ಕಾಣಿಯೂರು ಪ್ರಗತಿ ವಿದ್ಯಾ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಸಂಘದ ಲೋಗೋ ಅನಾವರಣ 25 ಸರಣಿ ಕಾರ್ಯಕ್ರಮಕ್ಕೆ ಚಾಲನೆ

0

ಕಾಣಿಯೂರು: ಪ್ರಗತಿ ವಿದ್ಯಾ ಸಂಸ್ಥೆ ಕಾಣೆಯೂರಿನ ಎಸ್ ಎಸ್ ಎಲ್ ಸಿ ಬ್ಯಾಚ್ 25ನೇ ವರ್ಷ ಪೂರೈಸುತ್ತಿರುವ ಈ ಶೈಕ್ಷಣಿಕ ವರ್ಷದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ನಡೆಯಲಿರುವ 25 ವಿನೂತನ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಲೋಗೋ ಅನಾವರಣ ಕಾರ್ಯಕ್ರಮ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ದೀಕ್ಷಿತ್ ಬಂಡಾಜೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.ಕಾರ್ಯಕ್ರಮವನ್ನು ಪ್ರಗತಿ ಶಾಲಾ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ ಉದ್ಘಾಟಿಸಿದರು.ಶಾಲಾ ಹಿರಿಯ ಶಿಕ್ಷಕಿ ಹೇಮಾನಾಗೇಶ್ ರೈ ಮಾಳ ಇವರು ಲೋಗೋ ಅನಾವರಣ ಮಾಡಿದರು.

ಮೊದಲ ಕಾರ್ಯಕ್ರಮವಾಗಿ ಶಾಲಾ ಆವರಣದಲ್ಲಿ 25 ಗಿಡ ನೆಡುವ ಕಾರ್ಯಕ್ರಮವನ್ನು ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು ಸುಬ್ರಹ್ಮಣ್ಯ ಇಲ್ಲಿಯ ಪ್ರಾಂಶುಪಾಲರಾದ ಸೋಮಶೇಖರ ನಾಯಕ್ ಇವರು ನೆರವೇರಿಸಿದರು.


ಈ ಸಂದರ್ಭದಲ್ಲಿ ಶಾಲಾ ಆಡಳಿತ ಅಧಿಕಾರಿ ಆಗಿರುವ ವಸಂತ ರೈ ಕಾರ್ಕಳ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಹರೀಶ್ ಮುಂಡಾಳ ಸಂಸ್ಥೆಯ ಟ್ರಸ್ಟಿಗಳಾದ ದೇವಿಕಿರಣ್ ರೈ ಮಾದೋಡಿ, ಹರಿಚರಣ್ ರೈ ಮಾದೋಡಿ, ಹಿರಿಯ ವಿದ್ಯಾರ್ಥಿ ಸಂಘದ ಗೌರವ ಸಲಹೆಗಾರರಾದ ಗಿರಿಶಂಕರ ಸುಲಾಯ, ಕನ್ನಡ ಮಾಧ್ಯಮದ ಮುಖ್ಯಗುರು ವಿನಯ ವಿ ಶೆಟ್ಟಿ, ಸಹ ಮುಖ್ಯಸ್ಥೆ ಅನಿತಾ ಜೆ ರೈ, ಶಿಕ್ಷಕಿಯರಾದ ಸವಿತಾ ಕೆ, ಸುಷ್ಮಾ ಎಚ್ ರೈ, ಸವಿತಾ ಎಸ್, ಹಿರಿಯ ವಿದ್ಯಾರ್ಥಿಗಳಾದ ಗಿರೀಶ್ ಕುಂಬ್ಲಾಡಿ, ಭವತ್ ಅಗಳಿ, ಜೀತಾಕ್ಷ ಕುದ್ಮಾರು, ಅಕ್ಷಯ್ ಸುಬ್ರಹ್ಮಣ್ಯ, ಪ್ರೇಕ್ಷಕ್ ಚೌಕಿಮಠ, ದ್ವಿತಿ ಮಠತ್ತಾರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here