ನಿಡ್ಪಳ್ಳಿಯ ಕುಡ್ಚಿಲ ಎಂಬಲ್ಲಿ ಸಿಡಿಲು ಬಡಿದು ಮನೆಗೆ ಹಾನಿ

0

ನಿಡ್ಪಳ್ಳಿ: ನಿಡ್ಪಳ್ಳಿ ಗ್ರಾಮದ ಕುಡ್ಚಿಲದಲ್ಲಿ  ಸಿಡಿಲು ಬಡಿದು ಮನೆಗೆ ಹಾನಿಯಾದ ಘಟನೆ ಅ.24 ರಂದು ಸಂಜೆ ಸಂಭವಿಸಿದೆ.

ಕುಡ್ಚಿಲ ನಿವಾಸಿ ಮಂಜುನಾಥ್‌ ಎಂಬವರ ಮನೆಗೆ ಸಿಡಿಲು ಬಡಿದಿದ್ದು ,ಮನೆಯ ಹಿಂದಿನ ಒಂದು ಭಾಗದ ಗೋಡೆ ಒಡೆದು ಸಾರಣೆ ಎದ್ದು ಬಿರುಕು ಬಿಟ್ಟಿದೆ.ಸಿಡಿಲಿನ ಒಡೆತಕ್ಕೆ ಮನೆಯ ವಿದ್ಯುತ್‌ ವೈರಿಂಗ್ ಸಂಪೂರ್ಣ ಹಾನೀಗೀಡಾಗಿದ್ದು,ಸ್ವಿಚ್ಚ್‌ ಬೋರ್ಡ್‌ ನೇತಾಡುತ್ತಿದೆ.

ಘಟನೆ ಸಂಭವಿಸಿದ ಸಂದರ್ಭದಲ್ಲಿ ಮಂಜುನಾಥ್‌ ಅವರು ರಿಕ್ಷಾದಲ್ಲಿ ಬಾಡಿಗೆಗೆ ತೆರಳಿದ್ದರು.ಮನೆಯಲ್ಲಿ ಅವರ ತಾಯಿ, ಪತ್ನಿ ಮತ್ತು ಪುತ್ರ ಇನ್ನೊಂದು ಭಾಗದಲ್ಲಿ ಇದ್ದುದರಿಂದ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಮಂಜುನಾಥರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here