ನೆಲ್ಲಿಕಟ್ಟೆ ಅಂಬಿಕಾ ಪ.ಪೂ.ವಿದ್ಯಾಲಯದಲ್ಲಿ ಅ.22ರಿಂದ 25ರವರೆಗೆ ಹಠಯೋಗ ಶಿಬಿರ

0

ಪುತ್ತೂರು: ಮಂಗಳೂರಿನ ಜಿಜ್ಞಾಸು ಯೋಗಕೇಂದ್ರದ ಯೋಗ ಶಿಕ್ಷಕ ಜಿಜ್ಞಾಸು ವಾಸುದೇವ ಅವರಿಂದ ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಅಕ್ಟೋಬರ್ 22ರಿಂದ 25ರವರೆಗೆ ಹಠಯೋಗ ಶಿಬಿರ ನಡೆಯಲಿದೆ.

ಹದಿನೆಂಟು ವರ್ಷ ಮೇಲ್ಪಟ್ಟ ಆಸಕ್ತರಿಗೆ ಈ ಯೋಗ ಶಿಬಿರದಲ್ಲಿ ಭಾಗವಹಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಯೋಗಾಭ್ಯಾಸವನ್ನು ಪ್ರಾರಂಭ ಮಾಡ ಬಯಸುವವರು ಅಥವಾ ಯೋಗಾಭ್ಯಾಸಿಗಳು ಇದರಲ್ಲಿ ಪಾಲ್ಗೊಳ್ಳಬಹುದು. ಹಠಯೋಗದ ಮೂಲತತ್ವಗಳಿಗೆ ಅನುಸಾರವಾದ ಪರಿಶುದ್ಧ ಹಾಗೂ ಅನುಭವಾತ್ಮಕ ಯೋಗ ಕಲಿಕೆ ಈ ಶಿಬಿರದಲ್ಲಿ ನಡೆಯಲಿದೆ. ಆರೋಗ್ಯ ಸಮಸ್ಯೆಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸಲು, ಮತ್ತು ಸಮಗ್ರ ದೈಹಿಕ-ಮಾನಸಿಕ ಸ್ವಾಸ್ಥ್ಯಕ್ಕೆ ಅಗತ್ಯವಾದ ಸಾಧನಗಳನ್ನು ಪಡೆಯುವಲ್ಲಿ ಈ ಶಿಬಿರ ಸಹಕಾರಿ ಎನಿಸಲಿದೆ. ಹೆಚ್ಚಿನ ಮಾಹಿತಿಗಾಗಿ 8792346935 ಈ ಮೊಬೈಲ್‌ ಸಂಖ್ಯೆಗೆ ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here