ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ರಚನೆ

0

ಪುತ್ತೂರು: ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 2026-27ನೇ ಸಾಲಿನ ಶಾಲಾಭಿವೃದ್ಧಿ ಸಮಿತಿ ಪುನರ್ ರಚನೆ ಮಾಡಲಾಯಿತು.

ಈ ಸಂದರ್ಭದಲ್ಲಿ ನಿರ್ಗಮಿತ ಅಧ್ಯಕ್ಷ ವಿಘ್ನೇಶ್ ವಿಶ್ವಕರ್ಮ, ಮಾಲಕರು ಭಾವನಾ ಕಲಾ ಆರ್ಟ್ಸ್ ಮಾತನಾಡಿ, “ವಿವೇಕಾನಂದ ಕನ್ನಡ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೀಯ ಸ್ಥಾನದಲ್ಲಿದ್ದು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಅಸಾಧ್ಯವಾದರೂ ಶಾಲಾ ಆಡಳಿತ ಸಮಿತಿ, ಶಿಕ್ಷಕ-ಪೋಷಕ ವೃಂದದವರು ತೋರಿದ ಪ್ರೀತಿ ಮತ್ತು ಆದರ ಸದಾ ಸ್ಮರಣೀಯ. ಮುಂದೆಯೂ ಶಾಲೆಯೊಂದಿಗೆ ಭಾವನಾತ್ಮಕವಾಗಿ ಜೋಡಿಕೊಂಡಿರುತ್ತೇನೆ” ಎಂದು ಹೇಳಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

ಶಾಲಾ ಮುಖ್ಯ ಗುರುಗಳಾದ ಆಶಾ ಬೆಳ್ಳಾರೆ ಪ್ರಾಸ್ತಾವಿಕ ಮಾತುಗಳಲ್ಲಿ ಸಮಿತಿಗಳು ಶಾಲಾ ಭೌತಿಕ, ಶೈಕ್ಷಣಿಕ, ಪಠ್ಯಪೂರಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ಚಂದ್ರ ಅವರ ಸಭಾಧ್ಯಕ್ಷತೆಯಲ್ಲಿ ಪದಾಧಿಕಾರಿಗಳ ಜವಾಬ್ದಾರಿ ಸ್ವೀಕಾರ ಪ್ರಕ್ರಿಯೆ ನಡೆಯಿತು. ನೂತನ ಅಧ್ಯಕ್ಷರಾಗಿ ಅಪ್ಪು ಪಾಟಾಳಿ, ಜೊತೆ ಕಾರ್ಯದರ್ಶಿಯಾಗಿ ರೇಖಾ, ಕೋಶಾಧಿಕಾರಿಯಾಗಿ ಪ್ರತಿಭಾ ಆಯ್ಕೆಯಾದರು.

ಶಿಶುಮಂದಿರದಿಂದ 10ನೇ ತರಗತಿಯವರೆಗಿನ ಪೋಷಕ ಪ್ರತಿನಿಧಿಗಳು ಉಪಸ್ಥಿತರಿದ್ದರು. ಮಾತೃಭಾರತಿಯ ಅಧ್ಯಕ್ಷೆ ಶ್ರೀದೇವಿ, ಅನ್ನಪೂರ್ಣಾ ಸಮಿತಿ ಅಧ್ಯಕ್ಷೆ ಶ್ಯಾಮಲಾ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಹಶಿಕ್ಷಕಿ ಅನುರಾಧಾ ಪ್ರಾರ್ಥಿಸಿದರು, ಸ್ವಾತಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here