







ಪುತ್ತೂರು: ಕಾಂಚನ ಶ್ರೀ ಲಕ್ಷೀನಾರಾಯಣ ಮ್ಯೂಸಿಕ್ ಅಕಾಡಮಿ ಸಂಸ್ಥೆ ವತಿಯಿಂದ ಈ ಬಾರಿಯ ಕಾಂಚನೋತ್ಸವವನ್ನು ಬೆಂಗಳೂರು ಬನಶಂಕರಿ ಎರಡನೇ ಹಂತದಲ್ಲಿರುವ ಜೆ.ಎಸ್.ಎಸ್ ಪಬ್ಲಿಕ್ ಸ್ಕೂಲ್‌ನ ಸಭಾಂಗಣದಲ್ಲಿ ಅ.25ರಂದು ಆಯೋಜಿಸಲಾಗಿದೆ.


ಬೆಳಗ್ಗೆ 10ಕ್ಕೆ ನಡೆಯುವ ಸಮಾರಂಭದಲ್ಲಿ ಕರ್ನಾಟಕದ ಹಿರಿಯ ಕಲಾವಿದೆಯಾದ ವಿದುಷಿ ಡಾ. ಸತ್ಯವತಿ ಅವರಿಗೆ ಕಾಂಚನಶ್ರೀ ಪ್ರಶಸ್ತಿಯನ್ನು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ನಿತ್ಯಾಸ್ಥಾನಂದಜೀ ಅವರು ಪ್ರದಾನ ಮಾಡಲಿದ್ದಾರೆ. ನಂತರ ಅವರು ಆಶೀರ್ವಚನ ನೀಡಲಿದ್ದಾರೆ. ಎನ್ ಟ್ರಸ್ಟ್ ಘೌಂಡೇಶನ್‌ನ ರಾಜ್‌ಮೋಹನ್ ಕೃಷ್ಣ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಾಯಂಕಾಲ 5 ಗಂಟೆಗೆ ಕರ್ನಾಟಕ ಶಾಸ್ತ್ರೀಯ ಗಾಯನ ಕಾರ್ಯಕ್ರಮವಿದ್ದು ವಿದುಷಿ ಎನ್.ಜೆ. ನಂದಿನಿ (ಗಾಯನ), ವಿದ್ವಾನ್ ಮತ್ತೂರು ಶ್ರೀನಿಧಿ ( ಪಿಟೀಲು), ವಿದ್ವಾನ್ ಪರುಪಲ್ಲಿ ಫಲ್ಗಣ (ಮೃದಂಗ) ಹಾಗೂ ವಿದ್ವಾನ್ ರಂಗನಾಥ ಚಕ್ರವರ್ತಿ (ಘಟ) ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸಂಗೀತ ರಸಿಕರಿಗೆ ಮುಕ್ತ ಅವಕಾಶವಿದೆ ಎಂದು ಸಂಸ್ಥೆಯ ಉಪಾಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













