭೋಜನಾಲಯಕ್ಕೆ ಪ್ರಥಮವಾಗಿ ಆರ್ಥಿಕ ಸಹಕಾರ ನೀಡಿದ ಉದ್ಯಮಿ ಮೋಹನದಾಸ ರೈ ಕುಂಬ್ರ, ಸಂಧ್ಯಾ ಭಜನಾ ಸಂಕೀರ್ತನಾ ಸಂಚಾಲಕರಾದ ಐ.ಸಿ ಕೈಲಾಸ್ ಗೌಡ ಇದ್ಯಪೆ, ಸಹ ಸಂಚಾಲಕ ಮುಂಡಾಳಗುತ್ತು ಸುರೇಶ್ ರೈ ಮಾಣಿಪ್ಪಾಡಿ, ಪಾದಧಿಕ ಶತಮಾನ ಜಯಂತಿ ಸಂಚಾಲಕ ಬೆದ್ರುಮಾರು ಜೈಶಂಕರ ರೈ, ಸಹಸಂಚಾಲಕ ಪಡ್ಡಂಬೈಲು ಜನಾರ್ದನ ರೈ ಕೊಡಂಕೀರಿ, ಮಂದಿರದ ಹಿರಿಯ ಪದಾಧಿಕಾರಿ ಕೋರಂಗ ರಾಜೀವ ರೈ ಉಪಸ್ಥಿತರಿದ್ದರು.
ಶ್ರೀರಾಮ ಮಂದಿರದ ಶ್ರೀರಾಮ ಭಜನಾ ಮಂಡಳಿಯ ೭೫ ವರ್ಷಗಳ ಸಂಭ್ರಮದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು ವಿಶೇಷವಾಗಿ ೪೮ ದಿನಗಳ ಭಜನಾ ಸಂಕೀರ್ತನೆ ಎಂದರೆ ೧ ಮಂಡಲ ಭಜನೆಗೆ ವಿಶೇಷ ಮಹತ್ವವಿದ್ದು ೨೭ ನಕ್ಷತ್ರ ೧೨ರಾಶಿ, ೯ ಗ್ರಹಗಳ ಎಲ್ಲಾ ಜನರಿಗೆ ಒಳಿತು ಆಗಲೆಂದು ಈ ವೃತಾಚರಣೆಯನ್ನು ಮಾಡುತ್ತಾರೆ. ಆ ಪ್ರಕಾರ ಕ್ಷೇತ್ರದಲ್ಲಿ ಈ ಒಂದು ಕಾರ್ಯವನ್ನು ಕೈಗೆತ್ತಿಕೊಂಡಿದ್ದು ಕ್ಷೇತ್ರದ ಆರಾಧ್ಯಮೂರ್ತಿ ಸಪರಿವಾರ ಶ್ರೀರಾಮ ದೇವರ ಚೈತನ್ಯ ವೃದ್ಧಿಯಾಗಲೆಂದು ಸರ್ವರಿಗೂ ದೇವರು ಒಳ್ಳೆಯದನ್ನು ಕರುಣಿಸಲಿ.ಕಾರ್ಯಕ್ರಮದಲ್ಲಿ ಸರ್ವರೂ ಸಹಕಾರ ನೀಡುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ವಿನಂತಿ.
ರಾಘವ ಗೌಡ ಕೆರೆಮೂಲೆ, ಅಧ್ಯಕ್ಷರು ಶ್ರೀರಾಮ ಮಂದಿರ ಕೆದಂಬಾಡಿ, ಶ್ರೀಕ್ಷೇತ್ರ ಸನ್ಯಾಸಿಗುಡ್ಡೆ










