







ಕಡಬ: ಬಂಟ್ರ ಗ್ರಾಮದ ಕೈಕುರೆ ಸುಬ್ರಾಯಪಾಲು ಮನೆಯ ಶಿವಪ್ರಸಾದ್ ಗೌಡ ಕೈಕುರೆ (51ವ.) ಅವರು ಅ.21ರಂದು ರಾತ್ರಿ ನಿಧನ ಹೊಂದಿದ್ದಾರೆ. ಅ.21ರ ರಾತ್ರಿ ಆರೋಗ್ಯ ಸಮಸ್ಯೆ ಉಂಟಾದಾಗ ಅವರನ್ನು ಕಡಬ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.


ಮೃತರು ತಾಯಿ ಮೀನಾಕ್ಷಿ ಬಾಬು ಗೌಡ, ಪತ್ನಿ ಹರಿಣಾಕ್ಷಿ, ಪುತ್ರ ಹಾರ್ದಿಕ್, ಪುತ್ರಿ ಬಿಂದ್ಯಾ, ಸಹೋದರ ಗಣೇಶ್ ಕೈಕುರೆ, ಸಹೋದರಿ ಶ್ರೀಲತಾ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.



ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದರು:
ಪ್ರಗತಿಪರ ಕೃಷಿಕರಾಗಿರವ ಶಿವಪ್ರಸಾದ್ ಕೈಕುರೆಯವರು ಹಿಂದೆ ರಾಜಕೀಯ ಕ್ಷೇತ್ರದಲ್ಲಿದ್ದರೂ, ಇತ್ತೀಚಿನ ಸಮಯದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದರು. ಸ್ಥಳೀಯ ಶಾಲೆಗೆ ಶೈಕ್ಷಣಿಕ ಅಭಿವೃದ್ದಿಗೆ ಉದಾರ ಕೊಡುಗೆಗಳನ್ನು ನೀಡಿದ್ದರು. ಮರ್ದಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಮಾಜಿ ಅಧ್ಯಕ್ಷರಾಗಿರುವ ಇವರು ಪ್ರಸ್ತುತ ಗೌರವಾಧ್ಯಕ್ಷರಾಗಿದ್ದರು. ಇವರ ನಿಧನಕ್ಕೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.










