ಪುತ್ತೂರು ದಾರುಲ್ ಹಸನಿಯಾ ಎಜು-ಪಾರ್ಕ್‌ನಲ್ಲಿ ‘ತನಾಫುಸ್’ ಆರ್ಟ್ಸ್ ಫೆಸ್ಟ್ ಪೋಸ್ಟರ್ ಬಿಡುಗಡೆ

0

ಪುತ್ತೂರು: ದಾರುಲ್ ಹಸನಿಯಾ ಎಜು-ಪಾರ್ಕ್ ಪುತ್ತೂರು ಇದರ ವಿದ್ಯಾರ್ಥಿಗಳ ವಾರ್ಷಿಕ ಕಲೋತ್ಸವ ‘ತನಾಫುಸ್’ ನವೆಂಬರ್ 13, 14 ಮತ್ತು 15ರಂದು ಎಜು-ಪಾರ್ಕ್ ಮೈದಾನದಲ್ಲಿ ನಡೆಯಲಿದ್ದು, ಇದರ ಪ್ರಚಾರ ಪೋಸ್ಟರ್ ಬಿಡುಗಡೆ ಹಾಗೂ ವಿವಿಧ ತಂಡಗಳ ಲೋಗೋ ಅನಾವರಣ ಕಾರ್ಯಕ್ರಮವು ಸಂಸ್ಥೆಯ ಸಭಾಂಗಣದಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಲೋಗೋ ಅನಾವರಣಗೊಳಿಸಿ ಮಾತನಾಡಿದ ದಾರುಲ್ ಹಸನಿಯಾ ಬುರೈದ ಸಮಿತಿಯ ಅಧ್ಯಕ್ಷ ಮುಹಮ್ಮದ್ ಹಾಜಿ ಕುಕ್ಕುವಳ್ಳಿ ಅವರು, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಒಂದಲ್ಲೊಂದು ಪ್ರತಿಭೆ ಅಡಗಿರುತ್ತದೆ. ಅಂತಹ ಪ್ರತಿಭೆಗಳನ್ನು ಗುರುತಿಸಿ, ಅವುಗಳನ್ನು ಬೆಳೆಸಲು ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಡುವಲ್ಲಿ ಕಲಾ ಸ್ಪರ್ಧೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಸನ್ ಹಾಜಿ ಸಿಟಿ ಬಝಾರ್ ಅವರು, ಶೈಕ್ಷಣಿಕ ಸಾಧನೆಯ ಜೊತೆಗೆ ಕಲಾ ಕ್ಷೇತ್ರದಲ್ಲಿಯೂ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ ಗುರುತಿಸಿಕೊಳ್ಳುವಂತಾಗಲು ‘ತನಾಫುಸ್’ ಕಲೋತ್ಸವವನ್ನು ವಿನೂತನ ಶೈಲಿಯಲ್ಲಿ ಆಯೋಜಿಸಲಾಗಿದೆ ಎಂದರು.

ಸಂಸ್ಥೆಯ ವರ್ಕಿಂಗ್ ಕಾರ್ಯದರ್ಶಿ ರಿಯಾಝ್ ಇಂಜಿನಿಯರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಪ್ರೋತ್ಸಾಹ ನೀಡುವ ಮೂಲಕ ಕಲಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲು ಪ್ರೇರೇಪಿಸುವುದೇ ‘ತನಾಫುಸ್’ ಸ್ಪರ್ಧೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೋಡಿಂಬಾಡಿ ಜುಮ್ಮಾ ಮಸೀದಿಯ ಮಾಜಿ ಅಧ್ಯಕ್ಷ ಹುಸೈನ್ ಹಾಜಿ ಕೋಡಿಂಬಾಡಿ, ದಾರುಲ್ ಹಸನಿಯಾ ಬುರೈದ ಸಮಿತಿಯ ಝಕರಿಯಾ ಕೊರಿಂಗಿಳ, ಸಂಸ್ಥೆಯ ಆಡಳಿತ ಸಮಿತಿಯ ಅಬ್ದುಲ್ ರಹಿಮಾನ್ ಹಾಜಿ ಬಾಳಾಯ, ಬಶೀರ್ ಹಾಜಿ ದರ್ಬೆ, ಅಬ್ದುಲ್ಲಾ ಹಾಜಿ ಪುರುಷರಕಟ್ಟೆ, ಡಿ.ಕೆ. ಅಬ್ದುಲ್ ಹಮೀದ್ ಕೆಮ್ಮಾಯಿ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಮುನೀರ್ ಕಬಕ, ಸಂಸ್ಥೆಯ ಅಧ್ಯಾಪಕರಾದ ಅಕ್ಬರ್ ಅಲಿ ಹುದವಿ, ಶುಹೈರ್ ರಹ್ಮಾನಿ, ಶಕೀಲ್ ಬಾಖವಿ, ಶಈದ್ ಬಾಖವಿ ಮೊದಲಾದವರು ಉಪಸ್ಥಿತರಿದ್ದರು.

ಸಂಸ್ಥೆಯ ವ್ಯವಸ್ಥಾಪಕ ಅನ್ವರ್ ಸ್ವಾದಿಕ್ ಮುಸ್ಲಿಯಾರ್ ಮೊಟ್ಟತ್ತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಎಂ.ಎ. ಕೊಡುಂಗಾಯಿ ಫಾಝಿಲ್ ಹನೀಫಿ ಸ್ವಾಗತಿಸಿದರು. ಕಾರ್ಯಾಲಯ ನಿರ್ವಾಹಕ ಫರ್ವೇಝ್ ಅಕ್ತರ್ ವಂದಿಸಿದರು.

LEAVE A REPLY

Please enter your comment!
Please enter your name here