







ಈಶ್ವರಮಂಗಲ: ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ, ನೂತನವಾಗಿ ನಿರ್ಮಾಣಗೊಳ್ಳಲಿರುವ ಕಿನ್ನಿಮಾಣಿ-ಪೂಮಾಣಿ ಹಾಗೂ ಪಿಲಿಚಾಮುಂಡಿ ದೈವಗಳ ಚಾವಡಿಯ ನಿರ್ಮಾಣಕ್ಕೆ ಭೂಮಿಪೂಜೆ ಅ.24ರಂದು ನಡೆಯಿತು.



ಬೆಳಗ್ಗೆ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ, ಕುಂಟಾರು ಗುರು ತಂತ್ರಿಗಳು ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಶಿಲ್ಪಿ ರಮೇಶ್ ಕಾರಂತ್ ಬೆದ್ರಡ್ಕ ನೇತೃತ್ವದಲ್ಲಿ ನೂತನ ಚಾವಡಿಯ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು.




ಈ ವೇಳೆ ದೇವಸ್ಥಾನದ ಪವಿತ್ರಪಾಣಿ ಗೋಪಾಲಕೃಷ್ಣ ಕುಂಜತ್ತಾಯ, ಪ್ರಧಾನ ಅರ್ಚಕ ರವೀಂದ್ರ ಮಾಣಿಲತ್ತಾಯ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ರತನ್ ಕುಮಾರ್ ನಾಯಕ್ ಕರ್ನೂರು ಗುತ್ತು, ಅಧ್ಯಕ್ಷ ಮಂಜುನಾಥ ರೈ ಸಾಂತ್ಯ, ಉಪಾಧ್ಯಕ್ಷ ನಾಗಪ್ಪ ಗೌಡ ಬೊಮ್ಮೆಟ್ಟಿ, ಆನಂದ ರೈ ಸಾಂತ್ಯ, ಸದಾಶಿವ ರೈ ನಡುಬೈಲು, ಅಚ್ಯುತ ಮಣಿಯಾಣಿ ಸಾಂತ್ಯ ಮತ್ತು ಕೋಶಾಧಿಕಾರಿ ದೀಪಕ್ ಮುಂಡ್ಯ, ಜಯಪ್ರಕಾಶ್ ಶೆಟ್ಟಿ ನೂಜಿಬೈಲು, ಸುರೇಶ್ ಆಳ್ವ ಸಾಂತ್ಯ, ಕೃಷ್ಣಪ್ರಸಾದ್ ಭಟ್ ಅಮ್ಮಂಕಲ್ಲು, ನವೀನ್ ಕೇಕುಣ್ಣಾಯ ಮುಂಡ್ಯ, ಗಿರೀಶ್ ರೈ ಮರಕ್ಕಡ, ರಾಮ್ ರತನ್ ನಾಯ್ಕ್ ಉಜಂಪಾಡಿ, ರಾಮ್ ಪ್ರಸಾದ್ ಆಳ್ವ ಮೇನಾಲ, ಅಶೋಕ್ ರೂ ನೂಜುಬೈಲು, ಪ್ರದೀಪ್ ರೈ ಮೇನಾಲ, ಕೃಷ್ಣ ರಾಜ್ ಭಂಡಾರಿ ಮೇನಾಲ, ವಿಕ್ರಂ ರೈ ಸಾಂತ್ಯ, ಪೂರ್ಣಚಂದ್ರ ರೈ ನೆಲ್ಲಿತಡ್ಕ, ಶರತ್ ರೈ ನೆಲ್ಲಿತಡ್ಕ, ಸತೀಶ್ ಸುರುಳಿಮೂಳೆ, ಹರೀಶ್ ರಾವ್ ಈಶ್ವರಮಂಗಲ, ರಮಾನಂದ ಕೋರಿಗದ್ದೆ, ಗೌರೀಶ್ ಚಿಮಿನಿಗುಡ್ಡೆ, ರಮೇಶ್ ಪೂಜಾರಿ ಮುಂಡ್ಯ, ಆನಂದ ಗೌಡ ಕೆಮ್ಮತ್ತಡ್ಕ, ಮೋಹನಾಂಗಿ ಬೀಜಂತ್ತಡ್ಕ, ಸವಿತಾ ರೈ ನೆಲ್ಲಿತಡ್ಕ, ಗಾಯತ್ರಿ ಕತ್ರಿಬೈಲು, ವಸಂತಿ ಮುಂಡ್ಯ, ಪುಷ್ಪಾವತಿ ಸಾಂತ್ಯ, ವಕೀಲ ಚಿನ್ಮಯ್ ರೈ ನಡುಬೈಲು, ಸನತ್ ರೈ ಮೂಡಾಯೂರು, ಬಾಲಕೃಷ್ಣ ರೈ ಮುನ್ನಗದ್ದೆ, ಅಮರನಾಥ ಆಳ್ವ, ಕೊರಗಪ್ಪ ನಾಯ್ಕ ಕಲ್ಲಾಜೆ, ದೇವಪ್ಪ ಪೂಜಾರಿ ಮಾಡದಗುಡ್ಡೆ, ಪ್ರಸನ್ನ ರೈ, ಜಯಕರ ರೈ ಬಂಟುಕಲ್ಲು, ರಘುನಾಥ ರೈ ಬೆದ್ರಾಡಿ, ಜಯಂತ ರೈ ಮೇನಾಲ, ಶಿವರಾಮ ಕತ್ರಿಬೈಲು, ಜಯಾನಂದ ಕೋರಿಗದ್ದೆ, ಕೇಶವ ಕೋರಿಗದ್ದೆ, ನಾರಾಯಣ ಗೌಡ, ಜಯಚಂದ್ರ ಶೇರಾಜೆ, ಶೇಖರ ಪೂಜಾರಿ ಮುಂಡ್ಯ, ನಿವೃತ್ತ ಉಪ ತಹಶೀಲ್ದಾರರು ರಾಮಣ್ಣ ನಾಯ್ಕ್, ನಾರಾಯಣ ರೈ ಬೆದ್ರಾಡಿ ಹಾಗೂ ನಾರಾಯಣ ರೈ ಅಂಕೋತಿಮಾರು ಸೇರಿದಂತೆ ಹಲವು ಗಣ್ಯರು, ಸಮಿತಿ ಸದಸ್ಯರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.










