







ಕಡಬ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅತ್ತೆಗೆ ಜೀವ ಬೆದರಿಕೆ ಹಾಕಿ, ಮನೆಯ ಕಿಟಕಿ ಗಾಜಿಗೆ ಕಲ್ಲು ಎಸೆದು ಹಾನಿಗೊಳಿಸಿ ಗಾಯಗೊಳಿಸಿದ ಆರೋಪದ ಮೇಲೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಡಬ ತಾಲೂಕಿನ ಕೊಯಿಲ ನಿವಾಸಿ ನೀಲಮ್ಮ ಅವರು ನೀಡಿದ ದೂರಿನ ಪ್ರಕಾರ, ಅವರ ಸೊಸೆ ಮಂಗಳಾ ಬಾಯಿ ಅ.12ರಂದು ಸಂಜೆ ಮನೆಗೆ ಬಂದು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಜೀವ ಬೆದರಿಕೆ ಹಾಕಿದ್ದಾರೆ. ಅ.14ರಂದು ರಾತ್ರಿ ಮಂಗಳಾ ಬಾಯಿ ಮತ್ತೆ ಬಂದು ಕಿಟಕಿ ಗಾಜಿಗೆ ಕಲ್ಲು ಎಸೆದು ಹಾನಿ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ. ಕಲ್ಲು ತಾಗಿ ನೀಲಮ್ಮ ಅವರಿಗೆ ಗಾಯವಾಗಿದ್ದು, ಕಡಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಕಿಟಕಿ ಗಾಜಿಗೆ ಸುಮಾರು ₹30,000 ನಷ್ಟವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.



ಈ ಕುರಿತು ಕಡಬ ಠಾಣೆಯಲ್ಲಿ ಅ.ಕ್ರ. 118/2026, BNS ಕಲಂ 352, 351(2), 118(1) ಮತ್ತು 324(4) ಅಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.










