







ಬಡಗನ್ನೂರು : ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿಯ ಶುಭ ಸಂಧರ್ಭದಲ್ಲಿ ಪುತ್ತೂರು ಯಕ್ಷಸಾರಥಿ ಯಕ್ಷ ಕಲಾಬಳಗದವರಿಂದ “ಶ್ರೀ ಹರಿ ದರ್ಶನ” ಎಂಬ ಯಕ್ಷಗಾನ ಬಯಲಾಟ ನಡೆಯಿತು.


ಹಿಮ್ಮೇಳದಲ್ಲಿ ಭಾಗವತರಾಗಿ ಕುಮಾರಿ ವಿದ್ಯಾಶ್ರೀ ಆಚಾರ್ಯ, ಚೆಂಡೆ ವಾದಕರಾಗಿ ಪ್ರಮೋದ್ ಪಾಣಾಜೆ, ಮದ್ದಳೆ ವಾದಕರಾಗಿ ಮಾ ಆಯುಷ್ ರೈ ಪುತ್ರಕಳ, ಚಕ್ರತಾಳದಲ್ಲಿ ಸುಂದರ ನಾಯ್ಕ ಪಾಣಾಜೆ, ಹಾಗೂ ಮುಮ್ಮೇಳದಲ್ಲಿ ನಾರಾಯಣ ಸುವರ್ಣ, ಚಂದ್ರಶೇಖರ ಸುಳ್ಯಪದವು,, ಉತ್ತಮ ಪಡ್ಪು, ಉಲ್ಲಾಸ್ ಪಡ್ಪು , ರಾಜೇಶ್ ಸುಳ್ಯದವು, ಸತೀಶ್ ಬೆಟ್ಟಂಪಾಡಿ, ಮಾ. ತರುಣಕೃಷ್ಣ ನೇರಳೆಕಟ್ಟೆ, ಮಾ. ಕೃತಿಕ್ ಸುಳ್ಯಪದವು,ಮಾ ಕೃಷ್ಣ ಬಡಕ್ಕಿಲ, ಶಶಾಂಕ್,ಮಾ/ಆದಿತ್ಯ ಭಟ್ ಭಾಗವಹಿಸಿದರು.













