







ಪುತ್ತೂರು: ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದ ವೀರಮಂಗಲ ನವವಿವಾಹಿತೆಯೊಬ್ಬರು ಮೃತಪಟ್ಟ ಘಟನೆ ಅ.25ರಂದು ನಡೆದ ಬಗ್ಗೆ ವರದಿಯಾಗಿದೆ.


ವೀರಮಂಗಲ ಸುಂದರ ಎಂಬವರ ಪತ್ನಿ ಮಮತ(32ವ)ರವರು ಮೃತಪಟ್ಟವರು.



ಅವರು ಅ.24ರಂದು ಮನೆಯಲ್ಲಿ ವಿಷಪದಾರ್ಥ ಸೇವಿಸಿ ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ಅ.25ರಂದು ಮೃತಪಟ್ಟಿದ್ದಾರೆ. ಮೃತರು ಗಂಡ ಸುಂದರ ಮತ್ತು ಮನೆಮಂದಿಯನ್ನು ಅಗಲಿದ್ದಾರೆ. ಘಟನೆ ಕುರಿತು ಪುತ್ತೂರು ಮಹಿಳಾ ಪೊಲೀಸರು ಅಸ್ವಸ್ಥ ಮಹಿಳೆಯ ಹೇಳಿಕೆಯಂತೆ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆಂದು ತಿಳಿದು ಬಂದಿದೆ.










