







ಪುತ್ತೂರು: ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ಅ.21ರಂದು ನಡೆದ ಪುತ್ತೂರು ದಸರಾ ಶೋಭಾಯಾತ್ರೆಯ ಕುರಿತು ಆಯೋಜಿಸಲಾದ ಇನ್ಸ್ಟಾಗ್ರಾಂ ರೀಲ್ಸ್ ಸ್ಪರ್ಧೆಯ ಫಲಿತಾಂಶ ಸೆ.25ರಂದು ಸಂಜೆ ಪ್ರಕಟಗೊಂಡಿದೆ.
ಪ್ರಥಮ ಬಹುಮಾನವನ್ನು ಸ್ವಸ್ತಿಕ್ ಎಂ. ಭಟ್ (ರೂ. 10,000), ದ್ವಿತೀಯ ಬಹುಮಾನವನ್ನು ಚಿರಾಗ್ (ರೂ.6,000), ತೃತೀಯ ಬಹುಮಾನವನ್ನು ರೋಹಿತ್ ಗೌಡ (ರೂ.4,000)ರವರು ಪಡೆದುಕೊಂಡಿದ್ದಾರೆ.
ತೀರ್ಪುಗಾರರು ಪ್ರತಿ ವೀಡಿಯೋದಲ್ಲಿನ ವಿಷಯ, ಗುಣಮಟ್ಟ ಮುಂತಾದವುಗಳನ್ನೊಳಗೊಂಡ ರೀಲ್ಸ್ನ್ನು ಆಯ್ಕೆ ಮಾಡಿ ವಿಜೇತರಾದವರನ್ನು ಘೋಷಿಸಿದ್ದಾರೆ.












