







ಪುತ್ತೂರು: ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಮಿಶನ್ ಮೂಲೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಅ.11 ರಿಂದ 20ರ ವರೆಗೆ ನವರಾತ್ರಿ ಉತ್ಸವ ಜರಗಿದ್ದು ಯಶಸ್ವಿ ಸಂಪನ್ನಗೊಂಡಿದೆ.ಅರ್ಚಕರಾದ ಉದಯ ನಾರಾಯಣ ಕಲ್ಲೂರಾಯರವರ ನೇತೃತ್ವದಲ್ಲಿ ಅ.11 ರಂದು ಬೆಳಿಗ್ಗೆ ಮಹಾಗಣಪತಿ ಹೋಮದೊಂದಿಗೆ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಅ.11 ರಿಂದ 20ರ ವರೆಗೆ ಶ್ರೀ ಕ್ಷೇತ್ರದಲ್ಲಿ ಪ್ರತಿದಿನ ಸಂಜೆ ಭಜನಾ ಸಂಕೀರ್ತನೆ, ರಾತ್ರಿ ಮಹಾಪೂಜೆ, ಅ.18 ರಿಂದ 20ರ ವರೆಗೆ ರಾತ್ರಿ ವಾಹನಗಳಿಗೆ ಆಯುಧ ಪೂಜೆ ನೆರವೇರಿತು. ಅ.21 ರಂದು ಬೆಳಿಗ್ಗೆ ಅಕ್ಷರಭ್ಯಾಸ, ವಿಜಯದಶಮಿ ಪೂಜೆ ನಂತರ ಪ್ರಸಾದ ವಿತರಣೆ, ನವಾನ್ನ ಭೋಜನ ಜರಗಿತು.


ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ರಮೇಶ್ ರೈ ಮಿಶನ್ ಮೂಲೆ, ಅಧ್ಯಕ್ಷ ರಾಮ ಶೆಟ್ಟಿ, ಲೆಕ್ಕ ಪರಿಶೋಧಕ ವಿಶ್ವನಾಥ ರೈ ಮಿಶನ್ ಮೂಲೆ, ಕಾರ್ಯದರ್ಶಿ ಕೆ.ಬಿ ಶೇಖರ, ಉಪಾಧ್ಯಕ್ಷರಾದ ಸಂತೋಷ್ ಕುಮಾರ್, ಸತೀಶ್ ಎಂ, ಜೊತೆ ಕಾರ್ಯದರ್ಶಿಗಳಾದ ಲಕ್ಷ್ಮಣ ಶೆಟ್ಟಿ, ಸುಂದರ ಕೆ, ಸಂತೋಷ್ ರೈ, ಕೋಶಾಧಿಕಾರಿ ಮೋಹನ್ ಕುಮಾರ್ ಡಿ, ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಡಾ ಸುರೇಶ್ ಪುತ್ತೂರಾಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸತೀಶ್ ರೈ ಮಿಶನ್ ಮೂಲೆ ಉಪಾಧ್ಯಕ್ಷ ಬೆಳಂದೂರುಗುತ್ತು ಸುಪ್ರೀತ್ ಜೈನ್, ಕಾರ್ಯದರ್ಶಿ ಸುರೇಂದ್ರ ಎ ಮೊಟ್ಟೆತಡ್ಕ, ಉಪ ಕಾರ್ಯದರ್ಶಿ ಮೋಹನ್ ಅಮ್ಮುಂಜೆ, ಉಪ ಖಜಾಂಜಿ ಮನೋಹರ ಪಾಟಾಳಿ ನೈತಾಡಿ, ಪದಾಧಿಕಾರಿಗಳಾದ ರವೀಂದ್ರ ಆಚಾರ್ಯ ಸಂಪ್ಯ, ನೇಮಾಕ್ಷ ಸುವರ್ಣ ಅಮ್ಮುಂಜ , ಚೇತನ್ ಕುಮಾರ್ ಮೊಟ್ಟೆತಡ್ಕ ಸಹಿತ ಹಲವಾರು ಭಕ್ತರು ಪಾಲ್ಗೊಂಡರು.













