ಪಿ.ಎಸ್.ಎಫ್ ವತಿಯಿಂದ ಕುಂಬ್ರ ಮರ್ಕಝ್ ಬೆಳ್ಳಿಹಬ್ಬ ಪ್ರಯುಕ್ತ 25 ವಿದ್ಯಾರ್ಥಿನಿಯರಿಗೆ ಸ್ಕಾಲರ್ಶಿಪ್, ಉಚಿತ ಔಷದಿ ವಿತರಣೆ, ಪ್ರತಿಭಾ ಪುರಸ್ಕಾರ

0

ಪುತ್ತೂರು: ಪುತ್ತೂರು ಸುನ್ನೀ ಫೌಂಡೇಶನ್ ಇದರ ವತಿಯಿಂದ ಸಂಘಟನೆಯ ವಿಶೇಷ ಸಭೆ ಕುಂಬ್ರ ಮರ್ಕಝುಲ್ ಹುದಾದಲ್ಲಿ ನಡೆಯಿತು.ಸಭೆಯಲ್ಲಿ ಸಿಲ್ವರ್ ಜ್ಯೂಬಿಲಿ ಆಚರಣೆಯ ಹಂತದಲ್ಲಿರುವ ಕುಂಬ್ರ ಮರ್ಕಝ್ ಕಾಲೇಜಿನ 25 ನೇ ವಾರ್ಷಿಕ ಸಮ್ಮೇಳನದ ಭಾಗವಾಗಿ 25 ಬಡ ವಿದ್ಯಾರ್ಥಿನಿಯರಿಗೆ ಸ್ಕಾಲರ್ಶಿಪ್ ವಿತರಣೆ, 25 ಪ್ರತಿಭಾವಂತ ವಿದ್ಯಾರ್ಥಿನಿಯರನ್ನು ಗುರುತಿಸಿ ಅವರಿಗೆ ಗೌರವ ಕಿಟ್ ನೀಡುವುದು, 25 ಮೊಹಲ್ಲಾಗಳಲ್ಲಿ ಸಮ್ಮೇಳನದ ಕಟೌಟ್ ಅಳವಡಿಸುವುದು, 25 ರೋಗಿಗಳಿಗೆ ಔಷಧ ವಿತರಣೆ ಮತ್ತು ಸಮ್ಮೇಳನ ಪ್ರಯುಕ್ತ ಬರಹ ಸ್ಪರ್ಧೆ ನಡೆಸಲು ತಿರ್ಮಾನಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಪಿಎಸ್ಎಫ್ ಅಧ್ಯಕ್ಷ ಸಿದ್ದೀಕ್ ಮುಸ್ಲಿಯಾರ್ ಕುಂಡಡ್ಕ ವಹಿಸಿದ್ದರು.ಪಿಎಸ್ಎಫ್ ನಿರ್ದೇಶಕರಾದ ಅಬೂಬಕ್ಕರ್ ಸಅದಿ ಮಜೂರು, ಉಪಾಧ್ಯಕ್ಷರಾದ ಕೆ.ಇ ಅಬೂಬಕ್ಕರ್, ಮೂಸಾ ಚೆಲ್ಯಡ್ಕ, ಕೋಶಾಧಿಕಾರಿ ಮುಹಮ್ಮದ್ ಮೈದಾನಿಮೂಲೆ, ಸಾಂತ್ವನ ವಿಭಾಗದ ಕಾರ್ಯದರ್ಶಿ ರಫೀಕ್ ಸಖಾಫಿ ಬಳ್ಳಾರಿ, ಕಾರ್ಯದರ್ಶಿ ಅಝೀಝ್ ರಝ್ವಿ ಮಾಡಾವು, ಅಬ್ದುಲ್ ರಹ್ಮಾನ್ ಮದನಿ ಬನ್ನೂರು ಮೊದಲಾದವರು ಸಾಂದರ್ಭಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಹಂಝ ಸರ್ವೆ ಸ್ವಾಗತಿಸಿದರು.

LEAVE A REPLY

Please enter your comment!
Please enter your name here