ಕಡಬ:ಹಲ್ಲೆ,ಜಾತಿ ನಿಂದನೆ ಪ್ರಕರಣ : ಆರೋಪಿಗಳಿಬ್ಬರು ಖುಲಾಸೆ

0

ಪುತ್ತೂರು:2019ರಲ್ಲಿ ಕಡಬದ ಕಳಾರ ಎಂಬಲ್ಲಿ ನಡೆದಿದ್ದ ಜಾತಿ ನಿಂದನೆ ಮತ್ತು ಹಲ್ಲೆ ಪ್ರಕರಣವೊಂದರಲ್ಲಿ ಆರೋಪಿಗಳಾಗಿ ವಿಚಾರಣೆ ಎದುರಿಸುತ್ತಿದ್ದ ಸಯ್ಯದ್ ಹುಸೇನ್ ಮತ್ತು ಮೊಹಮ್ಮದ್ ಇಕ್ಬಾಲ್ ಎಂಬವರನ್ನು ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ನಿರಪರಾಧಿಗಳೆಂದು ಬಿಡುಗಡೆಗೊಳಿಸಿದೆ.‌


ಘಟನೆ ವಿವರ:
2019ರ ಮಾ.21ರಂದು ಬೆಳಿಗ್ಗೆ ಸುಮಾರು 8.45 ಗಂಟೆಗೆ ಘಟನೆ ನಡೆದಿತ್ತು.ಈ ಕುರಿತು ಬೆತ್ರೋ ಎಂಬವರು ಪೊಲೀಸರಿಗೆ ದೂರು ನೀಡಿದ್ದರು. ‘ಶಾಮಿಯಾನದ ಸಾಮಗ್ರಿಗಳನ್ನು ಇಟ್ಟುಕೊಂಡಿದ್ದ ನನಗೆ ಹಾಗೂ ಆರೋಪಿಗಳಿಗೆ ವಿವಾದವಿರುವ ಕಟ್ಟಡಕ್ಕೆ ಹಾಕಲಾಗಿದ್ದ ಬೀಗವನ್ನು ಆರೋಪಿತರು ತೆಗೆಯುತ್ತಿರುವ ಸಮಯ ಅಲ್ಲಿ ಸಮೀಪದಲ್ಲಿ ಹುಲ್ಲು ಕಡಿಯುತ್ತಿದ್ದ ನಾನು ಆರೋಪಿತರಲ್ಲಿಗೆ ಹೋಗಿ, ಯಾಕೆ ಬೀಗ ತೆಗೆಯುತ್ತಿರುವುದೆಂದು ಕೇಳಿದಾಗ 2ನೇ ಆರೋಪಿಯು ಅಲ್ಲಿದ್ದ ರತ್ನಾವತಿ ಎಂಬವರ ಕೈ ಹಿಡಿದು ದೂಡಿ ಹಾಕಿ, ಕುತ್ತಿಗೆಯಲ್ಲಿ ಹಿಡಿದು ದೂಡಿ ಹಾಕಿದ್ದಲ್ಲದೇ,ನನ್ನನ್ನು ಉದ್ದೇಶಿಸಿ ಜಾತಿ ನಿಂದನೆ ಮಾಡಿ ಬೈದು ಜೀವ ಬೆದರಿಕೆ ಒಡ್ಡಿ ದೌರ್ಜನ್ಯವೆಸಗಿರುತ್ತಾರೆ’ ಎಂದು ಬೆತ್ರೋ ಅವರು ಆರೋಪಿಗಳ ವಿರುದ್ಧ ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಆರೋಪಿಗಳ ಮೇಲೆ ಭಾರತೀಯ ದಂಡಸಂಹಿತೆ ಕಲಂ 323, 504, 506 ಜೊತೆಗೆ 34 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.ನಂತರ ಪೊಲೀಸರು ತನಿಖೆ ನಡೆಸಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ನ್ಯಾಯಾಲಯ ಸುಮಾರು 14 ಸಾಕ್ಷಿಗಳ ಪೈಕಿ 9 ಸಾಕ್ಷಿಗಳನ್ನು ತನಿಖೆ ನಡೆಸಿತು.ವಾದ-ಪ್ರತಿವಾದಗಳನ್ನು ಆಲಿಸಿದ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ್ ಅವರು ಆರೋಪಿಗಳನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ.ಆರೋಪಿಗಳ ಪರ ವಕೀಲ ಮಹೇಶ್ ಕಜೆ ಅವರು ವಾದಿಸಿದ್ದರು.

LEAVE A REPLY

Please enter your comment!
Please enter your name here