ಜಿಲ್ಲಾ ಕೃಷಿಕ ಸಮಾಜದ ಕಾರ್ಯಕಾರಿ ಮಂಡಳಿ ಸಭೆ

0

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಕೃಷಿಕ ಸಮಾಜದ ಕಾರ್ಯಕಾರಿ ಮಂಡಳಿ ಸಭೆಯು ಅಕ್ಟೋಬರ್ 22 ರಂದು ಜಂಟಿ ಕೃಷಿ ನಿರ್ದೇಶಕರ ಕಚೇರಿ ಮಂಗಳೂರು ಇಲ್ಲಿ ನಡೆಯಿತು .ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ವಿಜಯ ರೈಕೋರಂಗ ಇವರು ವಹಿಸಿದ್ದರು.

ಬೆಳೆ ವಿಮಾ ಪರಿಹಾರ ಮತ್ತು ಪಾವತಿಯಲ್ಲಿ ತಾರತಮ್ಯ ಆಗಿದ್ದು ಅನೇಕ ರೈತರಿಗೆ ಕಡಿಮೆ ಪರಿಹಾರ ಪಾವತಿ ಯಾಗಿರುವ ಬಗ್ಗೆ ಚರ್ಚೆ ನಡೆಸಲಾಯಿತು ಹಾಗೂ ಅವರುಗಳಿಗೆ ತಕ್ಷಣ ನ್ಯಾಯಯುತ ಪರಿಹಾರವನ್ನು ನೀಡುವಂತೆ ಸರಕಾರವನ್ನು ಒತ್ತಾಯ ಮಾಡುವ ಬಗ್ಗೆ ನಿರ್ಣಯಿಸಲಾಯಿತು. ಮುಂದಿನ ವರ್ಷದ ಹೊಸ ಟರ್ಮ್ ಶೀಟನ್ನು ತಯಾರು ಮಾಡುವ ಸಂದರ್ಭದಲ್ಲಿ ಈಗಿರುವ ಸಮಸ್ಯೆಗಳನ್ನು ಪರಿಹರಿಸುವುದರ ಜೊತೆಗೆ ಕೃಷಿಕರ ಬೇಡಿಕೆಯನ್ನು ಪರಿಗಣಿಸಬೇಕೆಂದು ಹಾಗೂ ತಾಂತ್ರಿಕ ಮತ್ತು ಭೌಗೋಳಿಕ ಮಾಹಿತಿಗಳ ಬೇಡಿಕೆ ಪಟ್ಟಿಯನ್ನು ರಾಜ್ಯ ಕೃಷಿಕ ಸಮಾಜದ ಮೂಲಕ ರಾಜ್ಯ ಸರಕಾರಕ್ಕೆ ಸಲ್ಲಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.

ತೋಟಗಾರಿಕಾ ಇಲಾಖೆಯಿಂದ ಸಬ್ಸಿಡಿಯಲ್ಲಿ ಸಿಗುವ ಸೋಲಾರ್ ಪಂಪ್ಸೆಟ್ಟುಗಳನ್ನು ಪ್ರತಿ ತಾಲೂಕಿಗೆ ಕನಿಷ್ಠ 10 ಘಟಕಗಳನ್ನು ನೀಡುವ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳಲಾಯಿತು. ಘೋಷಣೆಯಾದ ಬರಪೀ ಡಿತ ತಾಲೂಕಿನಲ್ಲಿ ಭತ್ತ ಬೆಳೆಯುವ ರೈತರಿಗೆ ಪ್ರತಿ ಹೆಕ್ಟರಿಗೆ 8500 ಗಳ ಸಹಾಯಧನವನ್ನು ನೀಡುವ ಬಗ್ಗೆ ಕೃಷಿ ನಿರ್ದೇಶಕರು ತಿಳಿಸಿ ರೈತರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ತಾಲೂಕು ಕೃಷಿ ಇಲಾಖೆಯಲ್ಲಿ ಸಬ್ಸಿಡಿ ದರದಲ್ಲಿ ಪಿವಿಸಿ ಪೈಪುಗಳನ್ನು ವಿತರಿಸಲಾಗುತ್ತಿದ್ದು ರೈತರು ತಮ್ಮ ತಾಲೂಕು ನಿರ್ದೇಶಕರ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಕೃಷಿ ವಿಜ್ಞಾನ ಕೇಂದ್ರದಿಂದ ಅಣಬೆ ಕೃಷಿ ಮಾಡಲು ಪ್ರೋತ್ಸಾಹ ನೀಡುತ್ತಿದ್ದು ತರಬೇತಿ ಹಾಗೂ ಬ್ಯಾಂಕುಗಳಿಂದ ಸಾಲ ಸೌಲಭ್ಯ ಮಾಡಿಕೊಡಲಾಗುವುದು ಎಂದು ತಿಳಿಸಿದರು. ಸಣ್ಣ ನೀರಾವರಿ ಇಲಾಖೆಯಿಂದ ತಯಾರಿಸಿದ ಆಣೆಕಟ್ಟುಗಳ ಸಮರ್ಪಕ ನಿರ್ವಹಣೆ ಬಗ್ಗೆ ಸರ್ಕಾರವು ಗಮನಹರಿಸಬೇಕೆಂದು ಬರೆದುಕೊಳ್ಳಲಾಯಿತು.

ಸಭೆಯಲ್ಲಿ ರಾಜ್ಯ ಪ್ರತಿನಿಧಿ ಪದ್ಮನಾಭ ರೈ, ಕಾರ್ಯದರ್ಶಿ ರಾಕೇಶ್ ರೈ ಕೇಡೆಂಜಿ, ಕೋಶಾಧಿಕಾರಿ ಕುಸುಮಾದರ ಸುಳ್ಯ, ನಿರ್ದೇಶಕರಾದ ಮಾಜಿ ಶಾಸಕ ಸಂಜೀವ ಮಟo ದೂರು, ದೇವದಾಸ್ ಭಂಡಾರಿ ಉಲ್ಲಾಳ, ರಾಜು ಪೂಜಾರಿ ಬೆಳ್ತಂಗಡಿ, ಮಹಾವೀರ ಜೈನ್ ಬೆಳ್ತಂಗಡಿ, ಮಹೇಶ್ ಕೆ ಸವಣೂರು, ಪದ್ಮರಾಜ ಬಲಾಲ್ ಬಂಟ್ವಾಳ, ಡಾ. ವಸಂತ ಕುಮಾರ್ ಶೆಟ್ಟಿ ಮುಖ್ಯ ಪಶು ವೈದ್ಯಧಿಕಾರಿಗಳು ದಕ್ಷಿಣ ಕನ್ನಡ, ಶಾಂಭವಿ ರೇಷ್ಮೆ ಸಹಾಯಕ ನಿರ್ದೇಶಕರು ದಕ್ಷಿಣ ಕನ್ನಡ, ದರ್ಶನ್ ಜಿ ಸಹಾಯಕ ತೋಟಗಾರಿಕಾ ಅಧಿಕಾರಿ, ಡಾ ಜಿ ಟಿ ರಮೇಶ್ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು ಕೆ ವಿ ಕೆ ಮಂಗಳೂರು, ಡಾಕ್ಟರ್ ಹರೀಶ್ ವಿಜ್ಞಾನಿಗಳು ಕೆ ವಿ ಕೆ ಮಂಗಳೂರು ಉಪಸ್ಥಿತರಿದ್ದರು.

ಜಂಟಿ ಕೃಷಿ ನಿರ್ದೇಶಕ ಡಾ. ಹೊನ್ನಪ್ಪ ಗೌಡ ಸ್ವಾಗತಿಸಿ ವಂದಿಸಿದರು. ಸಿಬ್ಬಂದಿ ಸುಜಾತ ಸಹಕರಿಸಿದರು

LEAVE A REPLY

Please enter your comment!
Please enter your name here