ಮುರುಳ್ಯ ರಕ್ತೇಶ್ವರಿ ಸಾನಿಧ್ಯ ಭೂಮಿ ವಕ್ಫ್ ಬೋರ್ಡ್ ಕಾಯ್ದಿರಿಸಿದ ವಿಚಾರ: ಪ್ರತಿಭಟನೆಗೆ ಸುಳ್ಯ ಬಿಜೆಪಿ, ಶಾಸಕಿ ಭಾಗೀರಥಿ ಮುರುಳ್ಯ ಬೆಂಬಲ

0

ಕಾಣಿಯೂರು: ರಕ್ತೇಶ್ವರಿ ಸಾನಿಧ್ಯವುಳ್ಳ ಹಿಂದೂಗಳ ಕೃಷಿ ಭೂಮಿಯನ್ನು ವಕ್ಫ್ ಬೋರ್ಡ್ ಅಕ್ರಮವಾಗಿ ಮುಸ್ಲಿಂ ದಫನ ಭೂಮಿಯನ್ನಾಗಿ ಕಾಯ್ದಿರಿಸಿ ಹೊರಡಿಸಿರುವ ಆದೇಶದ ವಿರುದ್ಧ ಹಿಂದೂ ಹಿತರಕ್ಷಣಾ ವೇದಿಕೆ ಮುರುಳ್ಯ ವತಿಯಿಂದ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನಾ ಸಭೆಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದ್ದಾರೆ.

“ಈ ಭೂಮಿ ನೂರಾರು ವರ್ಷಗಳಿಂದ ಹಿಂದೂಗಳು ಕೃಷಿ ಮಾಡಿಕೊಂಡು ಬಂದಿರುವ ಭೂಮಿಯಾಗಿದ್ದು, ರಕ್ತೇಶ್ವರಿ ದೇವಸ್ಥಾನದ ಸಮೀಪದಲ್ಲಿದೆ. ಯಾವುದೇ ದಾಖಲೆ, ವಿಚಾರಣೆ ಇಲ್ಲದೆ ಏಕಾಏಕಿ ವಕ್ಫ್ ಬೋರ್ಡ್ ತನ್ನ ಆಸ್ತಿ ಎಂದು ಘೋಷಿಸಿರುವುದು ಖಂಡನೀಯ. ಇದು ಹಿಂದೂ ಸಮಾಜದ ಮೇಲೆ ನಡೆಯುವ ಲ್ಯಾಂಡ್ ಜಿಹಾದ್ ಮತ್ತು ದಬ್ಬಾಳಿಕೆ” ಎಂದು ಅವರು ಹೇಳಿದ್ದಾರೆ.

“ಈ ಅನ್ಯಾಯದ ಆದೇಶವನ್ನು ಕೂಡಲೇ ರದ್ದುಗೊಳಿಸಬೇಕೆಂದು ಒತ್ತಾಯಿಸಿ ದಿನಾಂಕ 28-10-2026, ಬುಧವಾರ ಬೆಳಗ್ಗೆ 10 ಗಂಟೆಗೆ ಮುರುಳ್ಯದಲ್ಲಿ ನಡೆಯಲಿರುವ ಪ್ರತಿಭಟನಾ ಸಭೆಯಲ್ಲಿ ಎಲ್ಲಾ ಹಿಂದೂ ಬಾಂಧವರು, ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು” ಎಂದು ಅವರು ಕರೆ ನೀಡಿದ್ದಾರೆ.

LEAVE A REPLY

Please enter your comment!
Please enter your name here