







ಪುತ್ತೂರು: ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ವಿಭಾಗದ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾಟವು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು.



ಪಂದ್ಯಾಟವನ್ನು ಕೆನರಾ ಕಾಲೇಜು, ಮಂಗಳೂರು ಇಲ್ಲಿನ ಸಹಾಯಕ ದೈಹಿಕ ಶಿಕ್ಷಣ ನಿರ್ದೇಶಕರಾಗಿರುವ ಕಾರ್ತಿಕ್ ಎನ್ ಉದ್ಘಾಟಿಸಿ, ಮಾತನಾಡಿದ ಅವರು ‘ಖೋ ಖೋ ಕೇವಲ ಮನರಂಜನೆಯ ಆಟವಲ್ಲ,ಇದು ದೈಹಿಕ ಆರೋಗ್ಯ, ಮಾನಸಿಕ ಚುರುಕುತನ, ಶಿಸ್ತು, ಸಹಕಾರ ಮತ್ತು ಕ್ರೀಡಾಸ್ಫೂರ್ತಿಯನ್ನು ಬೆಳೆಸುವ ಅತ್ಯುತ್ತಮ ಕ್ರೀಡೆಯಾಗಿದೆ’ ಎಂದರು.




ಅಧ್ಯಕ್ಷತೆಯನ್ನು ವಿವೇಕಾನಂದ ಪದವಿ ಪೂರ್ವಕಾಲೇಜಿನ ಆಡಳಿತ ಮಂಡಳಿಯ ನಿರ್ದೇಶಕರಾಗಿರುವ ಮುರಳಿಕೃಷ್ಣ ರೈ ವಹಿಸಿದ್ದರು.ಉಪನ್ಯಾಸಕರಾದ ಜ್ಯೋತಿ, ದಯಾಮಣಿ ಉಪಸ್ಥಿತರಿದ್ದರು.

ಪಂದ್ಯಾಟದಲ್ಲಿ ಕಾಲೇಜಿನ ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದು, ವಿದ್ಯಾರ್ಥಿಗಳಾದ ತರುಣ್‌ಕುಮಾರ್ ಬಿ. ಆರ್. ಸಾತ್ವಿಕ್ ಹಾಗೂ ದೇಶ್ಚಿತ್ ಯಸ್ ಇವರು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಖೋಖೋ ಪಂದ್ಯಾಟಕ್ಕೆ ಆಯ್ಕೆಯಾದರು. ಇವರಿಗೆ ಪವನ್ ಕುಮಾರ್ ತರಬೇತಿ ನೀಡಿದ್ದರು.











