







ಪುತ್ತೂರು : ಐಕ್ಯ ಕಲಾ ಸೇವಾ ಟ್ರಸ್ಟ್ (ರಿ.), ಪುತ್ತೂರು ಇದರ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭವು ಅ.24 ರಂದು ಬೆದ್ರಾಳದಲ್ಲಿ ನಡೆಯಿತು.


ಟ್ರಸ್ಟ್ನ ನೂತನ ಅಧ್ಯಕ್ಷರಾಗಿ ದಕ್ಷಿತ್ ಎಸ್. ಎಂ., ಕಾರ್ಯದರ್ಶಿಯಾಗಿ ಚೇತನ್ ಕುಮಾರ್ ಎಂ., ಖಜಾಂಚಿಯಾಗಿ ಕಾರ್ತಿಕ್ ಕೆ., ಲೆಕ್ಕಪರಿಶೋಧಕರಾಗಿ ಅವಿನಾಶ್ ವಿ. ಆರ್. ಹಾಗೂ ಜೊತೆ ಕಾರ್ಯದರ್ಶಿಯಾಗಿ ಆದರ್ಶ್ ಅವರು ಅಧಿಕಾರ ಸ್ವೀಕರಿಸಿದರು.




ಸಭೆಯಲ್ಲಿ ಟ್ರಸ್ಟ್ನ ಮುಂದಿನ ಒಂದು ವರ್ಷದ ಕಾರ್ಯ ಯೋಜನೆಗಳ ಕುರಿತು ಚರ್ಚಿಸಿ, ವಿವಿಧ ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಯಿತು.










