







ನೆಲ್ಯಾಡಿ: ಪುತ್ತೂರು ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರೌಢಶಾಲಾ ಬಾಲಕ/ಬಾಲಕಿಯರ ಕ್ರೀಡಾಕೂಟದಲ್ಲಿ 17ರ ವಯೋಮಾನದ ಬಾಲಕರ ವಿಭಾಗದಲ್ಲಿ ಉದನೆ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್ನ 10ನೇ ತರಗತಿ ವಿದ್ಯಾರ್ಥಿ ವರುಣ್ ಎಂ.ಡಿ.ಅವರು 100 ಮೀ., 200ಮೀ., ಹಾಗೂ 4೦೦ ಮೀ. ಓಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ಈ ಕ್ರೀಡಾಕೂಟದಲ್ಲಿ ವರುಣ್ ಎಂ.ಡಿ.ಅವರು 3 ಚಿನ್ನದ ಪದಕದೊಂದಿಗೆ ವೈಯಕ್ತಿಕ ಚಾಂಪಿಯನ್ಶಿಪ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಈತನಿಗೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಜಿಮ್ಸನ್ ಅವರು ತರಬೇತಿ ನೀಡಿದ್ದರು. ಈತ ನೆಲ್ಯಾಡಿ ಗಣೇಶ್ ಸ್ಟೋರ್ ಮಾಲಕ ದಿನೇಶ್ ಎಂ.ಟಿ.ಹಾಗೂ ಶಾಂಭವಿ ದಂಪತಿ ಪುತ್ರ.













