







ಅಧ್ಯಕ್ಷ: ಅಬ್ದುಲ್ ರಹೀಂ ಕೋಲ್ಪೆ, ಪ್ರಧಾನ ಕಾರ್ಯದರ್ಶಿ: ಮುನೀರ್ ಆತೂರು


ಉಪ್ಪಿನಂಗಡಿ: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ವಿದ್ಯಾರ್ಥಿ ವಿಭಾಗವಾದ ಎಸ್‌ಕೆಎಸ್‌ಎಸ್‌ಎಫ್ ಇದರ ಉಪ್ಪಿನಂಗಡಿ ವಲಯ ಸಮಿತಿಯ 2026-29ನೇ ಸಾಲಿನ ವಾರ್ಷಿಕ ಮಹಾಸಭೆಯು ಉಪ್ಪಿನಂಗಡಿ ರೋಟರಿ ಕ್ಲಬ್ ಸಭಾಭವನದಲ್ಲಿ ವಲಯಾಧ್ಯಕ್ಷರಾದ ಅಬ್ದುಲ್ ಜಬ್ಬಾರ್ ಅಸ್ಲಮಿ ಕರಾಯ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಉಮರ್ ಫೈಝಿ ನೆಲ್ಯಾಡಿ ಪ್ರಾರ್ಥಿಸಿದರು. ಇಲ್ಯಾಸ್ ಅರ್ಶದಿ ಕುಂಡಾಜೆ ಉದ್ಘಾಟಿಸಿದರು. ವಲಯ ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಇಸ್ಮಾಯಿಲ್ ತಂಙಳ್ 2024-26ನೇ ಸಾಲಿನ ಆಯವ್ಯಯ ವರದಿ ಮಂಡಿಸಿದರು. ಸಭೆಯಲ್ಲಿ ಕಳೆದ ಸಾಲಿನ ಕ್ಲಸ್ಟರ್ ಹಾಗೂ ಶಾಖಾ ಮಟ್ಟದ ಸಹಚಾರಿ ಅವಾರ್ಡ್ ಹಾಗೂ ಓರ್ಗನೇಟ್ ಅವಾರ್ಡ್ಗಳನ್ನು ಅರ್ಹ ಕ್ಲಸ್ಟರ್ ಹಾಗೂ ಶಾಖೆಯ ಪದಾಧಿಕಾರಿಗಳಿಗೆ ವಿತರಿಸಲಾಯಿತು. ವಲಯ ಸಮಿತಿಯಲ್ಲಿ ಹಲವು ವರ್ಷಗಳಿಂದ ಸೇವೆಗೈದು ತನ್ನ ಸೇವಾಕ್ಷೇತ್ರವನ್ನು ಬದಲಿಸಿದ ಸಯ್ಯಿದ್ ಇಸ್ಮಾಯಿಲ್ ತಂಙಳರನ್ನು ವಲಯ ಸಮಿತಿ ವತಿಯಿಂದ ಸ್ಮರಣಿಕೆ ಹಾಗೂ ಶಾಲುಹೊಂದಿಸಿ ಬೀಳ್ಕೊಡಲಾಯಿತು.
ಜಿಲ್ಲಾ ಸಮಿತಿಯ ನಿರ್ದೇಶನದ ಮೇರೆಗೆ ಆರ್‌ಒ, ಆರ್‌ಪಿಗಳಾಗಿ ಆಗಮಿಸಿದ ಯಾಸರ್ ಕೌಸರಿ, ಯಾಸಿರ್ ಚಿಬಿದ್ರೆ, ಶಾಫೀ ಪಾಪೆತ್ತಡ್ಕ, ವಲಯ ಮೇಲುಸ್ತುವಾರಿ ಬಾತಿಷ್ ಹಾಜಿ ಪಾಟ್ರಕ್ಕೋಡಿ ಸಲಹೆ ಸೂಚನೆ ನೀಡಿ, 2026-29ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಿದರು. ನೂತನ ಅಧ್ಯಕ್ಷರಾಗಿ ಅಬ್ದುಲ್ ರಹೀಂ ಕೋಲ್ಪೆ, ಪ್ರಧಾನ ಕಾರ್ಯದರ್ಶಿಯಾಗಿ ಮುನೀರ್ ಆತೂರು, ಕೋಶಾಧಿಕಾರಿಯಾಗಿ ಯೂಸುಫ್ ಹಾಜಿ ಉಪ್ಪಿನಂಗಡಿ, ವರ್ಕಿಂಗ್ ಕಾರ್ಯದರ್ಶಿಯಾಗಿ ಸಫ್ವಾನ್ ಬಾಖವಿ ಮಾಪಾಲ್ ಆಯ್ಕೆಯಾದರು.
ಉಳಿದಂತೆ ಉಪಾಧ್ಯಕ್ಷರಾಗಿ ಮುಹಮ್ಮದ್ ಕರುವೇಲು, ಪಿ.ಎ.ಅಸ್ಲಮಿ ಮರ್ದಾಳ, ಅಬ್ದುಲ್ ಲತೀಫ್ ಕರಾಯ, ಜೊತೆ ಕಾರ್ಯದರ್ಶಿಯಾಗಿ ಎನ್.ಸಿದ್ಧೀಕ್, ಎಂ.ಜಿ. ಅನ್ಸಾರಿ ಹಿರೆಬಂಡಾಡಿ, ಅಬ್ದುಲ್ ಜಬ್ಬಾರ್ ಅಸ್ಲಮಿ ಕರಾಯ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಝಾಕ್ ಬಿಳಿಯೂರು, ಅಬ್ದುಲ್ ಹಮೀದ್ ಕುಂಡಾಜೆ, ಮುಹಮ್ಮದ್ ಕೂಟೇಲು, ಹಫೀಝ್ ಉಪ್ಪಿನಂಗಡಿ, ಅನ್ಸೀಫ್ ಗೋಳಿತೊಟ್ಟು, ಆಸೀಫ್ ಜಿ.ಎಂ. ಗಂಡಿಬಾಗಿಲು, ಕೆ.ಎಂ. ಸಿದ್ದೀಕ್ ಫೈಝಿ ಕರಾಯ, ಹಾರೀಸ್ ನೇರಂಕಿ, ಫೈಝಲ್ ಬಿಳಿಯೂರು, ತುಫೈಲ್ ಅಝ್ಹರಿ ಹಿರೆಬಂಡಾಡಿ, ಝುನೈಫ್ ಕೋಲ್ಪೆ, ಜಿಲ್ಲಾ ಕೌನ್ಸಿಲರ್ಸ್ ಆಗಿ ಹಾರೀಸ್ ಕೌಸರಿ ಕೋಲ್ಪೆ, ಪಿ.ಎ. ಅಸ್ಲಮಿ ಮರ್ದಾಳ, ಅಝೀಝ್ ಫೈಝಿ ಕರಾಯ, ಕೆ.ಎಚ್. ಅಬ್ದುಲ್ ಲತೀಫ್ ಕರಾಯ, ಅಶ್ರಫ್ ಕೋರೆಪದವು, ಮುಹಮ್ಮದ್ ಕರುವೇಲು, ಮುಸ್ತಫಾ ಕೆ.ಪಿ., ಜಬ್ಬಾರ್ ಉಪ್ಪಿನಂಗಡಿ, ಯೂಸುಫ್ ಬೈಲಂಗಡಿ, ಉಮರ್ ಫೈಝಿ ನೆಲ್ಯಾಡಿ, ಆಸಿಫ್ ಜಿ.ಎಂ. ಗಂಡಿಬಾಗಿಲು, ಝಖರಿಯಾ ಮುಸ್ಲಿಯಾರ್ ಆತೂರು, ಅಝೀಝ್ ಪಾಲ್ತಾಡಿ, ಹಾರಿಸ್ ರಹ್ಮಾನಿ ಕೋಲ್ಪೆ, ಜಬ್ಬಾರ್ ಅಸ್ಲಮಿ ಕರಾಯ ಇವರನ್ನು ಆಯ್ಕೆ ಮಾಡಲಾಯಿತು. ಯೂಸುಫ್ ಹಾಜಿ ಉಪ್ಪಿನಂಗಡಿ ಸ್ವಾಗತಿಸಿ, ವರ್ಕಿಂಗ್ ಕಾರ್ಯದರ್ಶಿ ಸಫ್ವಾನ್ ಬಾಖವಿ ಮಾಪಾಲ್ ವಂದಿಸಿದರು.













