







ಪುತ್ತೂರು: ಅಡಿಕೆ, ತೆಂಗಿನಕಾಯಿ ಕಾಳುಮೆಣಸು ಮತ್ತು ಕಾಡುತ್ಪತ್ತಿಗಳ ಖರೀದಿ ಕೇಂದ್ರ ಜಿ.ಟಿ.ಎಂ ಎಂಟರ್ಪ್ರೈಸಸ್ ಅ.22ರಂದು ಬೆಳಿಯೂರುಕಟ್ಟೆ ವೈಎಂಕೆ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.



ಪುತ್ತೂರು ಆರ್ಎಫ್ಓ ಕಿರಣ್, ಮಾಜಿ ಡಿಆರ್ಎಫ್ಓ ಕೆ ಕೃಷ್ಣಪ್ಪ ಹಾಗೂ ಶಂಕರ ನಾರಾಯಣ ಭಟ್ ಮಲ್ಯ ವಿವಿಧ ವಿಭಾಗಗಳನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮಾಸ್ಟರ್ ಪ್ಲಾನರಿಯ ಪ್ರಭಾಕರ ಭಟ್ ಅವರು ಪ್ರಥಮ ಗ್ರಾಹಕರಾಗಿ ವ್ಯವಹಾರ ನಡೆಸಿದರು.




ಅಮೀನಾ ಹಸಂತಡ್ಕ , ಕೃಷ್ಣ ಪ್ರಸಾದ್ ಭಂಡಾರಿ ಸಾಜ, ಎಂ.ಬಿ ವಿಶ್ವನಾಥ ರೈ ಬೀಡು, ನಾರಾಯಣ ರೈ ಸಾಜ, ರಾಧಾಕೃಷ್ಣ ಆಳ್ವ ಸಾಜ, ಮುರಳಿಕೃಷ್ಣ ಭಟ್ ಹಸಂತಡ್ಕ, ಕೆಪಿಸಿಸಿ ಪ್ರ.ಕಾರ್ಯದರ್ಶಿ ಎಂ.ಎಸ್. ಮೊಹಮ್ಮದ್, ಇಸ್ಮಾಯಿಲ್ ಹಾಜಿ ಬಂಗಾರಡ್ಕ, ಯೂಸುಫ್ ಹಾಜಿ ಕೈಕಾರ, ಹಕೀಮ್ ಬೆಳಿಯೂರುಕಟ್ಟೆ, ಸಮೀರ್ ಖಾನ್, ಬೆಂಗಳೂರು, ಅಬ್ದುಲ್ ರಹಿಮಾನ್ ಸಾರ್ಯ, ಯು.ಟಿ ಅಲಿ ಪುಣಚ, ಮೊಹಮ್ಮದ್ ಹಾಜಿ, ಶರೀಫ್ ರಾಯಲ್, ಕೆ.ಬಿ ಮೊಹಮ್ಮದ್ ಅಶ್ರಫ್ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಮೌಲೀದ್ ಹಾಗೂ ದುವಾ ನೆರವೇರಿಸಲಾಯಿತು. ಸಯ್ಯದ್ ಮುಝಮ್ಮಿಲ್ ತಂಙಳ್, ಮಹಮೂದುಲ್ ಫೈಝಿ ಓಲೆಮುಂಡೋವು, ಮೊಹಮ್ಮದ್ ದಾರಿಮಿ ಪಣಚ, ಉಮ್ಮರ್ ಫಾರೂಕ್ ಸಖಾಫಿ, ಸಾಜ ಖತೀಬ್ ಅಬ್ಬಾಸ್ ಮದನಿ, ರೌಫ್ ಹಾಶಿಮಿ ಮಂಜ, ನಾಸೀರ್ ರಝ್ವಿ ಸಾರ್ಯ, ಕಬೀರ್ ಮಲ್ಹರಿ ಸಾರ್ಯ, ಕುಂಞುಪ್ಪ ಮುಸ್ಲಿಯಾರ್ ಉಪಸ್ಥಿತರಿದ್ದರು. ಜಿ.ಟಿ.ಎಂ ಎಂಟರ್ಪ್ರೈಸಸ್ನ ಮಾಲಕರಾದ ಯೂಸುಫ್ ಗೌಸಿಯಾ ಸಾಜ ಹಾಗೂ ಹಫೀಝ್ ಕೈಕಾರ ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು. ಇಂಜಿನಿಯರ್ ಉಮ್ಮರ್ ಫಾರೂಕ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.










