ಆಶ್ಲೇಷ ಬಲಿ ಪೂಜೆಯಲ್ಲಿ ಸಾಮೂಹಿಕ ಸಂಕಲ್ಪ : ಪ್ರತಿಯೊಬ್ಬರ ಸಮಸ್ಯೆ ಬೇರೆ-ಬೇರೆಯಾಗಿದ್ದು ಪ್ರತ್ಯೇಕ ಸಂಕಲ್ಪ ಅತ್ಯಗತ್ಯ- ಪ್ರಸನ್ನ ದರ್ಬೆ

0

ಪುತ್ತೂರು: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಆಶ್ಲೇಷ ಬಲಿ ಪೂಜೆಯ ದಿಟ್ಟಂ ಪದ್ಧತಿ ಬದಲಿಸಿ ಸಾಮೂಹಿಕ ಸಂಕಲ್ಪ ಜಾರಿಗೊಳಿಸಿರುವುದಕ್ಕೆ ಭಕ್ತ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಪ್ರಸನ್ನ ದರ್ಬೆ, ಆಶ್ಲೇಷ ಬಲಿ ಪೂಜೆಯಲ್ಲಿ ಪ್ರತಿಯೊಬ್ಬರ ಸಮಸ್ಯೆ ಬೇರೆ-ಬೇರೆಯಾಗಿದ್ದು ಪ್ರತ್ಯೇಕ ಸಂಕಲ್ಪ ಅತ್ಯಗತ್ಯ. ಸರ್ಪದೋಷ, ಕಾಲಸರ್ಪ ದೋಷ, ಕುಜದೋಷ, ಸಂತಾನ ದೋಷದಂತಹ ವಿವಿಧ ಕಾರಣಗಳಿಗೆ ಭಕ್ತರು ಈ ಪೂಜೆ ಮಾಡಿಸುತ್ತಾರೆ. ಆದರೆ ಭಕ್ತರ ಸಂಖ್ಯೆ ಹೆಚ್ಚಳದ ಕಾರಣ ನೀಡಿ ಸಾಮೂಹಿಕ ಸಂಕಲ್ಪ ಮಾಡುವುದು ದಿಟ್ಟಂಗೆ ವಿರುದ್ಧವಾಗಿದೆ ಎಂದು ಆರೋಪಿಸಿದ್ದಾರೆ.

ದೇವಾಲಯದ ದಿಟ್ಟಂ ಎನ್ನುವುದು ಹಿಂದಿನಿಂದ ಬರೆದಿಟ್ಟಿರುವ ಪೂಜಾ ಪದ್ಧತಿ. ಇದು ಯಾರದ್ದೋ ಸ್ವಂತ ಆಸ್ತಿಯಲ್ಲ, ಸಮಸ್ತ ಹಿಂದೂ ಧರ್ಮದ ಆಸ್ತಿ. ಪದ್ಧತಿ ಬದಲಾಯಿಸಬಾರದು, ವ್ಯವಸ್ಥೆ ಹೆಚ್ಚಿಸಬೇಕು. ಸಂಕಲ್ಪ ಮಾಡುವವರಲ್ಲಿ ತೊಂದರೆ ಇದ್ದರೆ ಅವರನ್ನು ಬದಲಾಯಿಸಬೇಕು, ಪದ್ಧತಿಯನ್ನಲ್ಲ ಎಂದು ಅವರು ಆಗ್ರಹಿಸಿದ್ದಾರೆ. ಒತ್ತಾಯ ಈಡೇರದಿದ್ದರೆ ನ್ಯಾಯಬದ್ಧ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ.

ಭಕ್ತರ ಪ್ರಮುಖ ಒತ್ತಾಯಗಳು:
ಆಶ್ಲೇಷ ಬಲಿಯಲ್ಲಿ ಪ್ರತ್ಯೇಕ ಸಂಕಲ್ಪವನ್ನು ಮರು ಜಾರಿ ಮಾಡಬೇಕು.
ದಿಟ್ಟಂಗೆ ವಿರುದ್ಧವಾದ ಸಾಮೂಹಿಕ ಸಂಕಲ್ಪ ಕೈಬಿಡಬೇಕು.
ಸಂಖ್ಯೆ ಹೆಚ್ಚಳದ ನೆಪದಲ್ಲಿ ಪದ್ಧತಿ ಬದಲಾಯಿಸದೆ ವ್ಯವಸ್ಥೆ ಹೆಚ್ಚಿಸಬೇಕು.
ದೇವಾಲಯದ ಹಣವನ್ನು ದುಂದುವೆಚ್ಚಕ್ಕೆ ಬಳಸಬಾರದು

LEAVE A REPLY

Please enter your comment!
Please enter your name here