ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ಶ್ರೀರಾಮನಗರ ರೆಂಜ (ರಿ.) ಇದರ ಆಡಳಿತ ಮಂಡಳಿಯ ನೂತನ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷ : ಶ್ಯಾಮ್‌ಜಿತ್ ರೈ ಪಾಪನಡ್ಕ, ಪ್ರ.ಕಾರ್ಯದರ್ಶಿ : ಉಮೇಶ್ ಬಲ್ಲಾಳ್

ಬೆಟ್ಟಂಪಾಡಿ: ರೆಂಜ ಶ್ರೀರಾಮನಗರ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ (ರಿ.) ಇದರ ವಾರ್ಷಿಕ ಮಹಾಸಭೆಯು ಅ. 25 ರಂದು ಸಂಜೆ ಭಜನಾ ಮಂದಿರದಲ್ಲಿ ನಡೆಯಿತು.

ಈ ವೇಳೆ ಮಂದಿರದ ಆಡಳಿತ ಮಂಡಳಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಗೌರವಾಧ್ಯಕ್ಷರಾಗಿ ಕರುಣಾಕರ ಶೆಟ್ಟಿ ಕೊಮ್ಮಂಡ, ಅಧ್ಯಕ್ಷರಾಗಿ ಶ್ಯಾಮ್‌ಜಿತ್ ರೈ ಪಾಪನಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ್ ಬಲ್ಲಾಳ್ ಬೆಟ್ಟಂಪಾಡಿ ಬೀಡು, ಕೋಶಾಧಿಕಾರಿಯಾಗಿ ಕೃತೇಶ್ ಆರ್ಲಪದವು, ಜತೆ ಕಾರ್ಯದರ್ಶಿ ಯಾಗಿ ಮಧುಶ್ಯಾಮ್ ರೈ, ಸಂಚಾಲಕರಾಗಿ ಕೃಷ್ಣಪ್ಪ ಗೌಡ ಗುರುಸ್ವಾಮಿ ಆಯ್ಕೆಯಾದರು.

ಉಪಾಧ್ಯಕ್ಷರುಗಳಾಗಿ ಸತೀಶ್ ಗೌಡ ಪಾರ, ಶೇಷಪ್ಪ ರೈ ಮೂರ್ಕಾಜೆ, ಸತೀಶ್ ಕುಮಾರ್ ಕೂವೆಂಜ, ರವಿನಾಥ ಕೋನಡ್ಕ, ಜಯರಾಮ ರೈ ಮೂರ್ಕಾಜೆ, ಹರಿಣಾಕ್ಷಿ ಕೆ.ಆರ್., ಶೋಭಾವತಿ ರೆಂಜ ರವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಪ್ರತಿಮಾ ಕೆ., ಅಂಕಿತ್ ಕೆ., ಲಿಂಗಪ್ಪ, ವೀಕ್ಷಾ, ಚೇತನ್ ರೆಂಜ, ಭವಿತ್ ಕೆ., ರಂಜಿತ್ ಕೋನಡ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here